ಡಿಜಿಸಿಎ ಆದೇಶ 
ದೇಶ

ಇಂಡಿಗೋ ವಿಮಾನಗಳ ಅವ್ಯವಸ್ಥೆ; ಬಿಕ್ಕಟ್ಟು ನಿವಾರಿಸಲು ಸಿಬ್ಬಂದಿ ವಿಶ್ರಾಂತಿ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ | IndiGo flight

ನವದೆಹಲಿ: ದೇಶದ ಬಹುದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ವಿಮಾನಗಳ(IndiGo flight) ಕಳದ ಮೂರು ದಿನಗಳ ಹಾರಾಟ ಅವ್ಯವಸ್ಥೆಯನ್ನು ನಿವಾರಿಸಲು ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ವಿಮಾನಯಾನ ಸಂಸ್ಥೆಗಳು ಸಿಬ್ಬಂದಿ ಮತ್ತು ಪೈಲಟ್‌ಗಳ ರಜೆಗಳನ್ನು ವಾರದ ವಿಶ್ರಾಂತಿಯಾಗಿ ಎಣಿಸುವುದನ್ನು ತಡೆಯುವ ನಿಬಂಧನೆಯನ್ನು ಹಿಂತೆಗೆದುಕೊಂಡು ಆದೇಶ ಹೊರಿಡಿಸಿದೆ. 
ಇಂಡಿಗೋದ 700ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಆಕ್ರೋಶ, ನಿಲ್ದಾಣಗಳ ಸಂಪೂರ್ಣ ಅವ್ಯವಸ್ಥೆಯಿಂದಾಗಿ ಡಿಜಿಸಿಎ ಶುಕ್ರವಾರ(ಡಿ. 05) ವಾರದ ವಿಶ್ರಾಂತಿಗೆ ಬದಲಾಗಿ ಯಾವುದೇ ರಜೆಯನ್ನು ಬಳಸಬಾರದು ಎಂದು ಹೇಳಿದ್ದ ತನ್ನ ಹಿಂದಿನ ಆದೇಶವನ್ನು ಹಿಂಪಡೆದಿದೆ. 
ಪರಿಷ್ಕೃತ ವಿಮಾನ ಕರ್ತವ್ಯ ಸಮಯ ಮಿತಿಗಳ(ಎಫ್‌ಡಿಟಿಎಲ್) ಭಾಗವಾಗಿರುವ ಈ ಷರತ್ತನ್ನು ಎಲ್ಲಾ ವಿಮಾನಯಾನ ಸಂಸ್ಥೆಗಳ ವಿನಂತಿಯ ಮೇರೆಗೆ ಹಿಂಪಡೆಯಲಾಗಿದೆ. ಸಿಬ್ಬಂದಿ ಮತ್ತು ಪೈಲಟ್‌ಗಳ ಆಯಾಸವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಪರಿಷ್ಕೃತ ಎಫ್‌ಡಿಟಿಎಲ್ ನಿಯಮಗಳು ನವೆಂಬರ್ 1 ರಿಂದ ಜಾರಿಗೆ ಬಂದಿವೆ ತನ್ನ ಹೊಸ ಆದೇಶದಲ್ಲಿ ತಿಳಿಸಿದೆ. 
ಕಾರ್ಯಾಚರಣೆಯ ನಿರಂತರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯತೆಯ ಕುರಿತು ವಿವಿಧ ವಿಮಾನಯಾನ ಸಂಸ್ಥೆಗಳಿಂದ ಬಂದಿರುವ ಪ್ರಾತಿನಿಧ್ಯಗಳು ಮತ್ತು ಕಾರ್ಯಾಚರಣೆಯ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು, ಈ ನಿಬಂಧನೆಯನ್ನು ಪರಿಶೀಲಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ.
ಭಾರತದ ಅತಿದೊಡ್ಡ ಬಜೆಟ್ ವಾಹಕದ ಕಾರ್ಯಾಚರಣೆಗಳ ಮೇಲೆ ಸಿಬ್ಬಂದಿ ಕೊರತೆಯಿರುವ ಸಮಯದಲ್ಲಿ, ವಿಮಾನ ಕರ್ತವ್ಯ ಸಮಯ ಮಿತಿಗಳ ಭಾಗಶಃ ಸಡಿಲಿಕೆಯು ವಿಮಾನಯಾನ ಸಂಸ್ಥೆಗಳಿಗೆ, ವಿಶೇಷವಾಗಿ ಇಂಡಿಗೊಗೆ ಹೆಚ್ಚುವರಿ ರೋಸ್ಟರ್ ಒದಗಿಸುವ ನಿರೀಕ್ಷೆಯಿದೆ. ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಅನಾನುಕೂಲತೆಯನ್ನು ತಡೆಯಲು ಸಹಾಯ ಮಾಡುವಂತೆ ಡಿಜಿಸಿಎ ಸಂಸ್ಥೆಗಳಿಗೆ ಮನವಿ ಮಾಡಿದೆ.
ಕಳೆದ ಮೂರು ದಿನಗಳಿಂದ ವಿಮಾನ ನಿಲ್ದಾಣಗಳಲ್ಲಿ 700ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ರದ್ದಾಗಿವೆ ಮತ್ತು ವಿಳಂಬವಾಗಿವೆ. ಸಾವಿರಾರು ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ದಾರೆ. ಇಂದು ಕೂಡ ದೆಹಲಿಯಿಂದ ಹೊರಡುವ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳನ್ನು ಮಧ್ಯರಾತ್ರಿಯವರೆಗೆ ರದ್ದುಗೊಳಿಸಲಾಗಿದ್ದು, ಚೆನ್ನೈನಲ್ಲಿ ಸಂಜೆ 6 ಗಂಟೆಯವರೆಗೆ ರದ್ದುಗೊಳಿಸಲಾಗಿದೆ (ಏಜೆನ್ಸೀಸ್).