ಬಂಗಾಳದಲ್ಲಿ ಕಮಲ ಅರಳಲು ಕಾರಣವೇ ಟಿಎಂಸಿ? ಓವೈಸಿ ಬಿಚ್ಚಿಟ್ಟ ಆ 'ಒಳ ಒಪ್ಪಂದ'ದ ರಹಸ್ಯವೇನು? ಛಿದ್ರವಾಗುತ್ತಾ ದೀದಿ ಕೋಟೆ!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ರಾಜಕೀಯ ಸಂಚಲನ ಮೂಡಿಸಿದ್ದಾರೆ. ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಯ ನಡುವೆ ಎಂಟ್ರಿ ಕೊಟ್ಟಿರುವ ಓವೈಸಿ, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಚುನಾವಣಾ ಕಣದ ತೀವ್ರತೆಯನ್ನು ಹೆಚ್ಚಿಸಿದ್ದಾರೆ.
ಅಭಿವೃದ್ಧಿ ಶೂನ್ಯ: ಟಿಎಂಸಿ ವಿರುದ್ಧ ನೇರ ವಾಗ್ದಾಳಿ
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಓವೈಸಿ, ಬಂಗಾಳದಲ್ಲಿ ಅಭಿವೃದ್ಧಿ ಎಂಬುದು ಕೇವಲ ಕಾಗದದ ಮೇಲಿದೆ. ತಳಮಟ್ಟದಲ್ಲಿ ನಾಗರಿಕ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ. ಇಲ್ಲಿನ ಸ್ಥಳೀಯ ಆಡಳಿತದ ಪಕ್ಷಪಾತ ಧೋರಣೆಯಿಂದಾಗಿ ನಮಗೆ ಪ್ರಚಾರ ನಡೆಸಲು ಅನುಮತಿ ನಿರಾಕರಿಸಲಾಗುತ್ತಿದೆ. ಜನರ ಸಮಸ್ಯೆಗಳನ್ನು ಕೇಳುವವರಿಲ್ಲ, ಅಭಿವೃದ್ಧಿ ಎಂಬುದು ಸೊನ್ನೆಯಾಗಿದೆ ಟಿಎಂಸಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿಗೆ ದಾರಿ ಮಾಡಿಕೊಟ್ಟಿದ್ದೇ ಮಮತಾ ಸರ್ಕಾರ
ಬಂಗಾಳದಲ್ಲಿ ಬಿಜೆಪಿಯ ಪ್ರಬಲ ಬೆಳವಣಿಗೆಗೆ ಮಮತಾ ಬ್ಯಾನರ್ಜಿ ಅವರೇ ನೇರ ಹೊಣೆ ಎಂದು ಓವೈಸಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಟಿಎಂಸಿ ಆಡಳಿತದ ವೈಫಲ್ಯ ಮತ್ತು ಅವರ ರಾಜಕೀಯ ತಂತ್ರಗಳೇ ಬಿಜೆಪಿಗೆ ಬಂಗಾಳದ ಬಾಗಿಲು ತೆರೆಯುವಂತೆ ಮಾಡಿತು. ಟಿಎಂಸಿ ಮತ್ತು ಕಾಂಗ್ರೆಸ್ ಎರಡೂ ಜನರಿಗೆ ದ್ರೋಹ ಬಗೆಯುವಲ್ಲಿ ಅಪರಾಧದಲ್ಲಿ ಪಾಲುದಾರರು ಎಂದು ಅವರು ಓವೈಸಿ ಲೇವಡಿ ಮಾಡಿದ್ದಾರೆ.
ಸುವೇಂದು ಅಧಿಕಾರಿ ಮತ್ತು ನಂದಿಗ್ರಾಮದ ಇತಿಹಾಸ ನೆನಪಿಸಿದ ಓವೈಸಿ
ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧವೂ ವಾಗ್ದಾಳಿ ನಡೆಸಿದ ಓವೈಸಿ, ನಂದಿಗ್ರಾಮದ ಚಳವಳಿಯ ದಿನಗಳನ್ನು ಸ್ಮರಿಸಿದರು. ಇಂದು ದೊಡ್ಡ ಮಾತುಗಳನ್ನು ಆಡುತ್ತಿರುವ ಸುವೇಂದು ಅಧಿಕಾರಿ, ಅಂದು ಮಮತಾ ಬ್ಯಾನರ್ಜಿ ಅವರ ನಂದಿಗ್ರಾಮ ಹೋರಾಟದ ಸಮಯದಲ್ಲಿ ನಮ್ಮನ್ನು ಕರೆದೊಯ್ದ ಮೊದಲ ವ್ಯಕ್ತಿಯಾಗಿದ್ದರು. ಇಂದು ಎಲ್ಲರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನುಸುಳುಕೋರರ ವಿಚಾರ: ಬಿಜೆಪಿಗೆ ಸವಾಲು
ಗಡಿ ಭದ್ರತೆ ಮತ್ತು ನುಸುಳುಕೋರರ ಬಗ್ಗೆ ಮಾತನಾಡುವ ಬಿಜೆಪಿಗೆ ಓವೈಸಿ ನೇರ ಸವಾಲು ಹಾಕಿದ್ದಾರೆ. ಬಿಜೆಪಿ ನುಸುಳುಕೋರರ ಬಗ್ಗೆ ಅಷ್ಟೊಂದು ಗಂಭೀರವಾಗಿದ್ದರೆ, ಮೊದಲು ತಸ್ಲೀಮಾ ನಸ್ರೀನ್ ಅವರನ್ನು ಇಲ್ಲಿಂದ ಕಳುಹಿಸಲಿ. ಗಡಿ ಭದ್ರತೆಯ ವಿಷಯದಲ್ಲಿ ಎಲ್ಲಾ ಪಕ್ಷಗಳು ರಾಜಕೀಯ ಆಟವಾಡುತ್ತಿವೆ. ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಚಿತ್ರಣ ಮತ್ತು ದಿನಾಂಕಗಳು
ಬಂಗಾಳದ ಈ ಬಾರಿಯ ಚುನಾವಣೆ ಅತ್ಯಂತ ಕುತೂಹಲಕಾರಿಯಾಗಿದೆ. ಓವೈಸಿ ಅವರ ಎಂಟ್ರಿಯಿಂದಾಗಿ ಅಲ್ಪಸಂಖ್ಯಾತ ಮತಗಳು ಯಾರ ಪಾಲಾಗಲಿವೆ ಎಂಬುದು ಈಗಿನ ದೊಡ್ಡ ಪ್ರಶ್ನೆ.
ಮತ ಎಣಿಕೆ ಮತ್ತು ಫಲಿತಾಂಶ: ಜೂನ್ 4
ಟಿಎಂಸಿಯ ಅಹಂಕಾರ ಮತ್ತು ಬಿಜೆಪಿಯ ಆಕ್ರಮಣಕಾರಿ ಪ್ರಚಾರದ ನಡುವೆ ಓವೈಸಿ ಅವರ ಈ ಹೇಳಿಕೆಗಳು ಬಂಗಾಳದ ರಾಜಕೀಯ ಸಮೀಕರಣವನ್ನು ಬದಲಿಸುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).