ಸಾಂದರ್ಭಿಕ ಚಿತ್ರ 
ದೇಶ

ಇಶಾನ್ ಕಿಶನ್ ಶತಕದ ಆರ್ಭಟ; ಕಿವೀಸ್ ವಿರುದ್ಧ 41 ರನ್​ಗಳ ಅಂತರ ಗೆಲುವಿನಿಂದ 4-1 ಸರಣಿ ಗೆದ್ದ ಟೀಂ ಇಂಡಿಯಾ | India win

ತಿರುವನಂತಪುರಂ: ಟಿ20 ವಿಶ್ವಕಪ್ 2026ರ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ(India) ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 42 ರನ್​ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದು, ಪರಿಣಾಮವಾಗಿ 4-1 ಸರಣಿಯನ್ನು ಗೆದ್ದುಕೊಂಡಿದೆ.
ಗ್ರೀನ್‌ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭದಲ್ಲೇ ಅಭಿಷೇಕ್ ಶರ್ಮಾ ಅಬ್ಬರದ ಆರಂಭ ನೀಡಿದರು. ಇಶಾನ್ ಕಿಶನ್ 43 ಎಸೆತಗಳಲ್ಲಿ 103 ರನ್ ಮತ್ತುಅರ್ಶ್ದೀಪ್ ಸಿಂಗ್ ಐದು ವಿಕೆಟ್ ಗೊಂಚಲು ಟೀ ಇಂಡಿಯಾ ಗೆಲುವಿಗೆ ಕಾರಣವಾಗಯಿತು.
ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 271 ರನ್ ಗಳಿಸಿತು. ಸುಮಾರು 240 ಸ್ಟ್ರೈಕ್ ರೇಟ್‌ನೊಂದಿಗೆ ಬಂದ ಕಿಶನ್ ಇನ್ನಿಂಗ್ಸ್ ಆರು ಬೌಂಡರಿಗಳು ಮತ್ತು 10 ಸಿಕ್ಸರ್‌ಗಳೊಂದಿಗೆ 42 ಎಸೆತಗಳಲ್ಲಿ ತಮ್ಮ ಮೊದಲ ಟಿ20ಐ ಶತಕವನ್ನು ಭಾರಿಸಿದರು. ಸೂರ್ಯಕುಮಾರ್ ಯಾದವ್ 30 ಎಸೆತಗಳಲ್ಲಿ 63 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 42 ರನ್ ಗಳಿಸಿದ್ದಾರೆ.
ದ್ವಿತೀಯ ಬ್ಯಾಟಿಂಗ್ ಮೂಲಕ 271ರನ್​ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ, ಫಿನ್ ಅಲೆನ್ 38 ಎಸೆತಗಳಲ್ಲಿ 80 ರನ್ ಗಳಿಸುವ ಮೂಲಕ ಭರ್ಜರಿ ಗುರಿ ಬೆನ್ನಟ್ಟಿದ್ದರು. ಆದರೆ ಅವರು ಔಟ್ ಆದ ಬಳಿಕ ತಂಡ ಉತ್ತಮ ಪ್ರದರ್ಶನ ನೀಡಿದರು, ಟೀಂ ಇಂಡಿಯಾದ ಬೌಲರ್ ಅರ್ಶ್ದೀಪ್ ಸಿಂಗ್ ಐದು ವಿಕೆಟ್ ಗೊಂಚಲು 225ರನ್​ಗೆ ಆಲೌಟ್​ ಆಗುವಂತೆ ಮಾಡಿತು (ಏಜೆನ್ಸೀಸ್).