ಹೈದರಾಬಾದ್: ನಾಯಿಯ ಪ್ರೀತಿ ಅತ್ಯಂತ ಪವಿತ್ರ ಪ್ರೀತಿಗಳಲ್ಲಿ ಒಂದು ಎಂಬ ಮಾತನ್ನು ಹೈದರಾಬಾದ್‌ನ ದಿವ್ಯಾ ಮತ್ತು ಜಾನ್ ದಂಪತಿ (Indian Couple) ಅಕ್ಷರಶಃ ಸಾಬೀತುಪಡಿಸಿದ್ದಾರೆ. ವೃತ್ತಿ ಅಥವಾ ಜೀವನದ ಕಾರಣಗಳಿಗಾಗಿ ವಿದೇಶಕ್ಕೆ ಹೋದಾಗ ತಮ್ಮ ಸಾಕುಪ್ರಾಣಿಗಳನ್ನು ಬೇರೆಯವರಿಗೆ ನೀಡುವ ಅಥವಾ ಆಶ್ರಮಗಳಿಗೆ ಬಿಡುವ ಜನರ ಮಧ್ಯೆ, ಈ ದಂಪತಿ 15 ಲಕ್ಷ ರೂಗಳನ್ನು ಖರ್ಚು ಮಾಡಿ ತಮ್ಮ ಪ್ರೀತಿಯ ನಾಯಿಯನ್ನು ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗಿದ್ದು, ಈ ಘಟನೆಯು ಸಧ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಘಟನೆ ಏನು?
ದಂಪತಿ ಹೈದರಾಬಾದ್‌ನಿಂದ ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದಾಗ ಅವರ ಮುಂದೆ ಒಂದು ದೊಡ್ಡ ಸವಾಲು ಕಾದಿತ್ತು. ವಿದೇಶಕ್ಕೆ ಸಾಕು ಪ್ರಾಣಿಗಳನ್ನು ಕರೆದುಕೊಂಡು ಹೋಗುವುದು ಕಾನೂನುಬದ್ಧವಾಗಿ ಮತ್ತು ಆರ್ಥಿಕವಾಗಿ ಅಷ್ಟು ಸುಲಭದ ಮಾತಲ್ಲ. ಆದರೆ, ದಂಪತಿ ಹಣದ ವಿಚಾರ ಮಾಡದೇ ತಮ್ಮ ಪ್ರೀತಿಯ ನಾಯಿಯನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ಬರೋಬ್ಬರಿ 15 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.
ಆದಾಗ್ಯೂ, ಈ ದಂಪತಿ ತಮ್ಮ ಪ್ರಯಾಣದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದು, ಭಾರತದಿಂದ ಆಸ್ಟ್ರೇಲಿಯಾಕ್ಕೆ ಸಾಕುಪ್ರಾಣಿಗಳನ್ನು ನೇರವಾಗಿ ಆಮದು ಮಾಡಿಕೊಳ್ಳಲು ಅನುಮತಿಸುವುದಿಲ್ಲ. ದೇಶದ ನಿಯಮಗಳ ಪ್ರಕಾರ, ಅವುಗಳನ್ನು ರೇಬೀಸ್ ಮುಕ್ತ ದೇಶದಲ್ಲಿ ಆರು ತಿಂಗಳು ಕಳೆಯಲು ಬಿಡಬೇಕು. ನಂತರ ಕರೆದುಕೊಂಡು ಹೋಗಬೇಕು ಎಂದರು. ಈ ರೀತಿಯ ದೀರ್ಘ ಕಾಯುವಿಕೆ, ಭಾರೀ ಆರ್ಥಿಕ ಹೊರೆ ಮತ್ತು ಅತ್ಯಂತ ನೋವಿನಿಂದ, ತಿಂಗಳುಗಟ್ಟಲೆ ನಮ್ಮ ಆಕಾಶನಿಂದ ಬೇರ್ಪಟ್ಟಿದ್ದರಿಂದ ಅವರಿಗೆ ಈ ಸುದ್ದಿ ತುಂಬಾ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.
ಮೊದಲ ತಿಂಗಳು, ದಂಪತಿಗಳು ಆಕಾಶ(ನಾಯಿ) ಹೊಂದಿಕೊಳ್ಳಲು ಸಹಾಯ ಮಾಡಲು ದುಬೈನಲ್ಲಿಯೇ ಇದ್ದರು ಮತ್ತು ಉಳಿದ ಅವಧಿಗೆ ಅವನನ್ನು ಬೋರ್ಡಿಂಗ್ ಸೌಲಭ್ಯದಲ್ಲಿ ಬಿಟ್ಟರು. ಇಡೀ ಪ್ರಕ್ರಿಯೆಯು ಸುಮಾರು 190 ದಿನಗಳನ್ನು ತೆಗೆದುಕೊಂಡಿತು. ನಂತರ ವ್ಯಾಪಕವಾದ ದಾಖಲೆಗಳು, ಪಶುವೈದ್ಯಕೀಯ ಪರೀಕ್ಷೆಗಳು, ವ್ಯಾಕ್ಸಿನೇಷನ್‌ಗಳು ಮತ್ತು ಕ್ವಾರಂಟೈನ್ ಶುಲ್ಕಗಳನ್ನು ಒಳಗೊಂಡಿತ್ತು ಎಂದರು.
ಇದಾದ ನಂತರ ನಮ್ಮ ನಾಯಿಯನ್ನು ಬಿಟ್ಟು ಹೋಗುವುದು ಅತ್ಯಂತ ಕಠಿಣ ಪರಿಶ್ರಮದಲ್ಲಿ ಒಂದಾಗಿತ್ತು. ಅಂತ್ಯವಿಲ್ಲದ ಪ್ರಶ್ನೆಗಳನ್ನು ಕೇಳಿದರು. ನವೀಕರಣಕ್ಕಾಗಿ ಕಾಯುತ್ತಿದ್ದರು. ಇದಾದ ಬಳಿಕ ನಾವು ವಿಡಿಯೋ ಕರೆ ಮಾಡುವ ಮೂಲಕ ನಮ್ಮ ನಾಯಿಯನ್ನು ನೋಡುತ್ತಿದ್ದೆವು ಎಂದರು. ಆರು ತಿಂಗಳು ಮುಗಿದ ನಂತರ ಅಂತಿಮವಾಗಿ, ನಮ್ಮ ಆಕಾಶ ನಮ್ಮೆಡೆಗೆ ಬಂದು ಸೇರಿತು. ಎಲ್ಲಾ ಕಾಯುವಿಕೆ, ಒತ್ತಡ, ಭಯ ಮತ್ತು ತ್ಯಾಗಗಳು ಇದ್ದಕ್ಕಿದ್ದಂತೆ ಸಾರ್ಥಕವೆನಿಸಿತು ಎಂದು ಅಭಿಪ್ರಾಯ ಪಟ್ಟರು.
ಕೊನೆಯದಾಗಿ ನಮ್ಮ ಕುಟುಂಬ ಎಲ್ಲಿ ಹೋದರೂ ಒಟ್ಟಿಗೆ ಇರಬೇಕೆಂದು ನಾವು ಬಯಸಿದ್ದೆವು. ದೀರ್ಘಾವಧಿಯ ಕಾನೂನು ಪ್ರಕ್ರಿಯೆ ಮತ್ತು ದುಬಾರಿ ವಿಮಾನ ಪ್ರಯಾಣದ ನಂತರ ನಮ್ಮ ನಾಯಿಯನ್ನು ಸುರಕ್ಷಿತವಾಗಿ ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಬಂದಿದ್ದೇವೆ ಎಂದು ಹೇಳಿದರು (ಏಜೆನ್ಸೀಸ್).