Woman Thief ಸಾಂದರ್ಭಿಕ ಚಿತ್ರ 
ದೇಶ

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳಿಯ ಖತರ್ನಾಕ್ ಆಟ: ಸಿಕ್ಕಿಬಿದ್ದಾಗ ಮಹಿಳೆ ಮಾಡಿದ್ದೇನು ಗೊತ್ತಾ? Woman Thief

ಜೈಪುರ: ಮನೆಯೊಂದರಲ್ಲಿ ಆಭರಣಗಳನ್ನು ಕದಿಯುತ್ತಿದ್ದ ಮಹಿಳೆಯೊಬ್ಬಳು ಸಿಸಿಟಿವಿಯಲ್ಲಿ ಸೆರೆಯಾದ ನಂತರ ಮನೆಯ ಮಾಲೀಕರು ಆಕೆಯನ್ನು ಪ್ರಶ್ನಿಸಿದಾಗ, ತಪ್ಪೊಪ್ಪಿಕೊಳ್ಳುವ ಬದಲಾಗಿ ತಾನೇ ವಿವಸ್ತ್ರಗೊಂಡು, ಮಾಲೀಕರಿಗೇ (Woman Thief) ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ಜೈಪುರದ ಮುಹಾನಾದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಮನೆಯ ಮಾಲೀಕರು ತಮ್ಮ ಫ್ಲಾಟ್‌ನಲ್ಲಿ ಪದೇ ಪದೇ ಬೆಲೆಬಾಳುವ ವಸ್ತುಗಳು ಕಾಣೆಯಾಗುತ್ತಿರುವುದನ್ನು ಗಮನಿಸಿ, ತೀವ್ರ ಅನುಮಾನ ವ್ಯಕ್ತಪಡಿಸಿ ಮನೆಯೊಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಇದಕ್ಕೂ ಮುನ್ನ ಇದೇ ಫ್ಲಾಟ್‌ನಿಂದ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ ನಗದನ್ನು ಕಳವು ಮಾಡಲಾಗಿತ್ತು ಎನ್ನಲಾಗಿದೆ. ಆದಾಗ್ಯೂ, ಪಕ್ಕದ ಫ್ಲಾಟ್‌ನಲ್ಲಿ ವಾಸಿಸುತ್ತಿರುವ ಮಹಿಳೆಯ ಮೇಲೆ ಅನುಮಾನವಿದೆ ಎಂದು ದೂರುದಾರರು ಹೇಳಿಕೊಂಡಿದ್ದರು ಎಂದು ತಿಳಿಸಿದ್ದಾರೆ.

ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳತನ 

ಗುರುವಾರ, ಮನೆ ಮಾಲೀಕರು ಮತ್ತು ಅವರ ಕುಟುಂಬ ಹೊರಗೆ ಹೋಗಿರುವ ಸಮಯವನ್ನು ನೋಡಿಕೊಂಡ ಮಹಿಳೆಯೊಬ್ಬರು ಅವರ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮಾಲೀಕರು ತಮ್ಮ ಮೊಬೈಲ್​ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ಮಹಿಳೆ ತಮ್ಮ ಫ್ಲಾಟ್​ಗೆ ಪ್ರವೇಶಿಸುತ್ತಿರುವುದನ್ನು ನೋಡಿದ್ದಾರೆ. 
ಈ ವೇಳೆ ಆಕೆ ಬೀರು ತೆರೆದು ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹುಡುಕಾಡುವುದನ್ನು ತೋರಿಸಲಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಮನೆ ಮಾಲೀಕ ನೆರೆಹೊರೆಯವರಿಗೆ ಎಚ್ಚರಿಕೆ ನೀಡಿ ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್​ ಮಾಡುವಂತೆ ಸೂಚನೆ ನೀಡಿದ್ದಾರೆ. 
ಮನೆ ಮಾಲೀಕರು ಹಿಂತಿರುಗಿದಾಗ, ಮಹಿಳೆ ಇನ್ನೂ ಮನೆಯೊಳಗೆ ಇದ್ದಳು ಮತ್ತು ಬೀಗ ಹಾಕಿದ ಗೇಟ್ ಹೊರಗೆ ಅವಳನ್ನು ಎದುರಿಸಲಾಯಿತು. ಮನೆ ಮಾಲೀಕರು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಘರ್ಷಣೆಯ ಸಮಯದಲ್ಲಿ ಅವಳು ಕೂಗುತ್ತಾ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು.

ವಿಡಿಯೋದಲ್ಲಿ ಸೆರೆಯಾಯ್ತು ಮಹಿಳೆಯ ಅಸಲಿ ಮುಖ!

ರೆಕಾರ್ಡ್ ಮಾಡಿರುವ ಆ ವಿಡಿಯೋದಲ್ಲಿ, ಮನೆಯ ಮಾಲೀಕರು ಹಿಂತಿರುಗಿದಾಗ ಮಹಿಳೆಯು ತಾನು ಸಿಕ್ಕಿಬಿದ್ದರೂ ಕಿಂಚಿತ್ತೂ ಭಯವಿಲ್ಲದೆ ಮಾಲೀಕನ ಮೇಲೆಯೇ ಕಿರುಚಾಡುತ್ತಾ, ಗದರಿಸುತ್ತಾ ಭೀತಿ ಹುಟ್ಟಿಸಲು ಯತ್ನಿಸುತ್ತಿರುವುದನ್ನು ಕಾಣಬಹುದು. 
ಈ ವೇಳೆ ಮಹಿಳೆ ನನ್ನ ಬಟ್ಟೆಗಳನ್ನು ನಾನೇ ಹರಿದುಕೊಳ್ಳುತ್ತೇನೆ. ಆಮೇಲೆ ಪೊಲೀಸರು ಬಂದು ನಿನ್ನನ್ನೇ ಹಿಡಿದುಕೊಂಡು ಹೋಗುತ್ತಾರೆ ಎಂದು ಜೋರಾಗಿ ಕೂಗಾಡುತ್ತಾ, ಸುಳ್ಳು ಕೇಸ್ ದಾಖಲಿಸುವ ನೇರ ಮುನ್ನೆಚ್ಚರಿಕೆಯನ್ನು ಮಾಲೀಕನಿಗೆ ಬೆದರಿಸುತ್ತಿರುವುದಾಗಿ ಆರೋಪಿಸಲಾಗಿದೆ.
ಈ ಘಟನೆ ನಡೆಯುತ್ತಿದ್ದಂತೆಯೇ ಮಾಲೀಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಆದಾಗ್ಯೂ, ಮಾಹಿತಿ ಬಂದ ಆಧಾರದ ಮೇಲೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಪ್ರಸ್ತುತ ಮನೆಯ ಮಾಲೀಕರು ನೀಡಿರುವ ಅಧಿಕೃತ ದೂರಿನ ಆಧಾರದ ಮೇಲೆ ಮುಹಾನಾ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ಕಳ್ಳತನ ಮತ್ತು ಸುಳ್ಳು ದೂರು ದಾಖಲಿಸುವ ಬೆದರಿಕೆ ಒಡ್ಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ (ಏಜೆನ್ಸೀಸ್​).