AI ಸಾಂದರ್ಭಿಕ ಚಿತ್ರ 
ದೇಶ

AI ಬೆಳವಣಿಗೆಯ ವೇಗ ಕಂಡು ಬೆಚ್ಚಿಬಿದ್ದ ತಜ್ಞರು; ಜಗತ್ತಿಗೆ ಎದುರಾಗಿದೆಯೇ ಅತಿದೊಡ್ಡ ಕಂಟಕ?

AI: ಯುಕೆ ಸರ್ಕಾರದ ಅಡ್ವಾನ್ಸ್ಡ್ ರಿಸರ್ಚ್ ಅಂಡ್ ಇನ್ವೆನ್ಷನ್ ಏಜೆನ್ಸಿ (ARIA)ಯ ಕಾರ್ಯಕ್ರಮ ನಿರ್ದೇಶಕ ಮತ್ತು AI ಸುರಕ್ಷತಾ ತಜ್ಞ ಡೇವಿಡ್ ಡಾಲ್ರಿಂಪಲ್ ಅವರು, ವೇಗವಾಗಿ ಮುಂದುವರೆಯುತ್ತಿರುವ AI ತಂತ್ರಜ್ಞಾನದಿಂದ ಉಂಟಾಗುವ ಸಮಸ್ಯೆಗಳಿಗೆ "ಜಗತ್ತು ಸಿದ್ದವಾಗಲು ಸಮಯ ಇಲ್ಲದಿರಬಹುದು" ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ, ತಂತ್ರಜ್ಞಾನದ ಬೆಳೆಯುತ್ತಿರುವ ಸಾಮರ್ಥ್ಯದ ಬಗ್ಗೆ ಜನರು ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ಜಗತ್ತಿನಲ್ಲಿ ಕೆಲಸಗಳನ್ನು ಮಾಡಲು ಮಾನವರು ನಿರ್ವಹಿಸುವ ಎಲ್ಲಾ ವ್ಯವಸ್ಥೆಗಳ ಮೇಲೆ ನಾವು ಕಾಳಜಿ ವಹಿಸಬೇಕು ಎಂದು ನಾನು ಭಾವಿಸುತ್ತೇನೆ. ಆದರೆ, ನಮ್ಮ ನಾಗರಿಕತೆ, ಸಮಾಜ ಮತ್ತು ಗ್ರಹದ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಲು ಪ್ರಾಬಲ್ಯ ಸಾಧಿಸುವ ಎಲ್ಲಾ ಕ್ಷೇತ್ರಗಳಲ್ಲಿಯೂ ನಾವು ಸ್ಪರ್ಧಿಸುವುದಿಲ್ಲ ಎಂದು ಡಾಲ್ರಿಂಪಲ್ ಹೇಳಿದರು.
AI ಯಲ್ಲಿನ ಸಂಭಾವ್ಯ ಪ್ರಗತಿಗಳು ಸಾರ್ವಜನಿಕ ವಲಯ ಮತ್ತು AI ಕಂಪನಿಗಳಲ್ಲಿ ನಡೆಯುವ ತಿಳುವಳಿಕೆಯಲ್ಲಿ ಅಂತರ ಎಷ್ಟಿದೆ ಎಂಬುದನ್ನು ಡಾಲ್ರಿಂಪಲ್ ಮತ್ತಷ್ಟು ವಿವರಿಸಿದ್ದಾರೆ. ಎಐನಿಂದ ವಿಷಯಗಳು ತುಂಬಾ ವೇಗವಾಗಿ ಚಲಿಸುತ್ತಿವೆ. ಹಾಗೆಯೇ ಅವುಗಳನ್ನು ಸುರಕ್ಷಿತ ದೃಷ್ಟಿಕೋನದಿಂದ ಮುಂದಕ್ಕೆ ತೆಗೆದುಕೊಂಡು ಹೋಗಲು ಸಮಯ ಇಲ್ಲದಿರಬಹುದು. ಆದಾಗ್ಯೂ, ಐದು ವರ್ಷಗಳಲ್ಲಿ ಮಾನವರಿಗಿಂತ ಸುಲಭವಾಗಿ ಹೆಚ್ಚಿನ ಗುಣಮಟ್ಟದ ಮತ್ತು ಕಡಿಮೆ ವೆಚ್ಚದಲ್ಲಿ ಕಾರ್ಯವನ್ನು ನಿರ್ವಹಿಸುತ್ತವೆ ಎಂದು ಹೇಳಿದರು.
ಮುಂದುವರಿದ AI ವ್ಯವಸ್ಥೆಗಳ ವಿಶ್ವಾಸಾರ್ಹತೆಯನ್ನು ಸರ್ಕಾರಗಳು ಹಗುರವಾಗಿ ಪರಿಗಣಿಸಬಾರದು. ಇಂಧನ ಮೂಲಸೌಕರ್ಯದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ AI ಬಳಕೆಯನ್ನು ರಕ್ಷಿಸುವತ್ತ ಗಮನಹರಿಸಬೇಕು. ಆದಾಗ್ಯೂ, ಸುರಕ್ಷತಾ ವ್ಯವಸ್ಥೆಗಳ ಮೇಲೆ ಆರ್ಥಿಕ ಒತ್ತಡದಿಂದ ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಲು ಬೇಕಾಗಿರುವ ವಿಜ್ಞಾನವು ಸಾಕಷ್ಟು ಬೇಗ ಹೊರಹೊಮ್ಮಬಹುದು ಎಂದು ಅಭಿಪ್ರಾಯ ಸೂಚಿಸಿದ್ದಾರೆ.
ಆದ್ದರಿಂದ ನಾವು ಮುಂದಿನ ದಿನಗಳಲ್ಲಿ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ, ಸಮಯಕ್ಕೆ ಸರಿಯಾಗಿ ಕೆಲಸವನ್ನು ಮಾಡಿ, ಅದರಿಂದ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ತಾಂತ್ರಿಕ ಪ್ರಗತಿಯು ಸುರಕ್ಷತಾ ಕ್ರಮಗಳನ್ನು ಮೀರಿದಾಗ, ಇದು ಭದ್ರತೆಗೂ ಹಾಗೂ ಆರ್ಥಿಕತೆಗೂ ಗಂಭೀರ ಅಪಾಯವನ್ನು ಉಂಟು ಮಾಡುತ್ತದೆ. ಮುಂದುವರೆದ AI ವ್ಯವಸ್ಥೆಗಳ ನಡವಳಿಕೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ತಾಂತ್ರಿಕ ಸಂಶೋಧನೆ ಅವಶ್ಯಕವಾಗಿದೆ ಎಂದು ಹೇಳಿದರು.
ಯುಕೆಯ AI ಸೆಕ್ಯುರಿಟಿ ಇನ್ಸ್ಟಿಟ್ಯೂಟ್ (AISI) ವರದಿ ಪ್ರಕಾರ, AI ಸಾಮರ್ಥ್ಯಗಳು ವೇಗವಾಗಿ ಮುಂದುವರಿಯುತ್ತಿವೆ, ಕೆಲವು ಪ್ರದೇಶಗಳಲ್ಲಿ ಪ್ರತಿ 8 ತಿಂಗಳಿಗೊಮ್ಮೆ ಕಾರ್ಯಕ್ಷಮತೆ ದುಪ್ಪಟ್ಟುಗೊಳ್ಳುತ್ತಿದೆ. ಇವು ಶೇ. 50 ರಷ್ಟು ಕೆಲಸಗಳನ್ನು ಪೂರ್ಣಗೊಳಿಸುತ್ತದೆ. ಹಾಗೆಯೇ ಕೆಲವು ಕೆಲಸಗಳು ಮಾನವ ಒಂದು ಗಂಟೆಕ್ಕಿಂತ ಹೆಚ್ಚು ತೆಗೆದುಕೊಂಡು ಮಾಡುವಂತಹ ಕೆಲಸವನ್ನು ಎಐ ತಂತ್ರವು ಬೇಗನೆ ಮುಗಿಸುತ್ತದೆ ಎಂದು ತಿಳಿಸಿದೆ.
ಇದು ಪ್ರಮುಖ ಸುರಕ್ಷತಾ ಕಾಳಜಿಯಾಗಿದ್ದು, ಅತ್ಯಾಧುನಿಕ ಮಾದರಿಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಯಶಸ್ಸಿನ ಪ್ರಮಾಣವನ್ನು ಸಾಧಿಸಿವೆ. ದೈನಂದಿನ ಕಟ್ಟ ಸನ್ನಿವೇಶವು ಅಸಂಭವವಾಗಿದೆ ಎಂದು AISI ಒತ್ತಿ ಹೇಳಿದೆ (ಏಜೆನ್ಸೀಸ್​).