ಸಾಗರೋತ್ತರ ಕಾಂಗ್ರೆಸ್​ನ ಮುಖ್ಯಸ್ಥ ಸ್ಯಾಮ್​ ಪಿತ್ರೋಡಾ, ಬಿಜೆಪಿ ವಕ್ತಾರ ಶೆಹಜಾದ್​ ಪೂನಾವಾಲಾ 
ದೇಶ

ಭಾರತೀಯರು ಬೇರೆ ದೇಶದವರ ಸೇವೆಗೆ ಬಳಕೆಯಾಗುತ್ತಿದ್ದಾರೆ: ಸ್ಯಾಮ್ ಪಿತ್ರೋಡಾ ವಿವಾದಾತ್ಮಕ ಹೇಳಿಕೆ; ತಿರುಗೇಟು ನೀಡಿದ ಬಿಜೆಪಿ | Sam Pitroda

ಪ್ರಮುಖ ಮುಖ್ಯಾಂಶಗಳು

  • ಭಾರತೀಯರು ವಿದೇಶಿಯರ ಸೇವೆಗೆ ಮೀಸಲಾಗಿದ್ದಾರೆ : ಸ್ಯಾಮ್​ ಪಿತ್ರೋಡಾ
  • ಭಾರತದಲ್ಲಿ ಒಂದೇ ಒಂದು ಆಪರೇಟಿಂಗ್​ ಸಿಸ್ಟಮ್ ಇಲ್ಲ ಎಂದ ಕಾಂಗ್ರೆಸ್​ ನಾಯಕ
  • ಇವನಿಗೆ ಭಾರತೀಯರನ್ನು ಅವಮಾನಿಸುವುದೇ ಹವ್ಯಾಸ ಎಂದ ಬಿಜೆಪಿ ವಕ್ತಾರ
ನವದೆಹಲಿ: ಭಾರತೀಯರು ಪ್ರಪಂಚದ ಇತರ ದೇಶದವರ ಸೇವೆಗಾಗಿ ಬಳಕೆಯಾಗುತ್ತಿದ್ದಾರೆ ಎಂದು ಸಾಗರೋತ್ತರ ಕಾಂಗ್ರೆಸ್​ನ ಮುಖ್ಯಸ್ಥ ಸ್ಯಾಮ್​ ಪಿತ್ರೋಡಾ (Sam Pitroda) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾರತೀಯ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಸುಮಾರು 1.5 ಬಿಲಿಯಲ್​ ಜನರಿದ್ದಾರೆ, ಆದರೆ ನಮಗೇ ಇಲ್ಲಿಯ ತನಕ ನಮ್ಮದೇ ಆದ ಒಂದು ಆಪರೇಟಿಂಗ್​ ಸಿಸ್ಟಮ್​ನ್ನು ತಯಾರಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸ್ಯಾಮ್​ ಪಿತ್ರೋಡಾ ಹೇಳಿದ್ದೇನು?

ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾಂಗ್ರೆಸ್​ನ ಹಿರಿಯ ನಾಯಕ, ಭಾರತ ಕೇವಲ ಬುದ್ಧಿವಂತರನ್ನು ತಯಾರಿಸುವ ಕಾರ್ಖಾನೆಯಾಗಿದೆ, ಆದರೆ ಅವರ ಬುದ್ಧಿವಂತಿಕೆಯನ್ನು ಬಳಸಿಕೊಂಡು ಆವಿಷ್ಕಾರ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಭಾರತದ ಕೇವಲ ಕಚ್ಚಾ ಪ್ರತಿಭೆಗಳನ್ನು ತಯಾರಿಸುತ್ತಿದ್ದು, ಇವರು ಅಂತಿಮವಾಗಿ ವಿಶ್ವದ ಬ್ಯಾಂಕಿಂಗ್​, ಪ್ರೋಗ್ರಾಮಿಂಗ್​, ಉದ್ಯಮ, ಉತ್ಪಾನೆ, ಕಾನೂನು ಕ್ಷೇತ್ರದಲ್ಲಿ ದುಡಿದು ಆ ದೇಶದ ಉನ್ನತಿಗಾಗಿ ಕೆಲಸ ಮಾಡುವಂತಾಗಿದೆ ಎಂದು ಹೇಳಿದರು.
ಭಾರತದಲ್ಲಿ ಸುಮಾರು 1.5 ಬಿಲಿಯನ್​ ಜನಸಂಖ್ಯೆ ಇದೆ. ಆದರೆ ಮೈಕ್ರೋಸಾಪ್ಟ್​ ರೀತಿಯ ಒಂದೇ ಒಂದು ಆಪರೇಟಿಂಗ್​ ಸಿಸ್ಟಮ್​ ಇಲ್ಲ. ನಮ್ಮ ದೇಶದ ಪ್ರತಿಭಾವಂತರಲ್ಲಾ ಭಾರತ ಬಿಟ್ಟು ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಿತ್ರೋಡಾಗೆ ಬಿಜೆಪಿ ತರಾಟೆ

ಸ್ಯಾಮ್​ ಪಿತ್ರೋಡಾ ಅವರ ಈ ಹೇಳಿಕೆ ವೈರಲ್​ ಆಗುತ್ತಿದ್ದಂತೆ, ಬಿಜೆಪಿ ಕಡೆಯಿಂದ ತೀಕ್ಷ ಪ್ರತಿಕ್ರಿಯೆಗಳು ಬರಲಾರಂಭಿಸಿದ್ದು, ಎಐ ಸಮಿತ್​ನಲ್ಲಿ ಅರೆಬೆತ್ತಲ ಪ್ರದರ್ಶನ ನಂತರ ಈದೀಗ ಲಷ್ಕರ್ ಇ ಕಾಂಗ್ರೆಸ್​ನ ಸಲಹೆಗಾರ ಮತ್ತೆ ನಾಲಿಗೆ ಹರಿಬಿಟ್ಟಿದ್ದಾನೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ಹೆಸರನ್ನು ಹಾಳು ಮಾಡುವುದೇ ಕಾಂಗ್ರೆಸ್​ ಮತ್ತು ಈ ಸ್ಯಾಮ್​ ಪಿತ್ರೋಡಾನ ಖಯಾಲಿಯಾಗಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್​ ಪೂನಾವಾಲಾ ತಮ್ಮ ಎಕ್ಸ್​(ಟ್ವಿಟರ್​) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭಾರತೀಯರು ಇಲ್ಲಿವರೆಗೆ ಒಂದೇ ಒಂದು ಆಪರೇಟಿಂಗ್​ ಸಿಸ್ಟಮ್​ ತಯಾರಿಸಿಲ್ಲ ಎಂದು ಇವನು ಹೇಳುತ್ತಿದ್ದಾನೆ. ಇವನಿಗೆ ಬಾಸ್​ ಲಿನುಕ್ಸ್​ (BOSS Linux), ಮಾಯಾ ಓಎಸ್​ (Maya OS), ಫ್ರೈಮ್​ ಓಎಸ್​ (PrimeOS), ಭಾರ್​ ಓಎಸ್​(BharOS), ಇಂಡಸ್​ ಓಎಸ್​(IndusOS) ಇವುಗಳ ಬಗ್ಗೆ ಮಾಹಿತಿಯೇ ಇಲ್ಲ. ಕಾಂಗ್ರೆಸ್​ಗೆ ಕೇವಲ ಭಾರತ ಮತ್ತು ಭಾರತೀಯರನ್ನು ಅಗೌರಿಸುವುದೇ ಇವರ ಕೆಲಸವಾಗಿದೆ ಎಂದಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ,(ಏಜನ್ಸೀಸ್​).