ತಾಳಲಾರದೇ ಕೆನಡಾದಲ್ಲಿ ಭಾರತೀಯನ ಸಾವು
- ಭಾರತೀಯ ಮೂಲದ ರೋಗಿಯೊಬ್ಬರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಗೆ ಸಾವು
- ಕೆನಡಾದ ಎಡ್ಮಂಟನ್‌ನಲ್ಲಿರುವ ಗ್ರೇ ನನ್ಸ್ ಆಸ್ಪತ್ರೆಯಲ್ಲಿ ನಡೆದ ಘಟನೆ
- ಗೌಪ್ಯತೆ ಕಾರಣಗಳನ್ನು ಒಡ್ಡಿ ರೋಗಿಯ ಚಿಕಿತ್ಸೆಯ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದ ಆಸ್ಪತ್ರೆ
ಒಟ್ಟಾವ: ಎದೆನೋವಿನಿಂದಾಗಿ ಆಸ್ಪತ್ರೆಗೆ ಹೋದ ಭಾರತೀಯ ಮೂಲದ ರೋಗಿಯೊಬ್ಬರಿಗೆ ( Indian Man ) ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವ ಕರುಣಾಜನಕ ಘಟನೆ ಕೆನಡಾದ ಎಡ್ಮಂಟನ್‌ನಲ್ಲಿರುವ ಗ್ರೇ ನನ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಭಾರತೀಯ ಮೂಲದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಮೃತರನ್ನು ಪ್ರಶಾಂತ್ ಶ್ರೀಕುಮಾರ್ (44) ಎಂದು ಗುರುತಿಸಲಾಗಿದೆ. ಪ್ರಶಾಂತ್ ಅವರು ಎದೆ ನೋವಿನಿಂದ ಬಳಲುತ್ತಿದ್ದರು. ನೋವನ್ನು ಸಹಿಸಲಾಗದೇ ತಮ್ಮ ತಂದೆ ಶ್ರೀಕುಮಾರ್ ಅವರಿಗೆ ತಿಳಿಸಿದರು. ಬಳಿಕ, ಅವರ ತಂದೆ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದರು.
ಪ್ರಶಾಂತ್ ಅವರು ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಪ್ರಶಾಂತ್ ಅವರಿಗೆ ಟ್ಯಾಬ್ಲೆಟ್ ನೀಡಿದರು. ಇಸಿಜಿ ಮಾಡಿ, ಯಾವುದೇ ದೊಡ್ಡ ಸಮಸ್ಯೆ ಇಲ್ಲ ಎಂದರು. ಅಲ್ಲದೆ, ಪ್ರಶಾಂತ್ ಅವರನ್ನು ಸ್ವಲ್ಪ ಹೊತ್ತು ಕಾಯುವ ಕೋಣೆಯಲ್ಲಿ ಕುಳಿತುಕೊಳ್ಳಲು ಹೇಳಿದರು. ಇದಾದ ಸ್ವಲ್ಪ ಸಮಯದ ನಂತರ, ಅವರ ತಂದೆ ಶ್ರೀಕುಮಾರ್ ಆಸ್ಪತ್ರೆಗೆ ಬಂದರು.
ಅಪ್ಪನನ್ನು ನೋಡಿದ ಪ್ರಶಾಂತ್, ಅಪ್ಪಾ, ನನಗೆ ನೋವು ಸಹಿಸಲು ಆಗುತ್ತಿಲ್ಲ ಎಂದು ಕಣ್ಣೀರಾಕುತ್ತಾ ಹೇಳಿದರು. ಬಹಳ ಸಮಯದ ನಂತರ, ನರ್ಸ್‌ಗಳು ತಮ್ಮ ಮಗನ ರಕ್ತದೊತ್ತಡವನ್ನು ಪರಿಶೀಲಿಸಿದರು. ಆದರೆ, ಬಿಪಿ ಹೆಚ್ಚಾಗುತ್ತಲೇ ಇತ್ತು. ಸಂಪೂರ್ಣವಾಗಿ ನಿಯಂತ್ರಣ ತಪ್ಪಿದಂತೆ ತೋರುತ್ತಿತ್ತು ಎಂದು ಕುಮಾರ್ ಗ್ಲೋಬಲ್ ನ್ಯೂಸ್‌ಗೆ ತಿಳಿಸಿದ್ದಾರೆ.
ಆರೋಗ್ಯ ಹದಗೆಟ್ಟ ಕಾರಣ 8 ಗಂಟೆಗಳ ನಂತರ, ಪ್ರಶಾಂತ್ ಅವರನ್ನು ಅಂತಿಮವಾಗಿ ಎಮರ್ಜೆನ್ಸಿ ಕೊಠಡಿಗೆ ಕರೆದೊಯ್ಯಲಾಯಿತು. ಐಸಿಯುನಲ್ಲಿದ್ದಾಗ ನನ್ನ ಮಗ ನನ್ನನ್ನು ನೋಡಿ, ಎದ್ದು ನಿಂತು ತನ್ನ ಎದೆಯ ಮೇಲೆ ಕೈ ಹಾಕಿದನು. ಬಳಿಕ ತಕ್ಷಣ ಕುಸಿದು ಬಿದ್ದನು. ಇದಾದ 10 ಸೆಕೆಂಡುಗಳಲ್ಲಿ ಕೊನೆಯುಸಿರೆಳೆದನು ಎಂದು ಕುಮಾರ್ ಹೇಳಿದರು.
ಅಂದಹಾಗೆ, ಪ್ರಶಾಂತ್ ಅವರು ಪತ್ನಿ ಮತ್ತು 3, 10 ಮತ್ತು 14 ವರ್ಷ ವಯಸ್ಸಿನ ಮೂವರು ಮಕ್ಕಳನ್ನು ಅಗಲಿದ್ದಾರೆ. ಗ್ರೇ ನನ್ಸ್ ಆಸ್ಪತ್ರೆಯು ರೋಗಿಯ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುವ ಮೂಲಕ ಪ್ರತಿಕ್ರಿಯಿಸಿದೆ. ಆದರೆ, ಗೌಪ್ಯತೆಯ ಕಾರಣಗಳನ್ನು ಒಡ್ಡಿ ರೋಗಿಯ ಚಿಕಿತ್ಸೆಯ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ, (ಏಜೆನ್ಸೀಸ್).