ಅವಧಿ ಮೀರಿದ 150 ಟನ್ ನಕಲಿ ಆಹಾರ (Adulterated Food) ಪದಾರ್ಥಗಳನ್ನು ವಶ
ರಾಜಸ್ಥಾನ/ಜಾರ್ಖಂಡ್: ಭಾರತದಲ್ಲಿ ದಿನೇ-ದಿನೇ ನಕಲಿ ಆಹಾರ ಪದಾರ್ಥಗಳ ಮಾರಾಟ ಹೆಚ್ಚಾಗುತ್ತಿದ್ದು, ರಾಜಸ್ಥಾನ ಹಾಗೂ ಜಾರ್ಖಂಡ್‌ನಲ್ಲಿ ಆರೋಗ್ಯ ಪರೀಕ್ಷಕ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸರಿ ಸುಮಾರು 150 ಟನ್ ಕಲಬೆರಕೆ (Adulterated Food) ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ ಕುರಿತು ವರದಿಯಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋನಲ್ಲಿ, ರಾಜಸ್ಥಾನ ಹಾಗೂ ಜಾರ್ಖಂಡನಲ್ಲಿ ಸುಮಾರಿ 1.5 ಲಕ್ಷ ಕಿಲೋಗ್ರಾಂ ಅಂದರೆ 150 ಟನ್ ಕಲಬೆರಕೆ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದೆ.
ಈ ಜಪ್ತಿಯಾದ ಪದಾರ್ಥಗಳಲ್ಲಿ, ನೂಡಲ್ಸ್, ಸಾಸ್‌ಗಳು ಮತ್ತು ಮೇಯನೇಸ್ ಸೇರಿದಂತೆ 25 ಕ್ಕೂ ಹೆಚ್ಚಿನ ಆಹಾರ ಪದಾರ್ಥಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ದಾಳಿಯ ಸಂದರ್ಭದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಪ್ಯಾಕೆಟ್ ಮೇಲೆ ಮರು ಮುದ್ರಣ ಮಾಡಲು ಅತ್ಯಾಧುನಿಕ ಯಂತ್ರಗಳನ್ನು ಬಳಸುತ್ತಿದ್ದು, ಈ ಯಂತ್ರಗಳನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯಂತ್ರಗಳನ್ನು ಬಳಸಿಕೊಂಡು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮರು ಮುದ್ರಣ ಮಾಡಿ ಹೊಸ ಆಹಾರವೆಂದು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಇದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ದ ನಿಯಮಗಳ ವಿರುದ್ಧವಾಗಿದ್ದು, ಆದ್ದರಿಂದ ಜಪ್ತಿಯಾದ ಎಲ್ಲಾ ಆಹಾರ ಪದಾರ್ಥಗಳನ್ನು ನಾಶ ಪಡಿಸುವುದಾಗಿ ಮತ್ತು ಆರೋಪಿಗಳ ಮೇಲೆ ಆಹಾರ ಪೂರೈಕೆ ಉಲ್ಲಂಘನೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,(ಏಜನ್ಸೀಸ್).