ಕೇವಲ 1 ರೂಪಾಯಿ ಕೊಟ್ಟು ಐಫೋನ್ ಪಡೆಯಿರಿ 
ದೇಶ

ಕೇವಲ 1 ರೂಪಾಯಿ ಕೊಟ್ಟು ಐಫೋನ್ ಪಡೆಯಿರಿ... ಈ ಮೆಗಾ ಆಫರ್​ ಹಿಂದಿದೆ ಒಂದು​ ಸೀಕ್ರೆಟ್​! ಏನದು? IPhone

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ದುಬಾರಿ ಫೋನ್​ಗಳಲ್ಲಿ ಐಫೋನ್​ ಯಾವಾಗಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ
  • ಸೆಲೆಬ್ರಿಟಿಗಳು, ಉದ್ಯಮಿಗಳಿಂದ ಹಿಡಿದು ಇಂದಿನ ಯುವ ಸಮುದಾಯ ಹೆಚ್ಚಾಗಿ ಐಫೋನ್​ ಬಳಸುತ್ತಿದೆ
  • ಹೊಸ ಆವೃತ್ತಿಯ ಐಫೋನ್​ ಬಂದರೆ ಅದನ್ನು ಖರೀದಿ ಮಾಡಲು ಜನ ಮುಗಿಬೀಳುತ್ತಾರೆ
  • ಆದರೆ, ಕೇವಲ 1 ರೂಪಾಯಿಗೆ ಈ ಫೋನ್​ ಸಿಗುತ್ತದೆ ಅಂದರೆ, ನೀವು ನಂಬುತ್ತೀರಾ?
IPhone : ವಿಶ್ವದ ದುಬಾರಿ ಫೋನ್​ಗಳಲ್ಲಿ ಐಫೋನ್​ ಯಾವಾಗಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಐಫೋನ್ ಅನ್ನೋದು ಒಂದು ಬ್ರ್ಯಾಂಡ್​. ಈ ಫೋನ್​​ ಇದ್ದವರನ್ನು ನೋಡುವ ರೀತಿಯೇ ಬೇರೆ. ಸೆಲೆಬ್ರಿಟಿಗಳು, ಉದ್ಯಮಿಗಳಿಂದ ಹಿಡಿದು ಇಂದಿನ ಯುವ ಸಮುದಾಯ ಹೆಚ್ಚಾಗಿ ಐಫೋನ್​ ಬಳಸುತ್ತಿದೆ.
ಅಂದಹಾಗೆ, ದಿನದಿಂದ ದಿನಕ್ಕೆ ಐಫೋನ್​ ಕ್ರೇಜ್​ ಕೂಡ ಜಾಸ್ತಿಯಾಗಿದೆ. ಹೊಸ ಆವೃತ್ತಿಯ ಐಫೋನ್​ ಬಂದರೆ ಅದನ್ನು ಖರೀದಿ ಮಾಡಲು ಜನ ಮುಗಿಬೀಳುತ್ತಾರೆ. ಮುಂಗಡವಾಗಿಯೇ ಹಣ ಪಾವತಿ ಮಾಡುತ್ತಾರೆ. ಅಷ್ಟರಮಟ್ಟಿಗೆ ಭಾರತದ ಮಾರುಕಟ್ಟೆಯಲ್ಲಿ ಐಫೋನ್​ಗೆ ಬೇಡಿಕೆ ಇದೆ. ಅನೇಕರಿಗೆ ಈ ಫೋನ್​ ಖರೀದಿ ಮಾಡಬೇಕೆಂಬ ಆಸೆ ಇದ್ದರು ಕೂಡ ಇದರ ದುಬಾರಿ ಬೆಲೆಯಿಂದಾಗಿ ಖರೀದಿಸಲು ಹಿಂದೇಟು ಹಾಕುತ್ತಾರೆ. ಆದರೆ, ಕೇವಲ 1 ರೂಪಾಯಿಗೆ ಈ ಫೋನ್​ ಸಿಗುತ್ತದೆ ಅಂದರೆ, ನೀವು ನಂಬುತ್ತೀರಾ? ಈ ಸ್ಟೋರಿ ಓದಿದರೆ ನಿಮಗೆ ನಂಬಿಕೆ ಬಂದರು ಬರಬಹುದೇನೋ?
ಅಯ್ಯೋ... ಕೇವಲ 1 ರೂಪಾಯಿಗೆ ಐಫೋನಾ? ಇದು ನಿಜಾನಾ? ನೀವು ಸುಳ್ಳು ಹೇಳುತ್ತಿಲ್ಲಾ ತಾನೇ? ಎಂದೆಲ್ಲ ನೀವು ಕೇಳಬಹುದು. ಆದರೆ, 1 ರೂಪಾಯಿಗೆ ಐಫೋನ್​ ಖರೀದಿ ಮಾಡಬಹುದು. ಅದು ಹೇಗೆ ಗೊತ್ತಾ? ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ ಈ ಸುದ್ದಿಯನ್ನು ಒಮ್ಮೆ ಓದಿ.
ಅಂದಹಾಗೆ, ಪ್ರಾಚೀನ ವಸ್ತುಗಳಿಗೆ ಒಳ್ಳೆಯ ಬೇಡಿಕೆ ಮತ್ತು ಬೆಲೆ ಇದೆ. ನಾಣ್ಯಗಳು ಸೇರಿದಂತೆ ಈ ಹಿಂದೆ ಬಳಸುತ್ತಿದ್ದ ವಸ್ತುಗಳು ಇಂದು ಬಹುತೇಕ ಕಣ್ಮರೆಯಾಗಿವೆ. ಆದರೆ, ಬೆರಳಣಿಕೆಯಷ್ಟು ವಸ್ತುಗಳು ಇಂದಿಗೂ ಚಲಾವಣೆಯಲ್ಲಿವೆ. ಅಂತಹ ವಸ್ತುಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಅವುಗಳಲ್ಲಿ 1970ರಲ್ಲಿ ಮುದ್ರಿಸಿದ ಒಂದು ರೂಪಾಯಿ ಭಾರತೀಯ ನಾಣ್ಯ ಕೂಡ ಒಂದು.
1970ರಲ್ಲಿ ಮುದ್ರಿಸಿದ 1 ರೂಪಾಯಿ ನಾಣ್ಯಕ್ಕೆ ಉಚಿತ ಐಫೋನ್ ನೀಡುತ್ತೇವೆ ಎಂದು ಆಫರ್​ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಭಾರತೀಯ ಕರೆನ್ಸಿಯಲ್ಲಿ ಸುಮಾರು 80,000 ರೂಪಾಯಿ ಮೌಲ್ಯದ ಫೋನ್ ಅನ್ನು ಕೇವಲ ಒಂದು ರೂಪಾಯಿಗೆ ನೀಡುವುದಾಗಿ ಅಂಗಡಿಯೊಬ್ಬ ನೀಡಿದ ಜಾಹೀರಾತಿನಿಂದ ಅನೇಕ ಜನರು ಇದೀಗ7 ಆಶ್ಚರ್ಯಚಕಿತರಾಗಿದ್ದಾರೆ.
1970 ರಲ್ಲಿ ಬಿಡುಗಡೆಯಾದ ಈ ಒಂದು ರೂಪಾಯಿ ನಾಣ್ಯಗಳನ್ನು 'ನಿಕ್ಕಲ್' ಲೋಹದಿಂದ ಮಾಡಲ್ಪಟ್ಟಿದೆ. ಇದೊಂದು ಅಪರೂಪದ ಲೋಹ. ಹೀಗಾಗಿ, ಈ ಸುದ್ದಿ ನಿಜವಾಗುವ ಸಾಧ್ಯತೆಯಿದೆ ಅನ್ನೋದು ಅನೇಕ ನಾಣ್ಯ ಸಂಗ್ರಹಕಾರರು ಅಭಿಪ್ರಾಯವಾಗಿದೆ. ಎರಡನೇ ಮಹಾಯುದ್ಧದ ನಂತರ ಉಂಟಾದ ನಿಕ್ಕಲ್ ಕೊರತೆಯಿಂದಾಗಿ, ಈ ಲೋಹದ ಬೆಲೆ ಐದು ಪಟ್ಟು ಹೆಚ್ಚಾಯಿತು. ಹೀಗಾಗಿ, ನಿಕ್ಕಲ್​ನಲ್ಲಿ ನಾಣ್ಯಗಳ ಮುದ್ರಿಸುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು.
ಭಾರತದಾದ್ಯಂತ ಪ್ರಸ್ತುತ ಮೂರು ಸಾವಿರಕ್ಕಿಂತ ಕಡಿಮೆ ನಾಣ್ಯಗಳು ಚಲಾವಣೆಯಲ್ಲಿವೆ ಎಂದು ಹೇಳಲಾಗುತ್ತದೆ. ಆದರೆ, ಹೆಚ್ಚಿನ ಜನರು ಅವುಗಳನ್ನು ಸುರಕ್ಷಿತವಾಗಿ ಇಡುವುದಿಲ್ಲ. ಆದರೆ, ಈ ಅಪರೂಪದ ನಾಣ್ಯಗಳನ್ನು ಸಂಗ್ರಹಿಸುವವರು 1970 ರ 1 ರೂಪಾಯಿ ನಾಣ್ಯಕ್ಕಾಗಿ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ನೀಡಲು ಸಿದ್ಧರಿರುತ್ತಾರೆ.
ಆದ್ದರಿಂದ, ನಾವು ಆ ಕರೆನ್ಸಿಯ ಮೌಲ್ಯವನ್ನು ಲೆಕ್ಕ ಹಾಕಿದರೆ, ಐಫೋನ್ ನೀಡುವುದರಿಂದ ಯಾವುದೇ ನಷ್ಟವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದಾಗ್ಯೂ, ಅಂತಹ ಜಾಹೀರಾತುಗಳನ್ನು ನಂಬುವ ಮೊದಲು, ಅವುಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ, (ಏಜೆನ್ಸೀಸ್​).