ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ತ್ರಿಷಾ
- ವಿಜಯ್ ಜೊತೆ ವಿಚ್ಛೇದನ ಹಿಂಪಡೆದ ಸಂಗೀತಾ
- ಕಾವೇರಿ ಪ್ರತಿಭಟನೆ ವೇಳೆ ತ್ರಿಷಾ ಹೆಸರನ್ನು ಪ್ರಸ್ತಾವಿಸಿದ್ದ ಉದಯನಿಧಿ ಸ್ಟಾಲಿನ್
- ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ತ್ರಿಷಾ
ಚೆನ್ನೈ: ತಮಿಳು ನಟ ಹಾಗೂ ಮುಖ್ಯಮಂತ್ರಿ ಜೋಸೆಫ್ ವಿಜಯ್ ಪತ್ನಿ ಸಂಗೀತಾ ವಿಚ್ಛೇದನ ಅರ್ಜಿ ವಾಪಸ್ ಪಡೆದ ಮತ್ತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಬಂಧನ-ಬಿಡುಗಡೆಯ ನಂತರ ತ್ರಿಷಾ (Trisha Viral Post) ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕಾಂಟ್ರವರ್ಸಿಗಳ ನಂತರ ತ್ರಿಷಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳು ಈಗ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿವೆ.
ಈ ವಯಸ್ಸಿನಲ್ಲಿ ನಾಟಕ ಮುಜುಗರದ ಸಂಗತಿ...
ನಟಿ ತ್ರಿಷಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಮಾತುಗಳು ಯಾರನ್ನು ಉದ್ದೇಶಿಸಿವೆ? ಎಂಬ ಬಗ್ಗೆ ನೆಟ್ಟಿಗರು ಕಣ್ಣುಬಿಟ್ಟು ಕೂತಿದ್ದಾರೆ. ಈ ವಯಸ್ಸಿನಲ್ಲಿ ನಾಟಕ ಮಾಡೋದು ನಿಜಕ್ಕೂ ಮುಜುಗರದ ಸಂಗತಿ... ಹೋಗಿ ಸ್ವಲ್ಪ ಹಣ ಸಂಪಾದಿಸಿ, ನಿಮ್ಮ ಪಾಡಿಗೆ ನೀವು ಶಾಂತಿಯಿಂದ ಇರಿ ಎಂದು ಕಟುವಾಗಿ ಬರೆದುಕೊಂಡಿದ್ದಾರೆ. ಇದರ ಜೊತೆಗೆ, ಇನ್ನೊಂದು ಪೋಸ್ಟ್‌ನಲ್ಲಿ ನೀವು ಒಂದು ಕಾಲದಲ್ಲಿ ಪ್ರಾರ್ಥಿಸಿದ ಜೀವನದಿಂದಲೇ ಹೊರಬೀಳುವುದು ಎಷ್ಟು ದೊಡ್ಡ ಸೌಭಾಗ್ಯ ಎಂದು ಬರೆದಿದ್ದಾರೆ.
ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದಿದ್ದರೂ, ಈ ಪೋಸ್ಟ್‌ಗಳು ವಿಜಯ್ ಪತ್ನಿ ಸಂಗೀತಾ ಮತ್ತು ಉದಯನಿಧಿಯನ್ನೇ ಗುರಿಯಾಗಿಸಿ ಬರೆಯಲಾಗಿದೆ ಎನ್ನುವುದು ನೆಟ್ಟಿಗರ ಲೆಕ್ಕಾಚಾರವಾಗಿದೆ. ಹಾಗೆಯೇ ತ್ರಿಷಾ ತಾಯಿ ಉಮಾ ಕೃಷ್ಣನ್, "ಲಾಸ್ಟ್ ಒನ್ ಬೆಸ್ಟ್ ಒನ್" ಎಂದು ಬರೆದುಕೊಂಡು, ವ್ಯಾಯಾಮ ಮಾಡಿ, ಸ್ಕಿನ್ ಕೇರ್ ಮಾಡಿ, ನೀರು ಕುಡಿಯಿರಿ, ಹಣ ಸಂಪಾದಿಸಿ, ಜನರ ಜೊತೆ ಒಳ್ಳೆಯವರಾಗಿರಿ, ನಿಮ್ಮಷ್ಟಕ್ಕೆ ನೀವಿರಿ ಎಂಬ ಪೋಸ್ಟ್ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ವಿಜಯ್ ವಿಚ್ಛೇದನ ವಾಪಸ್ & ಉದಯನಿಧಿ ವಿವಾದ
ನಟ ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಅವರು ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ಹೂಡಿದ್ದ ವಿಚ್ಛೇದನ ಅರ್ಜಿಯನ್ನು ಇತ್ತೀಚೆಗೆ ಹಿಂತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ತ್ರಿಷಾ ಆಸ್ಟ್ರೇಲಿಯಾದಿಂದ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಸಾಕಷ್ಟು ಸಮಯದಿಂದ ವಿಜಯ್ ಮತ್ತು ತ್ರಿಷಾ ನಡುವಿನ ಒಡನಾಟದ ಬಗ್ಗೆ ಹಲವು ಗಾಸಿಪ್‌ಗಳು ಹರಿದಾಡುತ್ತಲೇ ಇವೆ. ಆದರೆ ಈ ಬಗ್ಗೆ ಇಬ್ಬರೂ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಇನ್ನೊಂದೆಡೆ, ತಂಜಾವೂರಿನಲ್ಲಿ ನಡೆದ ಕಾವೇರಿ ಪ್ರತಿಭಟನೆಯ ವೇಳೆ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆಗಳು ಮತ್ತು ವಿವಾದಗಳು ತಮಿಳುನಾಡಿನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದ್ದವು. ಈ ವಿವಾದದ ನಡುವೆ ಉದಯನಿಧಿ ಬಂಧನವಾಗಿ, ಬಳಿಕ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ಬಿಡುಗಡೆಯಾಗಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ತ್ರಿಷಾ ಈಗ ಹಂಚಿಕೊಂಡಿರುವ ಪೋಸ್ಟ್‌ಗಳು ಎಲ್ಲರ ಹುಬ್ಬೇರುವಂತೆ ಮಾಡಿದೆ, (ಏಜನ್ಸೀಸ್).