ನಾಲ್ವರು ಅಪರಾಧಿಗಳ ಬಂಧನ 
ದೇಶ

ISI ಜೊತೆ ಸಂಪರ್ಕ ಹೊಂದಿದ್ದ ನಾಲ್ವರ ಬಂಧನ: ಹೈಟೆಕ್​ ಪಿಸ್ತೂಲ್‌ಗಳು ವಶ!

ನವದೆಹಲಿ: ಐಎಸ್‌ಐ ಜೊತೆ ಸಂಪರ್ಕ ಹೊಂದಿರುವ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಜಾಲವನ್ನು ಭೇದಿಸಿ, ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಕಳ್ಳಸಾಗಣೆ ಮಾಡಲಾದ ಹೈಟೆಕ್ ವಿದೇಶಿ ಪಿಸ್ತೂಲ್‌ಗಳನ್ನು ಪೂರೈಸುತ್ತಿದ್ದ ನಾಲ್ವರನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಶನಿವಾರ(ನ.22)ಬಂಧಿಸಿದೆ.
ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ಯಾಂಗ್‌ನ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. 10 ದುಬಾರಿ ವಿದೇಶಿ ಪಿಸ್ತೂಲ್‌ಗಳು ಮತ್ತು 92 ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಚೀನಾ ಮತ್ತು ಟರ್ಕಿಯಲ್ಲಿ ತಯಾರಾದ ಉನ್ನತ ದರ್ಜೆಯ ಪಿಸ್ತೂಲ್‌ಗಳನ್ನು ಪಾಕಿಸ್ತಾನದ ಮೂಲಕ ಭಾರತಕ್ಕೆ ಪೂರೈಸುತ್ತಿತ್ತು. ಅಲ್ಲದೆ, ಈ ಶಸ್ತ್ರಾಸ್ತ್ರಗಳನ್ನು ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳ ಅಪರಾಧಿಗಳಿಗೆ ಪೂರೈಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಅವರು ಮಾರಾಟ ಮಾಡಿದ ಶಸ್ತ್ರಾಸ್ತ್ರಗಳ ಸಂಖ್ಯೆ ಮತ್ತು ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ಗ್ಯಾಂಗ್‌ಗಳು ಅಥವಾ ವ್ಯಕ್ತಿಗಳನ್ನು ಪತ್ತೆಹಚ್ಚವು ಕೆಲಸ ಪೊಲೀಸರು ಆರಂಭಿಸಿದ್ದಾರೆ. ಅಲ್ಲದೆ, ಭದ್ರತಾ ಸಂಸ್ಥೆಗಳು ಮೊಬೈಲ್ ಫೋನ್‌ಗಳು, ಬ್ಯಾಂಕ್ ವಿವರಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಗ್ಯಾಂಗ್‌ನ ಇತರ ಸದಸ್ಯರು ಮತ್ತು ಅವರ ಸಂಪರ್ಕಗಳ ಬಗ್ಗೆಯೂ ತನಿಖೆ ನಡೆಸುತ್ತಿವೆ.
ಕಳೆದ ಸೋಮವಾರ ರಾಜಧಾನಿಯಲ್ಲಿ ಸಂಭವಿಸಿದ ಸ್ಫೋಟದ ನಂತರ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ(ಏಜೆನ್ಸೀಸ್​).