ಸಾಂದರ್ಭಿಕ ಚಿತ್ರ 
ದೇಶ

ಜಮ್ಮು-ಕಾಶ್ಮೀರದ ಉರಿಯಲ್ಲಿ ಎಲ್​ಓಸಿ ದಾಟಲು ಯತ್ನಿಸಿದ ಮೂವರನ್ನು ಬಂಧಿಸಿದ ಭಾರತೀಯ ಸೇನೆ | Indian Army

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ದೊಳಗೆ ಪ್ರವೇಶಿಸಲು ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ದಾಟಲು ಯತ್ನಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಭಾರತೀಯ ಸೇನೆ(Indian Army) ಬಂಧಿಸಿದೆ ಎಂದು ಭಾನುವಾರ(ಮೇ 31) ವರದಿಯಾಗಿದೆ.
ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನಿವಾಸಿಗಳಾದ ಈ ಮೂವರನ್ನು ಶನಿವಾರ ರಾತ್ರಿ ಹತ್ಲಂಗಾ-ನಂಬ್ಲಾ ಅಕ್ಷದ ಮೂಲಕ ನುಸುಳಲು ಪ್ರಯತ್ನಿಸುತ್ತಿದ್ದಾಗ ತಡೆಹಿಡಿಯಲಾಯಿತು ಎನ್ನಲಾಗಿದೆ. ಬಂಧಿತರಲ್ಲಿ ಒಬ್ಬರು ಮಾಜಿ ಪ್ರಾದೇಶಿಕ ಸೇನೆಯ ಜವಾನ್ ಎಂದು ತಿಳಿದು ಬಂದಿದೆ.
ಪ್ರತ್ಯೇಕ ಘಟನೆಯಲ್ಲಿ ಅದೇ ಸೇನಾ ಘಟಕವು ಸಿಲಿಕೋಟ್ ಪ್ರದೇಶದಲ್ಲಿ ಎಲ್‌ಒಸಿ ದಾಟಿ ಕಾಶ್ಮೀರಕ್ಕೆ ಬಂದ ಪಿಒಕೆ ನಿವಾಸಿಯನ್ನು ಬಂಧಿಸಿದೆ. ಮುಜಫರಾಬಾದ್ ನಿವಾಸಿ ಜೀಶನ್ ಮಿರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ, ಉರಿಯ ತಿಲೈ ಗ್ರಾಮದಲ್ಲಿರುವ ತನ್ನ ಗೆಳತಿಯನ್ನು ಭೇಟಿಯಾಗಲು ಗಡಿ ದಾಟಿದ್ದಾಗಿ ತಿಳಿಸಿದ್ದಾನೆ. ಭದ್ರತಾ ಸಂಸ್ಥೆಗಳು ಮಿರ್ ಮತ್ತು ಮಹಿಳೆ ಇಬ್ಬರನ್ನೂ ವಿಚಾರಣೆ ನಡೆಸುತ್ತಿವೆ ಎಂದು ವರದಿಗಳು ಉಲ್ಲೇಖಿಸಿವೆ (ಏಜೆನ್ಸೀಸ್).