ಬೀದಿ ಬದಿ ತಿಂಡಿ ನೀಡಲು ಬಳಕೆಯಾಗುತ್ತಿರುವ ಬ್ಯಾಂಕ್​ ಮಾಹಿತಿ ಹೊಂದಿರುವ ಕಾಗದ  
ದೇಶ

ಭಾರತದಲ್ಲಿ ಡೇಟಾ ಪ್ರೈವೆಸಿ ಅಂದ್ರೆ ಇದೇನಾ? ಪೇಪರ್ ಪ್ಲೇಟ್ ಮೂಲಕ ಪರ್ಸನಲ್ ಡೇಟಾ ಸೋರಿಕೆ! ನೆಟ್ಟಿಗರ ಆಕ್ರೋಶ | Data Safety

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್​ ಮಾಹಿತಿ ಹೊಂದಿರುವ ಕಾಗದ, ತಿಂಡಿ ನೀಡಲು ಬಳಕೆ
  • ಗ್ರಾಹಕರ ಗೌಪ್ಯತೆಯ ಕುರಿತು ಭುಗಿಲೆದ್ದ ಚರ್ಚೆ
  • ಬ್ಯಾಂಕಿನ ಈ ವರ್ತನೆಗೆ ನೆಟ್ಟಿಗರು ಗರಂ
ವೈರಲ್​: ಬೀದಿ ಬದಿಯ ತಳ್ಳು ಗಾಡಿಗಳಲ್ಲಿ ತಿಂಡಿ-ಊಟವನ್ನು ನೀಡಲು ಬಳಕೆಯಾಗುವ ಪೇಪರ್​ ಪ್ಲೇಟ್​ ಈಗ ಡೇಟಾ ಗೌಪ್ಯತೆ (Data Safety) ಯ ಕುರಿತು ರಾಷ್ಟ್ರವ್ಯಾಪಿ ಚರ್ಚೆಯನ್ನು ಹುಟ್ಟುಹಾಕಿದೆ.
ಇದು ಡೇಟಾ ಉಲ್ಲಂಘನೆ ಅಥವಾ ಹ್ಯಾಕಿಂಗ್ ಬದಲು ಭಾರತದಲ್ಲಿ ವೈಯಕ್ತಿಕ ಮಾಹಿತಿಯನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ರೀತಿಯ ಚರ್ಚೆಯನ್ನು ಹುಟ್ಟುಹಾಕಿದೆ. ಈಗ ವೈರಲ್ ಆಗಿರುವ ಪೋಸ್ಟ್​ನಲ್ಲಿ ಗ್ರಾಹಕರ ವಿವರಗಳನ್ನು ಹೊಂದಿರುವ ಕಾಗದದಿಂದ ಮಾಡಲಾದ ತಟ್ಟೆಯಲ್ಲಿ ತಿಂಡಿ ನೀಡುತ್ತಿರುವುದನ್ನು ನೋಡಬಹುದಾಗಿದೆ.
ಆ ಅಂಗಡಿಯಲ್ಲಿ ತಿಂಡಿ ತಿನ್ನಲು ಹೋದ ವ್ಯಕ್ತಿಯೊಬ್ಬರು X (ಟ್ವಿಟ್ಟರ್​) ನಲ್ಲಿ ಹಂಚಿಕೊಂಡಿರುವ ಈ ಚಿತ್ರದಲ್ಲಿ, ಭಾರತದಲ್ಲಿ, ನಿಮ್ಮ ಡೇಟಾ ಗೌಪ್ಯತೆ ನಿಮ್ಮ ಕೈಯಲ್ಲಿ ಇಲ್ಲ ಎಂದು ಬರೆಯಲಾಗಿದೆ. ಈ ಚಿತ್ರವು ತಕ್ಷಣ ಜನರ ಗಮನವನ್ನು ಸೆಳೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​​ ಆಗುತ್ತಿದೆ.

ಬ್ಯಾಂಕ್ ದಾಖಲೆಗಳ ಕುರಿತು ವಿವರಗಳು

ಮೊದಲ ನೋಟದಲ್ಲಿ, ಇದು ಬೀದಿ ಆಹಾರವನ್ನು ಹಿಡಿದಿರುವ ಸಾಮಾನ್ಯ ಕಾಗದದ ತಟ್ಟೆಯಂತೆ ಕಾಣುತ್ತದೆ. ಆದರೆ ಹತ್ತಿರದಿಂದ ನೋಡಿದಾಗ ವ್ಯಕ್ತಿಯ ಹೆಸರು, ಸ್ಥಳ ಮತ್ತು ಪಾವತಿ-ಸಂಬಂಧಿತ ವಿವರಗಳನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.

ಕಾಮೆಂಟ್‌ಗಳಲ್ಲಿ ಡೇಟಾ ಗೌಪ್ಯತೆಯ ಬಗ್ಗೆ ಪ್ರಶ್ನೆಗಳ ಸುರಿಮಳೆ

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪೋಸ್ಟ್​ಗೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದು, "ಗ್ರಾಹಕರ ವಿವರಗಳನ್ನು ಹೊಂದಿರುವ ಕಾಗದಗಳನ್ನು ರಸ್ತೆಬದಿಯ ಆಹಾರ ಮಾರಾಟಗಾರರ ಕೈಗೆ ತಲುಪಿದ್ದಾದರೂ ಹೇಗೆ? ಎಂದು ಒಬ್ಬ ಬಳಕೆದಾರ ಕೇಳಿದರೆ, ಗ್ರಾಹಕರ ಮಾಹಿತಿಯುಳ್ಳ ಕಾಗದಗಳನ್ನು ವಿಲೇವಾರಿ ಮಾಡಲು ಯಾವುದೇ ಕಾನೂನು ಮಾನದಂಡಗಳಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಭಾರತದಲ್ಲಿ ಗ್ರಾಹಕರ ಮಾಹಿತಿ ಎಷ್ಟು ಗೌಪ್ಯವಾಗಿದೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ,(ಏಜನ್ಸೀಸ್​).