ಇನ್‌ಸ್ಟಾಗ್ರಾಂನಲ್ಲಿ ಸೋನಿಯಾ ಗಾಂಧಿ ಹಾಗೂ ಗಾಂಧಿ ಕುಟುಂಬದ ಇತಿಹಾಸವನ್ನು ಕೆದಕಿ ಗಂಭೀರ ಅನುಮಾನಗಳನ್ನು ಹೊರಹಾಕಿದ ಬಿಜೆಪಿ ಸಂಸದೆ ಕಂಗನಾ ರಣಾವತ್. 
ದೇಶ

ಇಂದಿರಾ...ಸಂಜಯ್​...ರಾಜೀವ್​....: ವಿದೇಶಿ ಮಹಿಳೆ ಪ್ರವೇಶ; ಸಾಲು-ಸಾಲು ದುರ್ಮರಣ; ಸೋನಿಯಾ ವಿರುದ್ಧ ಕಂಗನಾ ರಣಾವತ್ ಗಂಭೀರ ಗುಮಾನಿ! Kangana Ranaut

ನವದೆಹಲಿ: ಕೆಲ ದಿನಗಳ ಹಿಂದೆ ದೈತ್ಯ ಟೆಕ್​ ಕಂಪನಿ ಎನ್​ವಿಡಿಯಾ ಸಿಇಒ, ಚೀನಾ ಬೇಹುಗಾರಳ ಜೊತೆಗೆ ಹನಿಟ್ರ್ಯಾಪ್​ ಆಗಿರುವ ಸಂಗತಿ ಸದ್ಯ ವಿಶ್ವದಾದ್ಯಂತ ಸಖತ್​ ಟ್ರೆಂಡಿಂಗ್​ನಲ್ಲಿದೆ. ಯಾವುದೇ ದೇಶದ ಪ್ರಮುಖರು ವಿದೇಶಿಗರ ಸಂಪರ್ಕದಲ್ಲಿದ್ದರೆ, ಅವರು ಅವರ, ಸಂಪರ್ಕದಲ್ಲಿರುವ ವಿದೇಶಿಯರ ಬಗ್ಗೆ ಒಮ್ಮೆ ಅನುಮಾವ ವ್ಯಕ್ತ ಪಡಿಸುವ ಮಟ್ಟಿಗೆ ಈ ಸುದ್ದಿ ಸದ್ದು ಮಾಡುತ್ತಿದೆ.

ಈಗ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟಿ ಹಾಗೂ ಬಿಜೆಪಿ ಸಂಸದೆ, ಕಂಗನಾ ರಣಾವತ್​, ಕಾಂಗ್ರೆಸ್​ ಅದಿನಾಯಕಿ ಹಾಗೂ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಪತ್ನಿ ಸೋನಿಯಾ ಗಾಂಧಿ ಮೇಲೆ ಕೆಲ ಗಂಭೀರ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಸೋನಿಯಾ ಸಾವಿನ ಸರಮಾಲೆ!

ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ, ಈ ಬಗ್ಗೆ ಬರೆದುಕೊಂಡಿರುವ ಕಂಗನಾ ರಣಾವತ್​, ಸದ್ಯ ಎಲ್ಲರೂ, ಎನ್​ವಿಡಿಯಾ ಕಂಪನಿಯ ಹನಿಟ್ರ್ಯಾಪ್​ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನಾನು 'ಎಮರ್ಜೆನ್ಸಿ' ಸಿನಿಮಾ ಮಾಡುವಾಗ, ಗಾಂಧಿ ಪರಿವಾರದ ಬಗ್ಗೆ ಅಧ್ಯಯನ ನಡೆಸಿದಾಗ, ಒಬ್ಬ ವಿದೇಶಿ ಮಹಿಳೆ ಆಗಮನದಿಂದ ಏನೇನು ನಡೆದು ಹೋಯಿತು? ಈ ಮಹಿಳೆ ಆ ಮನೆಯೆ ಹೇಗೆ ಸೋಸೆಯಾದಳು ಎನ್ನುವುದು ನನಗೆ ಇಂದಿಗೂ ಅರ್ಥವಾಗಿಲ್ಲವೆಂದು ಕಂಗನಾ, ಸೋನಿಯಾ ಗಾಂಧಿಯನ್ನು ಕೆಣಕಿದ್ದಾರೆ.

ಆ, ವಿದೇಶಿ ಮಹಿಳೆ ಪ್ರವೇಶವಾದ ಕೆಲವೇ ವರ್ಷದಲ್ಲಿ, ಇಂದಿರಾ ಗಾಂಧಿ ಕೊಲೆಯಾಯಿತು. ಸಂಜಯ್​ ಗಾಂಧಿ ಹಾಗೂ ರಾಜೀವ್​ ಗಾಂಧಿ ಅಂತಹ ಉತ್ತರಾಧಿಕಾರಿಗಳ ದಿಢೀರ್​ ಸಾವು ಸಂಭವಿಸಿ, ಆ ಸ್ಥಾನಕ್ಕೆ ಸಹಾನುಭೂತಿಯ ಆಧಾರದ ಮೇಲೆ ಆಯ್ಕೆ ಮಾಡಬಹುದಾದ ಏಕೈಕ ವ್ಯಕ್ತಿ ಉಳಿದುಕೊಂಡರು: ಅವರೇ ಸೋನಿಯಾ ಗಾಂಧಿ ಎಂಬ ವಿದೇಶಿ ಪ್ರಜೆ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಹತ್ತು ವರ್ಷ ಮೊಸಳೆ ಕಣ್ಣೀರು!

ನಂತರ 2004 ರಿಂದ 2014 ರ ವೆರೆಗೆ ವಿದೇಶಿ ಪ್ರೊಪಗಾಂಡವನ್ನು ಭಾರತದಲ್ಲಿ ಭಿತ್ತಿ, ಭಯೋತ್ಪಾದಕರ ಸಾವಿಗೆ ಮೊಸಳೆ ಕಣ್ಣೀರು ಸುರಿಸುತ್ತಾ ಅಧಿಕಾರ ಅನುಭವಿಸಿದರು. ಆಮೇಲೆ 2014 ರಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಿತು. ಆದರೆ, ಈ ವಿದೇಶಿ ಮಹಿಳೆ, ಹಾಗೂ ಆ ಕುಟುಂಬದ ಜತೆ ನಡೆದ ಘಟನೆಗಳೆಲ್ಲಾ ಕಾಕತಾಳಿಯ ಎನ್ನಲು ಸಾಧ್ಯವೇ?ದಶಕಗಳ ವೆರೆಗೆ ಈ ವಿದೇಶಿ ಮಹಿಳೆ ದೇಶದ ಆಡಳಿತವನ್ನು ತನ್ನ ಕೈಯಲ್ಲಿ ಸ್ಥಾಪಿಸಿಕೊಂಡಿದ್ದಳೆಂದು ಸೋನಿಯಾ ಗಾಂಧಿ ಬಗ್ಗೆ ಸಂಸದೆ ಕಂಗನಾ ಗಾಢ ಅನುಮಾನವನ್ನು ಹೊರಹಾಕಿದ್ದಾರೆ, (ಏಜೆನ್ಸೀಸ್​).