IRCTC Nepal Tour 
ದೇಶ

ಇಂದೋರ್‌ನಿಂದ ನೇಪಾಳಕ್ಕೆ ವಿಶೇಷ ಪ್ರವಾಸಿ ರೈಲು ಸೇವೆ; ಎಂದಿನಿಂದ ಆರಂಭ, ಟಿಕೆಟ್​​ ದರ ಬಗ್ಗೆ ಮಾಹಿತಿ ಇಲ್ಲಿದೆ..IRCTC

ಪ್ರಮುಖ ಮುಖ್ಯಾಂಶಗಳು

  • ​ಜೂನ್ 12 ರಂದು ಇಂದೋರ್‌ನಿಂದ ನೇಪಾಳಕ್ಕೆ ಪ್ರವಾಸಿ ರೈಲು ಸೇವೆ
  • ​ಒಟ್ಟು 9 ರಾತ್ರಿ ಹಾಗೂ 10 ದಿನಗಳ ಅದ್ಭುತ ಆಧ್ಯಾತ್ಮಿಕ ಮತ್ತು ಪ್ರವಾಸಿ ಪ್ಯಾಕೇಜ್.
  • ಪಶುಪತಿನಾಥ್ ದೇಗುಲ, ಪೋಖರಾ ಮತ್ತು ಚಿತ್ವಾನ್ ರಾಷ್ಟ್ರೀಯ ಉದ್ಯಾನ ನೋಡಲು ಅವಕಾಶ.
IRCTC Nepal Tour: ಭಾರತೀಯ ರೈಲ್ವೆ ಇಲಾಖೆ ನೇಪಾಳಕ್ಕೆ ಮೊಟ್ಟ ಮೊದಲ ಬಾರಿಗೆ ಇಂದೋರ್​ನಿಂದ ಪ್ರವಾಸಿ ರೈಲು ಸೇವೆಯನ್ನು ಆರಂಭಿಸಲು ಸಜ್ಜಾಗಿದೆ. ಜೂನ್​12ರಿಂದ ವಿಶೇಷ ಯಾತ್ರೆ ಆರಂಭವಾಗಲಿದ್ದು, ಪಶುಪತಿ ದೇವಾಲಯ ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. 

ಪಶುಪತಿನಾಥ್​ ನೇಪಾಳ ದರ್ಶನ ಯಾತ್ರೆ

ಇಂದೋರ್​ನಿಂದ ನೇಪಾಳಕ್ಕೆ  ಭಾರತ್​ ಗೌರವ್ ಪ್ರವಾಸಿ ರೈಲು ಸೇವೆ ಪರಿಚಯಿಸಿದ್ದು, ಇದು ನೂಕ್​ 12ರಿಂದ ಸೇವೆ ಆರಂಭಿಸಲಿದೆ ಒಟ್ಟು 9 ರಾತ್ರಿ ಹತ್ತು ದಿನ ಸೇವೆ ನೀಡಲಿದೆ. ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರಿಗೆ ನೇಪಾಳದ ಸುಂದರ ಸ್ಥಳಗಳನ್ನು, ಆಧ್ಯಾತ್ಮಿಕ ಕ್ಷೇತ್ರಗಳನ್ನು ನೋಡುವ ಅವಕಾಶ ನೀಡುವುದು Indian Railway Catering and Tourism Corporation (IRCTC) ಉದ್ದೇಶವಾಗಿದೆ.
ಈ ಆಧ್ಯಾತ್ಮಿಕ ಪ್ರಯಾಣ ಸೇವೆಯನ್ನು ಪಶುಪತಿನಾಥ್​ ನೇಪಾಳ ದರ್ಶನ ಯಾತ್ರೆ ಎಂದು ಕರೆಯಲಾಗಿದ್ದು. ಮೊದಲ ಬಾರಿಗೆ ಭಾರತದ ಗಡಿಯನ್ನು ಮೀರಿ ಚಲಿಸುವ ಮೊದಲ ಭಾರತ್​ ಗೌರವ್​ ರೈಲು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಯಾವೆಲ್ಲ ಪ್ರವಾಸಿ ಸ್ಥಳ ನೋಡಬಹುದು?

 10 ದಿನದ ಪ್ರವಾಸಿ ದಿನಗಳಲ್ಲಿ ಪ್ರವಾಸಿಗರು ವಿಶ್ವಪ್ರಸಿದ್ಧ ಪವಿತ್ರ ಹಿಂದೂ ಧಾರ್ಮಿಕ ಕ್ಷೇತ್ರವಾದ  ​ಕಠ್ಮಂಡು ಮತ್ತು ಪಶುಪತಿನಾಥ್ ದೇವಾಲಯದ ದರ್ಶನ ಪಡೆದುಕೊಳ್ಳಬಹುದು. ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಪೋಖರಾ ಕಣ್ತುಂಬಿಕೊಂಡರೆ, ಮತ್ತೊಂದು ದಿನ ಚಿತ್ವಾನ್ ರಾಷ್ಟ್ರೀಯ ಉದ್ಯಾನವನ ನೋಡಬಹುದಾಗಿದೆ. 
ನೇಪಾಖದ ಗೊರ್ಖಾ ಜಿಲ್ಲೆಯಲ್ಲಿರುವ ಮನಕಾಮನ ದೇಗುಲ ನೋಡಬಹುದು ಇಲ್ಲಿಗೆ ತಲುಪುವ ದಾರಿಯಲ್ಲಿ ರೋಪ್​​ ವೇ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. 

ಎಲ್ಲೆಲ್ಲಿ ಸ್ಟಾಪ್ ಇರಲಿದೆ?

ಪಶುಪತಿನಾಥ್​ ನೇಪಾಳ ದರ್ಶನ ಯಾತ್ರೆ ಮಧ್ಯಪ್ರದೇಶದ ಇಂದೋರ್‌ನಿಂದ  ಪ್ರಯಾಣ ಆರಂಭವಾಗಲಿದೆ.  ಇಂದೋರ್​, ಉಜ್ಜಯನಿ, ಶುಜಲ್ಪುರ್​, ಭೂಪಾಲ್, ಇಟಾರ್ಸಿ, ನರಸಿಂಗಪುರ, ಜಬಲ್ಪುರ, ಕಟ್ನಿ ಸತ್ನಾ ಪ್ರದೇಶಗಳಲ್ಲಿ ಸ್ಟಾಪ್ ಕೊಡಲಿದೆ.

ಏನೆಲ್ಲ ಸೌಲಭ್ಯ ಇರಲಿದೆ?

ಡಿಲಕ್ಸ್ ಎಸಿ ರೈಲಾಗಿದ್ದು, 14 ಬೋಗಿಗಳನ್ನು ಹೊಂದಿರಲಿದೆ. ಮೊದಲಿನಿಂದ ಮೂರನೇ ಎಸಿ ಬೋಗಿಯವರೆಗೂ ವಸತಿ ಸೌಲಭ್ಯ ಇರಲಿದೆ.  ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಊಟ ಸೇರಿದಂತೆ ಎಲ್ಲ ರೀತಿಯ ಸೌಲಭ್ಯವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರವಾಸಕ್ಕೆ ಎಷ್ಟು ಶುಲ್ಕ ಪಾವತಿ ಮಾಡ್ಬೇಕು?

ಪ್ರಯಾಣಿಕರ ಬಜೆಟ್‌ಗೆ ಅನುಗುಣವಾಗಿ ಪ್ರವಾಸದ ಪ್ಯಾಕೇಜ್ ಅನ್ನು ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದ.
  • ​ಥರ್ಡ್ ಎಸಿ ಕಂಫರ್ಟ್ 62,710 ರೂ.​
  • ಸೆಕೆಂಡ್ ಎಸಿ ಡೆಲಕ್ಸ್ 76,550 ರೂ.​
  • ಫಸ್ಟ್ ಎಸಿ ಸುಪೀರಿಯರ್ 90,400 ರೂ.
​ಭಾರತ ಮತ್ತು ನೇಪಾಳ ನಡುವಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯ ಈ ಹೆಜ್ಜೆ ಪ್ರವಾಸಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಜೂನ್ ತಿಂಗಳ ರಜೆಯ ಅವಧಿಯಲ್ಲಿ ನೇಪಾಳ ಪ್ರವಾಸ ಕೈಗೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಮತ್ತು ಸುರಕ್ಷಿತ ಅವಕಾಶವಾಗಿದೆ, (ಏಜೆನ್ಸೀಸ್).