Ishaq Dar | ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನ ಮಂತ್ರಿ ಇಶಾಕ್ ದಾರ್ 
ದೇಶ

Ishaq Dar | ನೂರ್ ಖಾನ್ ಏರ್‌ಬೇಸ್ ಮೇಲೆ ಭಾರತದ ಅಟ್ಯಾಕ್; ವಾಯುನೆಲೆ ಧ್ವಂಸವಾಗಿದ್ದನ್ನು ಒಪ್ಪಿಕೊಂಡ ಪಾಕ್​ ಉಪಪ್ರಧಾನಿ ಇಶಾಕ್ ದಾರ್

ಇಸ್ಲಾಮಾಬಾದ್​: 2025 ಮೇನಲ್ಲಿ ಭಾರತ ನೆಡೆಸಿದ ಆಪರೇಷನ್ ಸಿಂಧೂರದಲ್ಲಿ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ ಸಂಪೂರ್ಣ ಹಾನಿಯಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನ ಮಂತ್ರಿ ಇಶಾಕ್ ದಾರ್(Ishaq Dar) ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಾರ್, ನಮ್ಮ ಮೇಲೆ ಭಾರತೀಯ ಸೇನೆಯು ಮಾಡಿದ ದಾಳಿಗಳ ಪರಿಣಾಮವಾಗಿ 36 ಗಂಟೆಗಳ ಅವಧಿಯಲ್ಲಿ ಕನಿಷ್ಠ 80 ಡ್ರೋನ್‌ ಪಾಕ್​ ಮೇಲೆ ನೂಗ್ಗಿಸಿತು ಎಂದು ಬಹಿರಂಗಪಡಿಸಿದ್ದಾರೆ.
ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ಮಾಡಿದ ದಾಳಿಯಲ್ಲಿ ಪಾಕಿಸ್ತಾನ 79 ಡ್ರೋನ್‌ಗಳನ್ನು ತಡೆದರೆ, ಒಂದು ಡ್ರೋನ್ ನೂರ್ ಖಾನ್ ವಾಯುನೆಲೆ ಮೇಲೆ ಯಶಸ್ವಿಯಾಗಿ ದಾಳಿ ಮಾಡಿತು. ಈ ದಾಳಿಯಿಂದ ಮಿಲಿಟರಿ ನೆಲೆಗೆ ಭಾರಿ ಹಾನಿ ಉಂಟಾಯಿತು ಎಂದು ದಾರ್​ ದೃಢಪಡಿಸಿದರು.
ದಾಳಿಯ ನಂತರದ ಪರಿಸ್ಥಿತಿಯನ್ನು ಚರ್ಚಿಸಲು ಪ್ರಧಾನಿ ಶಹಬಾಜ್ ಶಾರಿಕ್ ನೇತೃತ್ವದಲ್ಲಿ ಪಾಕಿಸ್ತಾನದ ನಾಗರಿಕ ಮತ್ತು ಮಿಲಿಟರಿ ನಾಯಕತ್ವವು ಮೇ 9 ರ ರಾತ್ರಿ ಸಭೆ ಸೇರಿತು. ಈ ಸಭೆಯಲ್ಲಿ ಹಲವಾರು ನಿರ್ಧಾರಗಳನ್ನು ಅನುಮೋದಿಸಲಾಯಿತು. ಮೇ 10 ರಂದು ನೂರ್ ಖಾನ್ ವಾಯುನೆಲೆಯ ಮೇಲೆ ದಾಳಿ ಮಾಡುವ ಮೂಲಕ ಭಾರತ ತಪ್ಪು ಮಾಡಿದೆ. ಇದು ದಾಳಿಯನ್ನು ಮತ್ತೊಮ್ಮೆ ದೃಢಪಡಿಸುತ್ತದೆ ಎಂದು ದಾರ್ ಸ್ಪಷ್ಟಪಡಿಸಿದ್ದಾರೆ.
ನೂರ್ ಖಾನ್ ವಾಯುನೆಲೆಯು ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ವಾಯುಪಡೆಯ ಪ್ರಮುಖ ವಾಯುನೆಲೆಯಾಗಿದೆ. ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ದಾಳಿಗೆ ಗುರಿಯಾದ 11 ವಾಯುನೆಲೆಗಳಲ್ಲಿ ಇದು ಒಂದಾಗಿದ್ದು, ಸರ್ಗೋಧಾ, ರಫೀಕಿ, ಜಾಕೋಬಾಬಾದ್ ಮತ್ತು ಮುರಿದ್‌ನಲ್ಲಿರುವ ವಾಯುನೆಲೆಗಳ ಜೊತೆಗೆ ಸೇರಿದೆ.
ಪಾಕ್​ ಸಚಿವ ದಾರ್ ಹೇಳಿಕೆ ಸುಳ್ಳು ಎಂದ ಮಾಜಿ ಲೆಫ್ಟಿನೆಂಟ್ ಜನರಲ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೆಜೆಎಸ್ ಧಿಲ್ಲೋನ್, ಪಾಕಿಸ್ತಾನಿ ಸಚಿವರನ್ನು ಹಾನಿಯನ್ನು ಕಡಿಮೆ ತೋರಿಸಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಅಲ್ಲದೆ, ಆಗಸ್ಟ್ 14 ರಂದು 138 ಮರಣೋತ್ತರ ಶೌರ್ಯ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಪಾಕಿಸ್ತಾನದ ಸ್ವಂತ ಮಾಧ್ಯಮಗಳು ವರದಿ ಮಾಡಿವೆ. ಇದು ಹೆಚ್ಚಿನ ಸಾವುನೋವುಗಳ ಸಂಖ್ಯೆಯು 400-500 ಜನ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ,(ಏಜೆನ್ಸೀಸ್).