ನವದೆಹಲಿ: ಮೂರ್ಖರೊಂದಿಗೆ ವಾದ ಮಾಡದಿರುವುದು ಸಂತೋಷದ ರಹಸ್ಯ ಎಂದು ಹೇಳಲು ಇಸ್ರೇಲ್ ವಿದೇಶಾಂಗ ಸಚಿವಾಲಯದ ಅಧಿಕೃತ ಎಕ್ಸ್ ಖಾತೆಯಲ್ಲಿ ಭಾರತದ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾಗಿರುವ ಸದ್ಗುರು ಜಗ್ಗಿ ವಾಸುದೇವ್(Sadhguru) ಅವರ ಮೀಮ್ ಅನ್ನು ಹಂಚಿಕೊಂಡಿದೆ.
ಗುರುವಾರ(ಆ. 20) ಇಸ್ರೇಲ್ ಈ ಮೀಮ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಸದ್ಗುರು ಅವರನ್ನು ಶಾಶ್ವತ ಸಂತೋಷದ ರಹಸ್ಯವೇನು? ಎಂದು ಕೇಳುತ್ತಾನೆ. ಅದಕ್ಕೆ ಸದ್ಗುರು, ಮೂರ್ಖರೊಂದಿಗೆ ವಾದ ಮಾಡಬಾರದು ಎನ್ನುತ್ತಾರೆ.
ಆದರೆ ಆ ವ್ಯಕ್ತಿ ಈ ವಾದವನ್ನು ಒಪ್ಪದೇ ಇದ್ದಾಗ ಸದ್ಗುರುಗಳ, ಹೌದು ನೀವು ಹೇಳಿದ್ದು ಸರಿ ಎನ್ನುತ್ತಾರೆ. ಸದ್ಗುರು ಜಗ್ಗಿ ವಾಸುದೇವ್ ಅವರು ಭಾರತೀಯ ಆಧ್ಯಾತ್ಮಿಕ ಗುರು, ಯೋಗಿ, ಲೇಖಕರಾಗಿದ್ದು, ಕೊಯಮತ್ತೂರಿನಲ್ಲಿರುವ ಈಶಾ ಫೌಂಡೇಶನ್ ಸಂಸ್ಥೆಯ ಸ್ಥಾಪಕರಾಗಿದ್ದಾರೆ.
ಇದು ಲಾಭದ ಉದ್ದೇಶವಿಲ್ಲದ, ಆಧ್ಯಾತ್ಮಿಕ ಮತ್ತು ಮಾನವೀಯ ಸಂಸ್ಥೆಯಾಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿದೆ. ಸದ್ಗುರುಗಳ ಆಧ್ಯಾತ್ಮಿಕ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಭಾರತ ಸರ್ಕಾರವು 2017ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಿದೆ (ಏಜೆನ್ಸೀಸ್).