ಭಾರತದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಹರಾಜು; ಕೇವಲ 0001 ನಂಬರ್‌ಗಾಗಿ ವ್ಯಕ್ತಿಯೊಬ್ಬರು ನೀಡಿದ ಹಣ ಎಷ್ಟು ಗೊತ್ತಾ..?
ಅಮರಾವತಿ: ಭಾರತೀಯ ವಾಹನ ಇತಿಹಾಸದಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಆಂಧ್ರಪ್ರದೇಶದ ಗುಂಟೂರು ಮೂಲದ ಕಿರಣ್ ಕೊಲ್ಪಾಕುಲ ಎಂಬುವವರು ತಮ್ಮ ಇಷ್ಟದ ಸಂಖ್ಯೆಗಾಗಿ ಬರೋಬ್ಬರಿ ₹2.08 ಕೋಟಿ ಹಣವನ್ನು ಪಾವತಿಸುವ ಮೂಲಕ ದೇಶದ ಅತ್ಯಂತ ದುಬಾರಿ ವಾಹನ ನೋಂದಣಿ(Most Expensive Number Plate) ಸಂಖ್ಯೆಯ ಮಾಲೀಕರಾಗಿದ್ದಾರೆ.
ಏನಿದು 0001 ಮ್ಯಾಜಿಕ್..?
ದಾಖಲೆಯ ಮೊತ್ತ
ಕಿರಣ್ ಅವರು ಹರಾಜಿನಲ್ಲಿ DDC 0001 ಎಂಬ ವಿಶೇಷ ನೋಂದಣಿ ಸಂಖ್ಯೆಯನ್ನು ಖರೀದಿಸಿದ್ದಾರೆ. ಈ ಮೊತ್ತವು ಭಾರತದಲ್ಲಿ ಒಂದು ನಂಬರ್ ಪ್ಲೇಟ್‌ಗಾಗಿ ಪಾವತಿಸಲಾದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ಒಂದು ಐಷಾರಾಮಿ ಫೆರಾರಿ ಅಥವಾ ಲಂಬೋರ್ಗಿನಿ ಕಾರಿನ ಬೆಲೆಗಿಂತಲೂ ಈ ನಂಬರ್ ಪ್ಲೇಟ್ ಬೆಲೆ ಹೆಚ್ಚಾಗಿದೆ.
ಹಳೆಯ ಮಾಲೀಕರು
ಈ ನಂಬರ್ ಪ್ಲೇಟ್ ಈ ಮೊದಲು ಐಷಾರಾಮಿ ಕಾರುಗಳ ಮಳಿಗೆ ಬಿಗ್ ಬಾಯ್ ಟಾಯ್ಸ್ ಸಂಸ್ಥಾಪಕ ಜತಿನ್ ಅಹುಜಾ ಅವರ ಬಳಿ ಇತ್ತು. ಈಗ ಹರಾಜಿನ ಮೂಲಕ ಅದು ಕಿರಣ್ ಅವರ ಪಾಲಾಗಿದೆ.
ವಿಐಪಿ ಸಂಖ್ಯೆಗಳ ಕ್ರೇಜ್
ಭಾರತದಲ್ಲಿ 0001 ಸಂಖ್ಯೆಗೆ ಮೊದಲಿನಿಂದಲೂ ಭಾರಿ ಬೇಡಿಕೆಯಿದೆ. ಆದರೆ ಕೋಟಿ ದಾಟಿದ ಈ ಹರಾಜು ಪ್ರಕ್ರಿಯೆ ಶ್ರೀಮಂತರ ಶೋಕಿ ಮತ್ತು ಸಂಖ್ಯಾಶಾಸ್ತ್ರದ ಮೇಲಿರುವ ನಂಬಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.
ಹಣವಂತರು ಮತ್ತು ಹವ್ಯಾಸ
ಸಾಮಾನ್ಯವಾಗಿ ವಿಐಪಿ ಸಂಖ್ಯೆಗಳ ಹರಾಜು ಲಕ್ಷಗಳಲ್ಲಿ ನಡೆಯುತ್ತದೆ. ಆದರೆ ಈ DDC 0001 ನಂಬರ್ ಪ್ಲೇಟ್ ಹರಾಜಿನಲ್ಲಿ ಅನೇಕ ಉದ್ಯಮಿಗಳು ಭಾಗವಹಿಸಿದ್ದು, ಅಂತಿಮವಾಗಿ ಕಿರಣ್ ಕೊಲ್ಪಾಕುಲ ಅವರು ₹2.08 ಕೋಟಿ ಬಿಡ್ ಮಾಡಿ ಜಯಗಳಿಸಿದ್ದಾರೆ. ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಹುಚ್ಚು ಹವ್ಯಾಸ ಎಂದರೆ, ಇನ್ನು ಕೆಲವರು ಇದು ಅವರವರ ಇಷ್ಟ ಮತ್ತು ಅಂತಸ್ತಿನ ಪ್ರದರ್ಶನ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಈ ಹಿಂದೆ ಕೇರಳ ಮತ್ತು ಚಂಡೀಗಢದಲ್ಲಿ ವಿಐಪಿ ನಂಬರ್ ಪ್ಲೇಟ್‌ಗಳು ಒಂದು ಕೋಟಿ ರೂಪಾಯಿಗಳ ಹತ್ತಿರ ಹರಾಜಾಗಿದ್ದವು. ಆದರೆ 2 ಕೋಟಿಯ ಗಡಿ ದಾಟಿರುವುದು ಇದೇ ಮೊದಲಾಗಿದೆ.
ಕೆಲವರಿಗೆ ವಸ್ತುಗಳ ಮೌಲ್ಯ ಮುಖ್ಯವಾದರೆ, ಇನ್ನು ಕೆಲವರಿಗೆ ಆ ವಸ್ತು ಹೊಂದಿರುವ ಅನನ್ಯತೆ ಮುಖ್ಯವಾಗುತ್ತದೆ. ಕಿರಣ್ ಅವರ ಈ ನಿರ್ಧಾರ ಅದೇ ಸಾಲಿಗೆ ಸೇರುತ್ತದೆ ಎಂದು ಆಟೋಮೊಬೈಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).