Junk Food 
ದೇಶ

ಅತಿಯಾದ ಜಂಕ್​ ಫುಡ್​ ಚಟದಿಂದ ಈ ಹುಡುಗಿ ಮೃತಪಟ್ಟಳೇ? ವೈದ್ಯರು ಹೇಳಿದ ಅಚ್ಚರಿ ಸಂಗತಿ ಇಲ್ಲಿದೆ....Junk Food

ಪ್ರಮುಖ ಮುಖ್ಯಾಂಶಗಳು

  • ಪಾಸ್ಟ್​ಫುಡ್​ ತಿಂದು ವಿದ್ಯಾರ್ಥಿ ಸಾವು
  • ಪಾಸ್ಟ್​​ಫುಡ್​ ತಿನ್ನುವಿದರಿಂದ ನಿಜವಾಗಿಯೂ ಸಾವು ಸಂಭವಿಸುತ್ತಾ?
  • ಪಾಸ್ಟ್​ಫುಡ್​​ ಮತ್ತು ಸಾವಿನ ಕುರಿತು ವೈದ್ಯರು ಹೇಳುವುದೇನು?
ನವದೆಹಲಿ: ಇತ್ತೀಚಿಗೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ 11 ನೇ ತರಗತಿಯ ವಿದ್ಯಾರ್ಥಿನಿ ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಲ್ಲಿ ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದ ಸುದ್ದಿ ಎಲ್ಲೆಡೆ ವೈರಲ್​ ಆಗಿತ್ತು. ಸಾವಿಗೀಡಾದ ವಿದ್ಯಾರ್ಥಿನಿ ಅಹಾನಾ ಅತಿಹೆಚ್ಚಾಗಿ ಜಂಕ್ ಫುಡ್ (Junk Food) ತಿಂದಿದ್ದೇ ಅವಳ ಸಾವಿಗೆ ಕಾರಣವಾಯಿತು ಎಂದು ಆಕೆಯ ಕುಟುಂಬ ಹೇಳಿಕೊಂಡಿತ್ತು.
ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ ಎಂದರೆ ಅಹಾನಾ ನಿಜವಾಗಿಯೂ ಜಂಕ್ ಫುಡ್ ತಿನ್ನುವುದರಿಂದ ಸತ್ತಿದ್ದಾಳೆಯೇ? ಹೌದು ಎಂದಾದರೆ ಹೇಗೆ? ಮತ್ತು ಇಲ್ಲದಿದ್ದರೆ, ಅವಳ ಸಾವಿಗೆ ನಿಜವಾದ ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಜಂಕ್ ಫುಡ್ ತಿನ್ನುವುದರಿಂದ ಅವಳ ಸಾವು ಸಂಭವಿಸಿದೆಯೇ?

ಈ ಪ್ರಶ್ನೆಗೆ ನೇರ ಉತ್ತರ ಇಲ್ಲ. ಅಹಾನಾ ಫಾಸ್ಟ್ ಫುಡ್ ತಿನ್ನುವುದರಿಂದ ಸತ್ತಿಲ್ಲ. ದೆಹಲಿ ಏಮ್ಸ್‌ಗೆ ಸಂಬಂಧಿಸಿದ ಅಧಿಕೃತ ಮೂಲಗಳ ಪ್ರಕಾರ, ವಿದ್ಯಾರ್ಥಿನಿ ಬೇರೆ ಕಾಯಿಲೆಯಿಂದ ಬಳಲುತ್ತಿದ್ದು, ಅದು ಅಂತಿಮವಾಗಿ ಅವಳ ಸಾವಿಗೆ ಕಾರಣವಾಗಿದೆ.

ಸಾವಿಗೆ ಕಾರಣದ ಬಗ್ಗೆ ವೈದ್ಯರು ಏನು ಹೇಳುತ್ತಾರೆ?

ಡಿಸೆಂಬರ್ 19 ರಂದು ಅಹಾನಾ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿದ್ದು, ಸುನಿಲ್ ಚೇಂಬರ್ ನೇತೃತ್ವದ ವೈದ್ಯರ ತಂಡ ಆಕೆಯನ್ನು ಪರೀಕ್ಷಿಸುತ್ತಿತ್ತು. ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ಅವಳನ್ನು ಏಮ್ಸ್‌ಗೆ ಕರೆತರುವ ಮೊದಲೇ ಆಕೆ ಟೈಫಾಯ್ಡ್‌ನಿಂದ ಬಳಲುತ್ತಿದ್ದು, ಸೋಂಕು ತೀವ್ರವಾಗಿ ಹಬ್ಬಿದ್ದ ಕಾರಣ ಕರುಳಿನಲ್ಲಿ ರಂಧ್ರಗಳು ಉಂಟಾಗಿದ್ದರಿಂದ ಆಕೆಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಆದ್ದರಿಂದ ಆಹಾನಾಳ ಸಾವಿಗೆ ಜಂಕ್ ಫುಡ್ ಸೇವನೆಯೇ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲ.
ದೆಹಲಿ ಏಮ್ಸ್‌ನ ವೈದ್ಯರು ಅಹಾನಾಳ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಕುಟುಂಬಕ್ಕೆ ತಿಳಿಸಿದ್ದಾರೆ ಎಂದು ವಿದ್ಯಾರ್ಥಿನಿಯ ಸಂಬಂಧಿ ಸಾಜಿದ್ ಖಾನ್ ಹೇಳಿದ್ದಾರೆ. ಅವಳಿಗೆ ಏಮ್ಸ್‌ನಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಯಿತು ಮತ್ತು ಅಗತ್ಯವಿರುವ ಎಲ್ಲಾ ಪರೀಕ್ಷೆಗಳಿಗೆ ಒಳಗಾದರು ಹಾಗೆಯೇ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವೈದ್ಯರು ಹೇಳುತ್ತಿದ್ದರು. ಆದರೂ ಆಕೆ ಜೀವಂತವಾಗಿ ಮನೆಗೆ ಹಿಂದಿರುಗಲಿಲ್ಲ ಎಂದು ಸಾಜಿದ್ ಖಾನ್ ಹೇಳಿದರು.

ಜಂಕ್ ಫುಡ್​ನಿಂದಲೇ ಆಕೆ ಸತ್ತಿದ್ದಾಳೆ

ಆಹಾನಾ ಬಾಲ್ಯದಿಂದಲೂ ಬಹಳಷ್ಟು ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರವನ್ನು ಹೆಚ್ಚಾಗಿ ತಿನ್ನುತ್ತಿದ್ದಳು. ಅವಳು ಮೊದಲು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಳು. ಇತ್ತೀಚೆಗೆ, ಅವಳು ಕೆಲವು ಕರುಳಿನ ಸಮಸ್ಯೆಗಳಿಂದ ಬಳಲುತ್ತಿದ್ದಳು. ಆದರೆ ಈ ಸಮಸ್ಯೆಗೆ ನಿಖರ ಕಾರಣ ಏನೆಂದು ನಮಗೆ ತಿಳಿದಿಲ್ಲ ಆದರೆ ಜಂಕ್​ ಫುಡ್​ ತಿಂದಿದ್ದರಿಂದ ಅವಳ ಕರಳು ಗಟ್ಟಿಯಾಗಿದೆ ಎಂದು ನಾವು ನಂಬುತ್ತೇವೆ ಎನ್ನುವುದು ಕುಂಟುಂಬದವರ ಅಭಿಪ್ರಾಯವಾಗಿದೆ.

ಫಾಸ್ಟ್ ಫುಡ್​ ಮತ್ತು ಸಾವಿನ ಕುರಿತು ವೈದ್ಯರ ಅಭಿಪ್ರಾಯವೇನು?

ಲಿವರ್, ಗ್ಯಾಸ್ಟ್ರೋಎಂಟರಾಲಜಿ ಮತ್ತು ಪ್ಯಾಂಕ್ರಿಯಾಟಿಕೊ-ಬಿಲಿಯರಿ ತಜ್ಞರ ಪ್ರಕಾರ ಜಂಕ್​ ಫುಡ್​ ಸೇವನೆಯಿಂದ ಸಾವು ಉಂಟಾಗುತ್ತದೆ ಎನ್ನುವುದು ಸುಳ್ಳೆಂದು ಹೇಳುತ್ತಾರೆ. ಫಾಸ್ಟ್ ಫುಡ್ ತಿನ್ನುವುದರಿಂದ ಕರಳುಗಳಲ್ಲಿ ರಂಧ್ರಗಳು ಉಂಟಾಗುವುದಿಲ್ಲ, ಆದರೆ ಅತೀಯಾದ ಫಾಸ್ಟ್ ಫುಡ್ ಸೇವನೆಯಿಂದ ಹೆಚ್ಚೆಂದರೆ ಜೀರ್ಣಕ್ರಿಯೆ ನಿಧಾನವಾಗಬಹುದು ಎಂದಿದ್ದಾರೆ. ಫಾಸ್ಟ್ ಫುಡ್ ಮತ್ತು ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ನಿರಂತರವಾಗಿ ಸೇವಿಸುವುದರಿಂದ ಅಪೌಷ್ಟಿಕತೆ, ಯಕೃತ್ತಿನ ಸಮಸ್ಯೆಗಳು, ಬೊಜ್ಜು ಮತ್ತು ಗ್ಯಾಸ್ ನಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು ವಿನಃ ನೇರವಾಗಿ ಸಾವು ಉಂಟಾಗುವುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳುತ್ತಾರೆ,(ಏಜನ್ಸೀಸ್).