Supriya Sule (ಚಿತ್ರ Instagram) 
ದೇಶ

2 ಗಂಟೆಗಳಿಂದ ಇಲ್ಲೇ ಇದ್ದೇವೆ; ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಜಾಮ್‌ನಲ್ಲಿ ಸಂಸದೆ ಸುಪ್ರಿಯಾ ಸುಳೆ ಪರದಾಟ! Supriya Sule

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರ ದಿನದಂದು ಪುಣೆಯಲ್ಲಿ ನಡೆಯಬೇಕಿದ್ದ ಧ್ವಜಾರೋಹಣ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂಸದೆ ಸುಪ್ರಿಯಾ ಸುಳೆ
  • ಯಶವಂತರಾವ್ ಚೌಹಾಣ್ ಎಕ್ಸ್‌ಪ್ರೆಸ್‌ವೇಯ ಬಹುನಿರೀಕ್ಷಿತ 'ಮಿಸ್ಸಿಂಗ್ ಲಿಂಕ್' ಯೋಜನೆ ಉದ್ಘಾಟನೆ
  • 2 ಗಂಟೆಗಳಾಗಿವೆ ಆದರೂ ಟ್ರಾಫಿಕ್ ಜಾಮ್​ ಕಡಿಮೆಯಾಗುತ್ತಿಲ್ಲ ಎಂದು ವಾಹನ ಸವಾರರ ಜೊತೆ ಮಾತನಾಡಿದ ಸುಪ್ರಿಯಾ
ನವದೆಹಲಿ: ಮಹಾರಾಷ್ಟ್ರ ದಿನದಂದು ಪುಣೆಯಲ್ಲಿ ನಡೆಯಬೇಕಿದ್ದ ಧ್ವಜಾರೋಹಣ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂಸದೆ ಸುಪ್ರಿಯಾ ಸುಳೆ (Supriya Sule) ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಗೆ ಸಿಲುಕಿದ್ದಾರೆ. ಯಶವಂತರಾವ್ ಚೌಹಾಣ್ ಎಕ್ಸ್‌ಪ್ರೆಸ್‌ವೇಯ ಬಹುನಿರೀಕ್ಷಿತ 'ಮಿಸ್ಸಿಂಗ್ ಲಿಂಕ್' ಯೋಜನೆಯು ಸಾರ್ವಜನಿಕ ಬಳಕೆಗೆ ಮುಕ್ತವಾದ ದಿನದಂದೇ ಈ ಘಟನೆ ಸಂಭವಿಸಿರುವುದು ಗಮನಾರ್ಹ.

ಸುಪ್ರಿಯಾ ಸುಳೆ ಹೇಳಿದ್ದೇನು?

ಸುಪ್ರಿಯಾ ಅವರು ಸ್ಥಳದಿಂದಲೇ ಒಂದು ವಿಡಿಯೋವನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ರಸ್ತೆಯಲ್ಲಿ ನಿಂತಿರುವ ವಾಹನ ಸವಾರರೊಂದಿಗೆ ಅವರು ಮಾತನಾಡುತ್ತಿರುವುದನ್ನು ಕಾಣಬಹುದು. ಈ ವೇಳೆ 2 ಗಂಟೆಗಳಾಗಿವೆ ಆದರೂ ಟ್ರಾಫಿಕ್ ಜಾಮ್​ ಕಡಿಮೆಯಾಗುತ್ತಿಲ್ಲ ಎಂದು ಸಂಭಾಷಣೆ ನಡೆಸುತ್ತಾ ಜೈ ಮಹಾರಾಷ್ಟ್ರ ಎಂದು ಹೇಳುವುದನ್ನು ಕೇಳಬಹುದು.
ಯಶವಂತರಾವ್ ಚೌಹಾಣ್ ಎಕ್ಸ್‌ಪ್ರೆಸ್‌ವೇಯಲ್ಲಿ ಮುಂಬೈ-ಪುಣೆ 'ಮಿಸ್ಸಿಂಗ್ ಲಿಂಕ್' ಯೋಜನೆ ಇಂದು ಉದ್ಘಾಟನೆಯಾಗಿದ್ದು, ಮಹಾರಾಷ್ಟ್ರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಣೆಗೆ ತೆರಳುತ್ತಿದ್ದರು. ವಾರಾಂತ್ಯದಲ್ಲಿ ಸರ್ಕಾರಿ ರಜೆ ಇರುವುದರಿಂದ, ಅನೇಕ ಜನರು ಬೇರೆಡೆ ಪ್ರಯಾಣಿಸುತ್ತಿದ್ದರಿಂದ ಟ್ರಾಫಿಕ್​ ಜಾಮ್​ ಉಂಟಾಗಿದೆ.

ಏನಿದು ಮಿಸ್ಸಿಂಗ್​​ ಲಿಂಕ್​ ಯೋಜನೆ?

13.3 ಕಿ.ಮೀ ಉದ್ದದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮಿಸ್ಸಿಂಗ್ ಲಿಂಕ್ ಯೋಜನೆಯನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಜಾರಿಗೆ ತಂದಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಉದ್ಘಾಟಿಸಿದರು. ಇದು ರಾಜ್ಯದ ಎರಡು ಪ್ರಮುಖ ವ್ಯಾಪಾರ ಕೇಂದ್ರಗಳಾದ ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣವನ್ನು ಸುಗಮಗೊಳಿಸುವ (20 ರಿಂದ 30 ನಿಮಿಷ ಸಮಯ ಉಳಿಯಲಿದೆ) ಉದ್ದೇಶ ಹೊಂದಿದೆ.
ಮಿಸ್ಸಿಂಗ್ ಲಿಂಕ್ ಯೋಜನೆಯು ಮುಂಬೈ ಕಡೆಯ ಭಂಡಾರ್ದಾರಾ ಬಳಿ ಪ್ರಾರಂಭವಾಗಿ ಪುಣೆಗೆ ಎಕ್ಸ್​ಪ್ರೆಸ್​ಗೆ ಸಂಪರ್ಕಿಸಿ, ಟೈಗರ್​ ವ್ಯಾಲಿ ಪ್ರದೇಶದ ಮೂಲಕ ಹಾದುಹೋಗುತ್ತದೆ. ಕಡಿದಾದ ಅಪಘಾತ ಪೀಡಿತ ಹಳೆಯ ರಸ್ತೆಯನ್ನು ಬೈಪಾಸ್​ ಮಾಡುವುದರ ಜೊತೆಗೆ ಪ್ರಯಾಣವನ್ನು ಸುಗಮಗೊಳಿಸುತ್ತದೆ (ಏಜೆನ್ಸೀಸ್​).