Shivraj Singh Chouhan | ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
ನವದೆಹಲಿ: ಪಾಕಿಸ್ತಾನದ ಗುಪ್ತಚಾರ ಸಂಸ್ಥೆಯಾದ ಐಎಸ್‌ಐ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ರನ್ನು(Shivraj Singh Chouhan) ಗುರಿಯಾಗಿಸಿಕೊಂಡಿದೆ ಎಂದು ಗೃಹ ಸಚಿವಾಲಯಕ್ಕೆ ಮಾಹಿತಿ ಬಂದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಮಧ್ಯಪ್ರದೇಶದ ಡಿಜಿಪಿಗೆ ಪತ್ರವೊಂದನ್ನು ಕಳುಹಿಸಿದ್ದು, ಚೌಹಾಣ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಗುರಿಯಾಗಿದ್ದಾರೆ ಎಂದು ತಿಳಿಸಿದೆ. ಐಎಸ್‌ಐ ಚೌಹಾಣ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ತಿಳಿದು ಬಂದಿದೆ.
ಚೌಹಾಣ್ ನಿವಾಸದ ಬಳಿ ಬಿಗಿ ಬಂದೋಬಸ್ತ್
ಭೋಪಾಲ್‌ನ 74ನೇ ಬಂಗಲೆಯಲ್ಲಿರುವ ಶಿವರಾಜ್ ಅವರ ಬಿ-8 ನಿವಾಸದ ಸುತ್ತಲೂ ಪೊಲೀಸರು ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ, ದೆಹಲಿಯಲ್ಲಿರುವ ಅಧಿಕೃತ ನಿವಾಸದಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಶಿವರಾಜ್ ಚೌಹಾಣ್ ಅವರ ಬಗ್ಗೆ ಐಎಸ್ಐ ಆಸಕ್ತಿ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಈಗಾಗಲೇ Z+ ಭದ್ರತೆ ಇತ್ತು. ಆದರೆ ಈ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಈ ಮಾಹಿತಿ ಪಡೆದ ತಕ್ಷಣ, ಸ್ಥಳೀಯ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಎರಡೂ ನಗರಗಳಲ್ಲಿ ಚೌಹಾಣ್ ಅವರ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿದವು. ಶುಕ್ರವಾರ ತಡರಾತ್ರಿ ಅವರ ಭೋಪಾಲ್ ಬಂಗಲೆಯ ಹೊರಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.
ಗೃಹ ಸಚಿವಾಲಯದಿಂದ ಕಟ್ಟುನಿಟ್ಟಿನ ಆದೇಶ
ಯಾವುದೇ ಭದ್ರತಾ ಲೋಪವಾಗದಂತೆ ನೋಡಿಕೊಳ್ಳುವಂತೆ ಗೃಹ ಸಚಿವಾಲಯವು ಸಂಬಂಧಿತ ಸಂಸ್ಥೆಗಳು ಮತ್ತು ಮಧ್ಯಪ್ರದೇಶದ ಡಿಜಿಪಿಗೆ ಆದೇಶಿಸಿದೆ. ಅಲ್ಲದೆ, ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿಯನ್ನು ಸಹ ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ಆಯುಕ್ತರಿಗೆ (ಭದ್ರತೆ) ಸೂಚನೆಗಳನ್ನು ನೀಡಲಾಗಿದೆ.
ಶಿವರಾಜ್ ಸಿಂಗ್ ಬಗ್ಗೆ ಐಎಸ್ಐ ಆಸಕ್ತಿ ಏಕೆ?
ಭದ್ರತಾ ವರ್ಧನೆಗಳ ಕುರಿತು ಗೃಹ ಸಚಿವಾಲಯದ ಪತ್ರದ ಪ್ರಕಾರ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬಗ್ಗೆ ಮಾಹಿತಿ ಪಡೆಯಲು ಐಎಸ್ಐ ಆಸಕ್ತಿ ವ್ಯಕ್ತಪಡಿಸಿದೆ. ಕೇಂದ್ರ ಭದ್ರತಾ ಸಂಸ್ಥೆಯೊಂದಿಗೆ ಸಮಾಲೋಚಿಸಿ ಕೇಂದ್ರ ಸಚಿವರ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಚಿವರು ತಮ್ಮ ಭದ್ರತಾ ವ್ಯವಸ್ಥೆಗಳನ್ನು ಸೂಕ್ತವಾಗಿ ಹೊಂದಿಸಿಕೊಳ್ಳುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಶಿವರಾಜ್ ಭದ್ರತೆಯಲ್ಲಿ ಎಷ್ಟು ಕಮಾಂಡೋಗಳಿದ್ದಾರೆ?
ಶಿವರಾಜ್ ಸಿಂಗ್ ಚೌಹಾಣ್ ಈಗಾಗಲೇ ದೇಶದ ಅತ್ಯುನ್ನತ ಮಟ್ಟದ ಭದ್ರತೆ ಎಂದು ಪರಿಗಣಿಸಲಾದ Z+ ವರ್ಗದ ಭದ್ರತೆಯನ್ನು ಹೊಂದಿದ್ದಾರೆ. ಏಜೆನ್ಸಿಯ ಇನ್ಪುಟ್ ನಂತರ, ಅವರ ಭದ್ರತೆಗಾಗಿ ನಿಯೋಜಿಸಲಾದ ಸಿಬ್ಬಂದಿ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಲಾಗಿಲ್ಲ. ಅದರೆ, Z+ ಭದ್ರತೆಯು ಸಾಮಾನ್ಯವಾಗಿ NSG ಕಮಾಂಡೋಗಳು ಸೇರಿದಂತೆ ಸುಮಾರು 55 ತರಬೇತಿ ಪಡೆದ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತದೆ,(ಏಜೆನ್ಸೀಸ್).