ಪಾಕಿಸ್ತಾನ: ದುಬೈ ಅಥವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೊಂದರಲ್ಲಿ ಭಾರತೀಯ ವಲಸೆ ಅಧಿಕಾರಿಯೊಬ್ಬರು ತಮ್ಮ ಪಾಸ್‌ಪೋರ್ಟ್ ಪರಿಶೀಲಿಸುವಾಗ ತಮ್ಮೊಂದಿಗೆ ಫ್ಲರ್ಟ್ ಮಾಡಿದ್ದಾರೆ ಎಂದು ಪಾಕಿಸ್ತಾನಿ (Pakistani ) ಮಹಿಳೆಯೊಬ್ಬರು ಭಾರತೀಯ ಪುರುಷರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಮಹಿಳೆಯ ಪ್ರಕಾರ, ಅಧಿಕಾರಿ ಆಕೆಯ ಪಾಸ್‌ಪೋರ್ಟ್ ನೋಡಿ "ನೀವು ಪಾಕಿಸ್ತಾನದವರೇ? ಪಾಕಿಸ್ತಾನಿ ಹುಡುಗಿಯರು ಇಷ್ಟೊಂದು ಸುಂದರವಾಗಿರುತ್ತಾರೆ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಫೋನ್ ನಂಬರ್ ಕೇಳಲು ಪ್ರಯತ್ನಿಸಿದರು ಮತ್ತು ಆಕೆ ಹೋದ ನಂತರವೂ ಕಿರುನಗೆ ಬೀರುತ್ತಾ ನೋಡುತ್ತಿದ್ದರು ಎಂದು ಮಹಿಳೆ ವಿಡಿಯೋದಲ್ಲಿ ವಿವರಿಸಿದ್ದಾರೆ.
ಭಾರತೀಯ ಪುರುಷರಿಗೆ ಪಾಕಿಸ್ತಾನಿ ಹುಡುಗಿಯರೆಂದರೆ ಒಂದು ರೀತಿಯ ಕ್ರೇಜ್ ಇದೆ. ನಮ್ಮ ಸೌಂದರ್ಯಕ್ಕೆ ಅವರು ಬೇಗನೆ ಮಾರುಹೋಗುತ್ತಾರೆ" ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಇದನ್ನು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ಸ್ಟಂಟ್ ಎಂದು ಟೀಕಿಸಿದ್ದಾರೆ. ಇನ್ನು ಕೆಲವರು ಕೆಲಸದ ಸಮಯದಲ್ಲಿ ಅಧಿಕಾರಿಗಳು ಹೀಗೆ ವರ್ತಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.