Kangana Ranaut Gen Z Gutter Remark
- 'ಜನರೇಷನ್ ಗಟರ್' ಎಂದು ಟೀಕೆಗೊಳಗಾದ ಕಂಗನಾ ರಣಾವತ್.
- 2018ರCannes Film Festival ಆಫ್ಟರ್-ಪಾರ್ಟಿ ಡಾನ್ಸ್ ವಿಡಿಯೋ ವೈರಲ್ .
- ಬಿಜೆಪಿ ಸಂಸದೆ ಕಂಗನಾ ರಣಾವತ್ ಹಾಗೂ 'ಕಾಕ್ರೋಚ್ ಜನತಾ ಪಾರ್ಟಿ' ವಕ್ತಾರ ನಡುವೆ ಮಾತಿನ ಚಕಮಕಿ.
Kangana Ranaut Gen Z Gutter Remark: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಝೆನ್ ಜಿಗಳನ್ನು ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ 'ಜನರೇಷನ್ ಗಟರ್' ಎಂದು ಕರೆದು ಭಾರಿ ಟೀಕೆಗೆ ಒಳಗಾಗಿದ್ದಾರೆ. ನೆಟ್ಟಿಗರು ಕಂಗನಾರ ಹಳೆ ವಿಡಿಯೋವನ್ನು ವೈರಲ್ ಮಾಡಿದ್ದು, ಚೀಪ್ ಮೈಂಡೆಡ್ ನಟಿ ಎಂದು ಟೀಕೆ ಮಾಡುತ್ತಿದ್ದಾರೆ.
ಕಂಗನಾರನ್ನು ಬಿಜೆಪಿ ಅವರೇ ಗಂಭೀರವಾಗಿ ಪರಿಗಣಿಸೋದಿಲ್ಲ. ಇನ್ನು ನಾವು ಅವರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಮಾತನಾಡಿದ್ದರು, ಇದನ್ನು ಉಲ್ಲೇಖಿಸಿ ಕಂಗನಾ ರಣಾವತ್ ಕಿಡಿಕಾರಿದ್ದರು. ಸೌರವ್ಗೆ ಈಗ 28 ವರ್ಷ ಕೆಲಸ ಇಲ್ಲದ ನಿಷ್ಪ್ರಯೋಜಕ. ನಾನು ಅವರ ವಯಸ್ಸಿನಲ್ಲಿ ಸಿನಿಮಾದಿಂದ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದೆ ಎಂದು ವಾಗ್ಯುದ್ಧ ನಡೆಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ, 2018ರಲ್ಲಿ ನಡೆದ ಪಾರ್ಟಿ ವಿಡಿಯೋವೊಂದು ವೈರಲ್ ಆಗಿದೆ.
ಯಾವ ವರ್ಷದ ವಿಡಿಯೋ ಅದು?
ತನು ವೆಡ್ಸ್ ಮನು ನಟನ ಹಳೆಯ ವೀಡಿಯೊ ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡಿದೆ. ಈ ಕ್ಲಿಪ್ 2018 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ(Cannes Film Festival ) ಅವರು ಕಾಣಿಸಿಕೊಂಡಾಗಿನಿಂದ ಬಂದಿದೆ. ಈ ವೀಡಿಯೊಗೆ ಇಂಟರ್ನೆಟ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಗನಾ ಅವರ ಇಂದಿನ ಕಠಿಣ ನಿಲುವು ಮತ್ತು ಈ ಹಳೆಯ ವೀಡಿಯೊದಲ್ಲಿನ ಅವರ ಪಾರ್ಟಿವಿಯರ್ ಬಟ್ಟೆಗಳ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ.
ವೆಸ್ಟರ್ನ್ ವಿಯರ್ ಬಟ್ಟೆ ಹಾಕುವವರ ವಿರುದ್ಧ ಕಿಡಿ
ಕಂಗನಾ ಅವರು ಈ ಹಿಂದೆ ವೆಸ್ಟರ್ನ್ ವಿಯರ್ ಬಟ್ಟೆ ಹಾಕುವವರ ವಿರುದ್ಧ ಕಿಡಿಕಾರಿದ್ದರು. ಪಾಶ್ಚಿಮಾತ್ಯ ಬಟ್ಟೆ ಧರಿಸುವವರನ್ನು ಜನರೇಷನ್ ಗಟರ್ ಎಂದು ಕರೆಯುತ್ತೇನೆ. ಇವರಲ್ಲಿ ಕೆಲವರಿಗೆ ಸಮಾಜಕ್ಕೆ ನೀಡಲು ಏನೂ ಇಲ್ಲ. ಇವರಿಗೆ ಓದಲು ಬರುವುದಿಲ್ಲ, ಇಷ್ಟು ಅಸಹ್ಯ ಹಾಗೂ ಭ್ರಷ್ಟರಾಗಿದ್ದಾರೆ ಎಂದರೆ ಕನಿಷ್ಠ ಗೃಹಿಣಿಯರಾಗಲೂ ಇವರಿಗೆ ಸಾಧ್ಯವಿಲ್ಲ. ಕಂಗನಾ ಅವರ ಈ ಹೇಳಿಕೆಗಳಿಗೆ ರಾಖಿ ಸಾವಂತ್ ಮತ್ತು ಸೋನು ಸೂದ್ ಸೇರಿದಂತೆ ಹಲವು ನಟರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರು ಏನಂದ್ರು?
"ಇಂದಿನ ಯುವತಿಯರು ಅಥವಾ ಜೆನ್-ಝೆಡ್ ಯುವತಿಯರು ಡ್ರಗ್ ವ್ಯಸನಿಗಳು, ಸರಿಯಾಗಿ ಓದಲು ಬರುವುದಿಲ್ಲ ಮತ್ತು ಒಳ್ಳೆಯ ಗೃಹಿಣಿಯರಾಗಲು ಯೋಗ್ಯರಲ್ಲ ಎಂದು ಕಂಗನಾ ಹೇಳಿದ್ದರು. ಹಾಗಿದ್ದರೆ ಅವರ ಈ ಡ್ಯಾನ್ಸ್ ಕ್ಲಿಪ್ ಬಳಸಿಕೊಂಡು ಅವರನ್ನು ಟೀಕೆ ಮಾಡೋದ್ರಲ್ಲಿ ತಪ್ಪೇನಿದೆ ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಕಂಗನಾ ಅವರ ಪರವಾಗಿ ನಿಂತು ಸಮರ್ಥಿಸಿಕೊಂಡಿರುವ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು, "ಅವರು ತಮ್ಮ ಜೀವನವನ್ನು ಆನಂದಿಸುತ್ತಿದ್ದಾರೆ, ಅವರು ಸ್ವಾವಲಂಬಿಯಾಗಿದ್ದಾರೆ ಮತ್ತು ಯಾರಿಗೂ ತೊಂದರೆ ಕೊಡುತ್ತಿಲ್ಲ. ಇದರಲ್ಲಿ ತಪ್ಪೇನಿದೆ?" ಎಂದಿದ್ದಾರೆ.
ಆದರೆ, ಕಂಗನಾ ಅವರು ಮತ್ತೊಬ್ಬ ಮಹಿಳೆಯರನ್ನು ಅವಮಾನಿಸುವುದು ಸಹ ತಪ್ಪು. ಅವಳು ಹೇಳಿದ್ದನ್ನು ನಾನು ಒಪ್ಪುವುದಿಲ್ಲ. ಆದರೆ ನಾನು ಯಾರನ್ನು ಅವಮಾನಿಸೋಕೆ ಹೋಗೋದಿಲ್ಲ ಎಂದು ಹೇಳಿದರು, (ಏಜೆನ್ಸೀಸ್).