Middle East Crisis  
ದೇಶ

ಖಮೇನಿ ಹತ್ಯೆಗೆ ಪ್ರತಿಕಾರ: ಇಸ್ರೇಲ್ ಪ್ರಧಾನಿ ಕಚೇರಿ ಮೇಲೆ ಇರಾನ್ ಅಟ್ಯಾಕ್! | Middle East Crisis

ಕುವೈತ್: ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಿಂದ ಕೆರಳಿರುವ ಇರಾನ್, ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಭೀಕರ(Middle East Crisis) ಪ್ರತಿಕಾರ ತೀರಿಸಿಕೊಳ್ಳುತ್ತಿದೆ. ಇಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯನ್ನೇ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿದೆ.
ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, "ಝಿಯೋನಿಸ್ಟ್ ಆಡಳಿತದ ಕ್ರಿಮಿನಲ್ ಪ್ರಧಾನಿಯ ಕಚೇರಿ ಮತ್ತು ವಾಯುಪಡೆಯ ಕಮಾಂಡರ್ ಪ್ರಧಾನ ಕಚೇರಿಯ ಮೇಲೆ ಯಶಸ್ವಿ ದಾಳಿ ನಡೆಸಲಾಗಿದೆ." ಈ ದಾಳಿಗಾಗಿ ಇರಾನ್ ಅತ್ಯಾಧುನಿಕ 'ಖೈಬರ್' ಕ್ಷಿಪಣಿಗಳನ್ನು ಬಳಸಿದೆ ಎಂದು ತಿಳಿದುಬಂದಿದೆ. ಟೆಲ್ ಅವಿವ್ ಮಾತ್ರವಲ್ಲದೆ ಹೈಫಾದಲ್ಲಿನ ಭದ್ರತಾ ಕೇಂದ್ರಗಳು ಮತ್ತು ಪೂರ್ವ ಜೆರುಸಲೆಮ್ ಮೇಲೆಯೂ ದಾಳಿಗಳು ನಡೆದಿವೆ ಎಂದು ವರದಿ ಉಲ್ಲೇಖಿಸಿದೆ.

ಇಡೀ ಗಲ್ಫ್ ರಾಷ್ಟ್ರಗಳಲ್ಲಿ ಸ್ಫೋಟದ ಸದ್ದು

ಕಳೆದ ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಖಮೇನಿ ಹತರಾದ ನಂತರ, ಇರಾನ್ ತನ್ನ ಶಕ್ತಿಯನ್ನು ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಪ್ರಯೋಗಿಸುತ್ತಿದೆ.
ಕುವೈತ್: ಇಲ್ಲಿನ ಅಮೆರಿಕನ್ ರಾಯಭಾರ ಕಚೇರಿಯಿಂದ ದಟ್ಟವಾದ ಕಪ್ಪು ಹೊಗೆ ಏಳುತ್ತಿರುವುದು ಕಂಡುಬಂದಿದೆ. ಯುಎಸ್ ಮಿಲಿಟರಿ ನೆಲೆ ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆದಿದ್ದು, ದಶಕಗಳಲ್ಲೇ ಕಂಡರಿಯದ ಭೀಕರ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ದುಬೈ ಮತ್ತು ಅಬುಧಾಬಿ: ಗಲ್ಫ್‌ನ ಪ್ರಮುಖ ನಗರಗಳಾದ ದುಬೈ, ಅಬುಧಾಬಿ, ದೋಹಾ ಮತ್ತು ಮನಾಮಗಳಲ್ಲಿ ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ.
ಸೌದಿ ಅರೇಬಿಯಾ: ಸೌದಿಯ ತೈಲ ಘಟಕಗಳ ಮೇಲೆ ದಾಳಿ ನಡೆದಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ.

ಸಾವು-ನೋವಿನ ಭೀಕರ ಅಂಕಿ-ಅಂಶ

ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿಯ ವರದಿಯ ಪ್ರಕಾರ, ಶನಿವಾರದಿಂದ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನಲ್ಲಿ ಇದುವರೆಗೆ ಕನಿಷ್ಠ 555 ಜನರು ಸಾವನ್ನಪ್ಪಿದ್ದಾರೆ. ಇತ್ತ ಗಲ್ಫ್ ರಾಷ್ಟ್ರಗಳಲ್ಲಿ ನಡೆದ ಇರಾನ್ ದಾಳಿಗೆ ಐವರು ಬಲಿಯಾಗಿದ್ದು, ಕುವೈತ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಂತರಾಷ್ಟ್ರೀಯ ಆತಂಕ ಮತ್ತು ಎಚ್ಚರಿಕೆ
ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯನ್ ಇರಾನ್‌ನ ಈ "ಬೇಜವಾಬ್ದಾರಿ ದಾಳಿಗಳನ್ನು" ತೀವ್ರವಾಗಿ ಖಂಡಿಸಿದ್ದಾರೆ. "ಈ ಸಂಘರ್ಷವು ಮತ್ತಷ್ಟು ಹರಡದಂತೆ ತಡೆಯಲು ನಾವು ಶ್ರಮಿಸಬೇಕು. ಈ ಭಾಗದ ಸ್ಥಿರತೆ ಜಗತ್ತಿಗೆ ಅತ್ಯಂತ ಮುಖ್ಯವಾಗಿದೆ," ಎಂದು ಅವರು ಎಚ್ಚರಿಸಿದ್ದಾರೆ.
ಪ್ರಸ್ತುತ ಕುವೈತ್‌ನಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಯ ಸಿಬ್ಬಂದಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ. "ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಭೀತಿ ಮುಂದುವರಿದಿದೆ, ರಾಯಭಾರ ಕಚೇರಿಯತ್ತ ಯಾರೂ ಬರಬೇಡಿ," ಎಂದು ಭದ್ರತಾ ಎಚ್ಚರಿಕೆ ನೀಡಲಾಗಿದೆ,(ಏಜೆನ್ಸೀಸ್).