Humayun Kabir | ಟಿಎಂಸಿ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್ 
ದೇಶ

Humayun Kabir | ಟಿಎಂಸಿ ತಪ್ಪು ನಿರ್ಧಾರದಿಂದ ಮುಸ್ಲಿಮರ ಹೀರೋ ಆದ್ರಾ ಕಬೀರ್..? ದೀದಿ ಆತಂಕಕ್ಕೆ ಇದೇ ಕಾರಣವಂತೆ..

Humayun Kabir: ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿರುವ ಹುಮಾಯೂನ್ ಕಬೀರ್, ಮುರ್ಷಿದಾಬಾದ್‌ ಸೇರಿದಂತೆ ಪಶ್ಚಿಮ ಬಂಗಾಳದ ಮುಸ್ಲಿಮರಿಗೆ ವೇಗವಾಗಿ ಹತ್ತಿರವಾಗುತ್ತಿದ್ದಾರೆ. ಬಾಬರಿ ಮಸೀದಿ ಮಾದರಿಯ ಕಟ್ಟಡವನ್ನು ನಿರ್ಮಿಸುವ ಘೋಷಣೆ ಮಾಡಿದಾಗಿನಿಂದ ಸಮುದಾಯದ ಜನ ಅವರನ್ನು ಶ್ಲಾಘಿಸುತ್ತಿದ್ದು, ಇದು ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಟಿಎಂಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬಾಬರಿ ಮಸೀದಿ ಘೋಷಣೆ ..

ಮುರ್ಷಿದಾಬಾದ್‌ನ ಬೆಲದಂಗ ಪ್ರದೇಶದಲ್ಲಿ, ಡಿಸೆಂಬರ್ 6 ರಂದು ಕಬೀರ್ ಹೊಸ ಬಾಬರಿ ಮಸೀದಿಗೆ ಅಡಿಪಾಯ ಹಾಕಿದರು, ಇದು ಅಯೋಧ್ಯೆಯಲ್ಲಿ ಕೆಡವಲಾದ ಕಟ್ಟಡದ ಮಾದರಿಯನ್ನೇ ಹೋಲಲಿದ್ದು, ಪ್ರಾರ್ಥನೆಗಾಗಿ 25,000 ಜನರು ಸೇರುವಷ್ಟು ಸಾಮರ್ಥ್ಯ ಹೊಂದಿದೆ.

ಹೊಸ ಪಕ್ಷ ಸ್ಥಾಪನೆ..

ಶುಕ್ರವಾರದ ಪ್ರಾರ್ಥನೆಗೆ ಮುನ್ನ ಮಾತನಾಡಿದ ಕಬೀರ್​, ಡಿಸೆಂಬರ್ 22 (ಸೋಮವಾರ) ಹೊಸ ಪಕ್ಷ ಸ್ಥಾಪಸುವುದಾಗಿ ತಿಳಿಸಿದರು. ಮುಸ್ಲಿಮರು ಇನ್ನು ಮುಂದೆ ಮಮತಾ ಬ್ಯಾನರ್ಜಿ ಮೋಸಕ್ಕೆ ಬಲಿಯಾಗುವುದಿಲ್ಲ, ಅವರು ನಮ್ಮ ಸಮುದಾಯದ ಮತಗಳನ್ನು ಪಡೆಯುತ್ತಾರೆ, ಆದರೆ ನಮ್ಮ ಅಭಿವೃದ್ದಿಗಾಗಿ ಏನು ಮಾಡುವುದಿಲ್ಲ ಎಂದರು.

ದೇಣಿಗೆ ಸಂಗ್ರಹ

ಡಿಸೆಂಬರ್ 6 ರ ಶಂಕುಸ್ಥಾಪನೆ ಬಳಿಕ ಮುರ್ಷಿದಾಬಾದ್‌ನ ಬೆಲದಂಗನಲ್ಲಿರು ಮಸೀದಿ ನಿರ್ಮಾಣ ಕಾರ್ಯಕ್ಕೆ ಕೋಟಿಗಟ್ಟಲೆ ಹಣ ಹರಿದು ಬರುತ್ತಿದ್ದು, ದೇಶದ ಜನರಷ್ಟೆ ಅಲ್ಲದೇ ವಿದೇಶದಲ್ಲಿರುವವರು ಕೂಡ ದೇಣಿಗೆ ನೀಡುತ್ತಿದ್ದಾರೆ. ದಾನಿಗಳು ನೇರವಾಗಿ ಅಲ್ಲದೇ ಬ್ಯಾಂಕ್ ಖಾತೆಗಳು ಮತ್ತು QR ಕೋಡ್ ಸ್ಕ್ಯಾನ್‌ಗಳ ಮೂಲಕವು ತಮ್ಮ ಭಕ್ತಿಯ ಸೇವೆ ಸಲ್ಲಿಸುತ್ತಿದ್ದಾರೆ. ಈ ಮಸೀದಿ ದೇಣಿಗೆಯನ್ನೇ ಅವಲಂಬಿಸಿದೆ ಎಂದು ವರದಿಯಾಗಿದ್ದು, 5 ಕೋಟಿ ರೂಪಾಯಿ ನಗದು ಮತ್ತು 2 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಪೆಟ್ಟಿಗೆಗಳ ಮೂಲಕ ಸಂಗ್ರಹಿಸಲಾಗುತ್ತಿದೆ. ಆ ಸ್ಥಳಕ್ಕೆ ಭೇಟಿ ನೀಡುವವರಿಗೆ ಇಟ್ಟಿಗೆಗಳನ್ನು ತರುವಂತೆ ಸೂಚಿಸಲಾಗಿದ್ದು, ಹಣ ನೀಡಲು ಸಾಧ್ಯವಾಗದವರು ಸಿಮೆಂಟ್, ರಾಡ್‌ಗಳು, ಕೋಳಿಗಳು ಅಥವಾ ಬಾತುಕೋಳಿಗಳನ್ನು ನೀಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ.
ಈಗಾಗಲೇ ಮಸೀದಿ ನಿರ್ಮಾಣದ ಸ್ಥಳದಲ್ಲಿ ಬಾಬ್ರಿ ಮಸೀದಿಯ ವಿನ್ಯಾಸಗಳು ಮತ್ತು ಕಬೀರ್ ಹೆಸರಿನ ಟಿ-ಶರ್ಟ್‌ಗಳು 150 ರೂಪಾಯಿಗಳಿಗೆ ಮಾರಾಟವಾಗುತ್ತಿವೆ, ಇದರ ಜೊತೆ ಜೊತೆಗೆ ಫೋಟೋ ಸ್ಟಾಲ್‌ಗಳು ಮತ್ತು ಆಹಾರ ಬಂಡಿಗಳು ಸ್ಥಾಪನೆಯಾಗುತ್ತಿವೆ. ನಿರ್ಮಾಣಕ್ಕೂ ಮುಂಚೆಯೇ, ಲಾಭ ಹರಿದು ಬರುತ್ತಿದ್ದು, ಪೂರ್ಣಗೊಂಡ ಬಳಿಕ ಉದ್ಯೋಗ ಸೃಷ್ಟಿಯಾಗುತ್ತವೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ವೋಟ್​ ಬ್ಯಾಂಕ್​ ಛಿದ್ರವಾಗುವ ಆತಂಕ..

ಹುಮಾಯೂನ್ ಕಬೀರ್​​ರನ್ನು ಈಗಾಗಲೇ ಟಿಎಂಸಿ ಉಚ್ಛಾಟಿಸಿದ್ದು, ಆದರೂ ಕೂಡ ಅವರ ಜನಪ್ರೀಯತೆ ಕಡಿಮೆಯಾಗಿಲ್ಲ. ಸದ್ಯ ಸಮುದಾಯ ಜನರಲ್ಲಿ ಹೊಸ ಆಸಾಕಿರಣವಾಗಿ ಮೂಡಿರುವ ಕಬೀರ್​, ಮುರ್ಷಿದಾಬಾದ್‌ನ ಮುಸ್ಲಿಂ ನಾಯಕರಾಗಿ ಸ್ಥಾನ ಪಡೆದಿದ್ದಾರೆ. ಈ ಜಿಲ್ಲೆಯಲ್ಲಿ ಟಿಎಂಸಿ ಪಾಲಿಗೆ ಭದ್ರಕೋಟೆಯಾಗಿದೆ(ಏಜೆನ್ಸೀಸ್).