ಗೃಹ ಸಾಲ ಬಡ್ಡಿದರದಲ್ಲಿ ಕಡಿತ
- ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದ ಆರ್‌ಬಿಐ
- ರೆಪೊ ದರವನ್ನು ಶೇ.5.25ರಷ್ಟು ಕಡಿತ
- ಗೃಹ ಸಾಲ ಸೇರಿ ಇನ್ನಿತರ ಸಾಲಗಳ ಬಡ್ಡಿದರಗಳು ಕುಸಿತ
ನವದೆಹಲಿ: ಇಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಪ್ರಮುಖ ಬಡ್ಡಿದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿರುವುದು ಸದ್ಯ ದೇಶದ ಜನತೆಯಲ್ಲಿ ಭಾರೀ ಸಂತಸ ತಂದಿದೆ. ಬಡ್ಡಿದರ ಬದಲಾವಣೆಗಳನ್ನು ಅಳೆಯುವ ಕನಿಷ್ಠ ಮಾನದಂಡವೆಂದರೆ ಬೇಸಿಸ್ ಪಾಯಿಂಟ್‌ಗಳು. ಈ ವಿಷಯವನ್ನು ಗಮನದಲ್ಲಿರಿಸಿಕೊಂಡ ಆರ್‌ಬಿಐ, ರೆಪೊ ದರವನ್ನು ಶೇ.5.25ರಷ್ಟು ಇಳಿಸಿದೆ. ಇದು ಗೃಹ ಸಾಲ ಸೇರಿ ಇನ್ನಿತರ ಸಾಲಗಳನ್ನು ತೆಗೆದುಕೊಳ್ಳುವ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಆರ್‌ಬಿಐನ ರೆಪೋ ದರ ಕಡಿತದಿಂದ ಸಾಲದ ಕಂತುಗಳು ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಆರ್‌ಬಿಐನ ಇತ್ತೀಚಿನ ನಿರ್ಧಾರವು ಬ್ಯಾಂಕ್ ಸಾಲಗಳನ್ನು ಪಡೆದವರಿಗೆ ರಿಲೀಫ್ ನೀಡಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಸೇರಿ ಕೆಲವು ಬ್ಯಾಂಕ್ಗಳು ಪ್ರಸ್ತುತ ಶೇ.7.35ರಷ್ಟು ಗೃಹ ಸಾಲವನ್ನು ನೀಡುತ್ತಿವೆ. ಈಗ ರೆಪೋ ದರ ಕಡಿತದಿಂದ ಸಾಲ ಪಡೆದವರಿಗೆ ಆ ಬಡ್ಡಿದರವನ್ನು ಶೇ.7.1ರಷ್ಟು ಕಡಿಮೆ ಮಾಡಲಿದೆ.
ಇದು ಕೆಲವು ಖಾಸಗಿ ಬ್ಯಾಂಕುಗಳು ನೀಡುವ ಠೇವಣಿ ದರವೂ ಆಗಿದೆ. 15 ವರ್ಷಗಳವರೆಗೆ 1 ಕೋಟಿ ರೂ. ಗೃಹ ಸಾಲದ ಮೇಲೆ, ದರದಲ್ಲಿ ಶೇ.0.25ರಷ್ಟು ಕಡಿತವು ತಿಂಗಳಿಗೆ ಸುಮಾರು 1,440 ರೂ.ನಷ್ಟು ಇಎಂಐ ಹಣದಲ್ಲಿ ಕಡಿತ ತರಲಿದೆ. ಈ ರೆಪೋ ದರ ಇಳಿಕೆ ನಂತರದಲ್ಲಿ ಹೊಸ ಸಾಲಗಾರರಿಗೆ ಶೇ.7.1ರಷ್ಟು ಬೆಲೆಗೆ ಗೃಹ ಸಾಲಗಳನ್ನು ನೀಡಲು, ಲೋನ್ ನೀಡುವವರು ಠೇವಣಿ ದರಗಳನ್ನು ಕಡಿತಗೊಳಿಸಬೇಕಾಗುತ್ತದೆ ಮತ್ತು ರೇಟ್ ಅನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).