Okra Snacks ಸಾಂದರ್ಭಿಕ ಚಿತ್ರ 
ದೇಶ

ಲೋಕಲ್ ಬೆಂಡೆಕಾಯಿ ಈಗ ಗ್ಲೋಬಲ್ ಸ್ನ್ಯಾಕ್! 7,200 ರೂಪಾಯಿ ಕೆಜಿ ರೇಟ್ ನೋಡಿ ಭಾರತೀಯ ಯುವಕ ಪ್ರಜ್ಞೆ ತಪ್ಪೋದಷ್ಟೇ ಬಾಕಿ.. Okra Snacks

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಅಡುಗೆಮನೆಗಳಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ತರಕಾರಿಗಳಲ್ಲಿ ಬೆಂಡೆಕಾಯಿ ಕೂಡ ಒಂದು
  • ಇದೇ ಬೆಂಡೆಕಾಯಿಯ ಬೆಲೆ ವಿದೇಶದಲ್ಲಿ ಎಷ್ಟಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ?
  • ಬೆಂಡೆಕಾಯಿ ಪ್ರತಿ ಪೌಂಡ್​ಗೆ ಸುಮಾರು 40 ಡಾಲರ್​ ಎಂದು ತೋರಿಸುತ್ತಿರುವ ವಿಡಿಯೋ ವೈರಲ್​
ನ್ಯೂಯಾರ್ಕ್: ಭಾರತೀಯ ಅಡುಗೆಮನೆಗಳಲ್ಲಿ ನಿತ್ಯವೂ ಅತ್ಯಂತ ಸಾಮಾನ್ಯ ಹಾಗೂ ಕೈಗೆಟುಕುವ ದರದಲ್ಲಿ ಸಿಗುವ ತರಕಾರಿಗಳಲ್ಲಿ ಬೆಂಡೆಕಾಯಿ ಕೂಡ ಒಂದು. ಆದರೆ, ಇದೇ ಬೆಂಡೆಕಾಯಿಯ ಬೆಲೆ ವಿದೇಶದಲ್ಲಿ ಎಷ್ಟಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಅಮೆರಿಕಕ್ಕೆ ಪ್ರವಾಸ ಕೈಗೊಂಡ ಭಾರತೀಯ ವ್ಯಕ್ತಿಯೊಬ್ಬರು ಅಲ್ಲಿನ ಸೂಪರ್‌ ಮಾರ್ಕೆಟ್‌ವೊಂದರಲ್ಲಿ ಬೆಂಡೆಕಾಯಿ ಬೆಲೆಯನ್ನು ನೋಡಿ ಶಾಕ್ ಆಗಿದ್ದಾರೆ. ಅದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿ ಅವರು ಹಂಚಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ.
ಪ್ರವಾಸಿ ಹಂಚಿಕೊಂಡ ವಿಡಿಯೋದಲ್ಲಿ, ಪ್ರತಿ ಪೌಂಡ್​ಗೆ ಸುಮಾರು 40 ಡಾಲರ್​ ಎಂದು ತೋರಿಸಿದ್ದಾರೆ. ನಂತರ ಅವರು ಅದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದ್ದು, 1 ಕೆಜಿಗೆ ಸುಮಾರು 7,200 ರೂಗಳಷ್ಟು ಬೆಲೆ ಆಗಿರುವುದನ್ನು ಕಂಡ ಅವರು ಅಕ್ಷರಶಃ ದಂಗಾಗಿದ್ದಾರೆ. ಆದಾಗ್ಯೂ, ಭಾರತದಲ್ಲಿನ ಅಗ್ಗದ ದರಕ್ಕೆ ಹೋಲಿಸಿದರೆ ಅಮೆರಿಕದ ಈ ಬೆಲೆ ಆಕಾಶ-ಭೂಮಿಯಷ್ಟೇ ತದ್ವಿರುದ್ಧವಾಗಿತ್ತು.
"ನಾವು ಭಾರತದಲ್ಲಿ ಬೆಂಡೆಕಾಯಿಯನ್ನು ನಿತ್ಯದ ಸಾಮಾನ್ಯ ತರಕಾರಿಯಾಗಿ ಅಡುಗೆ ಮಾಡಿ ತಿನ್ನುತ್ತೇವೆ. ಆದರೆ, ಅಮೆರಿಕದಲ್ಲಿ ಅವರು ಅದನ್ನೇ ಚೆನ್ನಾಗಿ ಹುರಿದು ಒಂದು ಪುಟ್ಟ ಆಕರ್ಷಕ ಚೀಲದಲ್ಲಿ ಪ್ಯಾಕ್ ಮಾಡುತ್ತಾರೆ. ಅಷ್ಟೇ, ಅದು ತಕ್ಷಣವೇ ಸೂಪರ್ ಮಾರ್ಕೆಟ್ ಶೆಲ್ಫ್‌ಗಳಲ್ಲಿ ಒಂದು 'ಪ್ರೀಮಿಯಂ ಸ್ನ್ಯಾಕ್' ಆಗಿ ಬದಲಾಗಿಬಿಡುತ್ತದೆ! ಕೇವಲ 85 ಗ್ರಾಂ ತೂಕದ ಪ್ಯಾಕೆಟ್‌ಗೆ ಬರೋಬ್ಬರಿ $6.50 (ಸುಮಾರು 540 ರೂಪಾಯಿ) ಬೆಲೆ! ಇದು ಪ್ರಸಿದ್ಧ ಲೇಸ್ ಆಲೂಗಡ್ಡೆ ಚಿಪ್ಸ್‌ಗಿಂತಲೂ ಹತ್ತಾರು ಪಟ್ಟು ಹೆಚ್ಚು ದುಬಾರಿಯಾಗಿದೆ ಎಂದು ತಮ್ಮ ವಿಡಿಯೋಕ್ಕೆ ಶೀರ್ಷಿಕೆ ಬರೆದಿದ್ದಾರೆ.
ಹಾಗಾದರೆ ಹುಡುಗರೇ, ನಾನು ನಿಮಗೆ ನಿಜವಾಗಿಯೂ ಒಂದು ಆಸಕ್ತಿದಾಯಕವಾದದ್ದನ್ನು ತೋರಿಸುತ್ತೇನೆ. ಇಲ್ಲಿ ನೋಡಿ, ಇದು ಏನು? ಭಾರತದಲ್ಲಿ ನಾವು ನಿತ್ಯವೂ ತರಕಾರಿ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಅದೇ ಬೆಂಡೆಕಾಯಿ ಅಮೆರಿಕದಲ್ಲಿ ಹೇಗೆ ಸಿಗುತ್ತಿದೆ ನೋಡಿ! ಹೌದು, ಅದೇ ಬೆಂಡೆಕಾಯಿ ಇಲ್ಲಿ ಸ್ನ್ಯಾಕ್ ರೂಪದಲ್ಲಿ ಲಭ್ಯವಿದೆ. ನಾನು ಹೇಳುತ್ತಿರುವುದು, ಇದನ್ನು ಚೆನ್ನಾಗಿ ಹುರಿದು, ಮೇಲೆಲ್ಲಾ ಮಸಾಲೆಗಳನ್ನು ಉದುರಿಸಿ ಸಿದ್ಧಪಡಿಸಲಾಗಿದೆ. ಒಮ್ಮೆ ಇದರ ಬೆಲೆಯನ್ನು ನೀವೇ ಪರಿಶೀಲಿಸಿ. ಅದು ಎಷ್ಟು ಗೊತ್ತಾ? ಬರೋಬ್ಬರಿ 6.50 ಡಾಲರ್​ ಅಂದರೆ, ಭಾರತೀಯ ರೂಪಾಯಿಗಳಲ್ಲಿ 600 ರೂ. ಪ್ರಮಾಣ ಎಷ್ಟು ಗೊತ್ತಾ ಕೇವಲ 85 ಗ್ರಾಂ. ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದರು. ಒಬ್ಬ ಬಳಕೆದಾರ ಇದು ಅಮೆರಿಕನ್ನರಿಗೆ ದುಬಾರಿಯಲ್ಲ ಏಕೆಂದರೆ ಅವರ ಆದಾಯ ಹೆಚ್ಚಾಗಿದೆ ಮತ್ತು ಅದು ಆರೋಗ್ಯಕರವಾಗಿದೆ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ಆ ಮಸಾಲೆಗಳೊಂದಿಗೆ ಗರಿಷ್ಟ 20 ರೂ ದಾಟಿ ಯಾವ ಶ್ರೀಮಂತರೂ ಖರೀದಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್​).