ಮಾರ್ಚ್​ನಲ್ಲಿ ಭಾರತಕ್ಕೆ ಕಾದಿದೆ... 5 ತಿಂಗಳ ಹಿಂದೆ ಖ್ಯಾತ ಜ್ಯೋತಿಷಿ ನುಡಿದಿದ್ದ ಭವಿಷ್ಯ ಕೊನೆಗೂ ನಿಜವಾಯ್ತು! Prediction 
ದೇಶ

ಮಾರ್ಚ್​ನಲ್ಲಿ ಭಾರತಕ್ಕೆ ಕಾದಿದೆ... 5 ತಿಂಗಳ ಹಿಂದೆ ಖ್ಯಾತ ಜ್ಯೋತಿಷಿ ನುಡಿದಿದ್ದ ಭವಿಷ್ಯ ಕೊನೆಗೂ ನಿಜವಾಯ್ತು! Prediction

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಅಡಚಣೆ
  • ಅನೇಕ ನಗರಗಳಲ್ಲಿನ ಹೋಟೆಲ್‌ಗಳು ಮತ್ತು ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ
  • ಮನೆಯಲ್ಲಿ ಅಡುಗೆ ಮಾಡಲು ಇಂಡಕ್ಷನ್ ಕುಕ್ಕರ್‌ ಬಳಸುವ ಟ್ರೆಂಡ್​ ಶುರುವಾಗಿದೆ
  • ಇದರ ನಡುವೆ ಜ್ಯೋತಿಷಿಯೊಬ್ಬರು ನುಡಿದಿದ್ದ ಭವಿಷ್ಯವಾಣಿ ಇದೀಗ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ
Prediction : ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಅಡಚಣೆ ಉಂಟಾದ ಬೆನ್ನಲ್ಲೇ ದೇಶವು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅನೇಕ ನಗರಗಳಲ್ಲಿನ ಹೋಟೆಲ್‌ಗಳು ಮತ್ತು ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಲ್ಲಿ ಸಾಕಷ್ಟು ಹೋಟೆಲ್‌ಗಳು ಮುಚ್ಚಲ್ಪಟ್ಟಿವೆ. ಮನೆಯಲ್ಲಿ ಅಡುಗೆ ಮಾಡಲು ಇಂಡಕ್ಷನ್ ಕುಕ್ಕರ್‌ ಬಳಸುವ ಟ್ರೆಂಡ್​ ಶುರುವಾಗಿದೆ. ಇರಾನ್ ಯುದ್ಧದಿಂದಾಗಿ ಗಲ್ಫ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಿರುವುದು ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಎಲ್​ಪಿಜಿ ಕೊರತೆ ಉಂಟಾಗಿದೆ.
ನೈಸರ್ಗಿಕ ಅನಿಲವನ್ನು ಸಾಗಿಸುವ ಎರಡು ಹಡಗುಗಳು ಶೀಘ್ರದಲ್ಲೇ ಭಾರತಕ್ಕೆ ಬರಲಿವೆ ಮತ್ತು ಅಡುಗೆ ಅನಿಲದ ಕೊರತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನಿನ್ನೆ (ಮಾರ್ಚ್​ 14) ಘೋಷಿಸಿದೆ. ಬುಕಿಂಗ್ ಮಾಡಿದ ಎರಡೂವರೆ ದಿನಗಳಲ್ಲಿ ದೇಶೀಯ ಗ್ರಾಹಕರು ಸಿಲಿಂಡರ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ಜನರು ನಿಟ್ಟುಸಿರುವ ಬಿಟ್ಟರು ಕೂಡ ವಾಸ್ತವವಾಗಿ ಸಿಲಿಂಡರ್​ಗಳ ಅಭಾವ ಸೃಷ್ಟಿಯಾಗಿದೆ. ಏಕೆಂದರೆ, ಯುದ್ಧವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಯಲ್ಲಿ ಸಿಲಿಂಡರ್​ ಮಾರಾಟದಲ್ಲಿ ತೊಡಗಿದ್ದಾರೆ.
ಇನ್ನು ದೇಶಾದ್ಯಂತ ಎಲ್​ಪಿಜಿ ಸಿಲಿಂಡರ್​ ಪೂರೈಕೆ ಸಮಸ್ಯೆ ಬಾದಿಸುತ್ತಿರುವಾಗಲೇ ಜ್ಯೋತಿಷಿಯೊಬ್ಬರು ಮಾಡಿರುವ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮಾರ್ಚ್‌ ತಿಂಗಳಲ್ಲಿ ಇಂಧನ ಮತ್ತು ನೈಸರ್ಗಿಕ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಜ್ಯೋತಿಷಿಯೊಬ್ಬರು ಮೊದಲೇ ಭವಿಷ್ಯ ನುಡಿದಿದ್ದರು. ಆ ಜ್ಯೋತಿಷಿ ಯಾರೆಂದರೆ, ಪ್ರಶಾಂತ್​ ಕಿಣಿ. ತಮ್ಮ ಎಕ್ಸ್​ ಖಾತೆಯಲ್ಲಿ 2025, ಸೆಪ್ಟೆಂಬರ್​ 27ರಂದು ಬರೆದುಕೊಂಡಿದ್ದ ಭವಿಷ್ಯವಾಣಿ ಇದೀಗ ನಿಜವಾಗಿದೆ.

ಭವಿಷ್ಯವಾಣಿ ಏನಿತ್ತು?

2026, ಮಾರ್ಚ್ ತಿಂಗಳ ಬಳಿಕ ಭಾರತವು ಇಂಧನ ಮತ್ತು ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಮ್ಮ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದರು. ಇದೀಗ ಇಡೀ ದೇಶ ಅಡುಗೆ ಅನಿಲ ಪೂರೈಕೆಯಲ್ಲಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗಲೇ ಮಾರ್ಚ್ 11 ರಂದು ಪ್ರಶಾಂತ್​ ಕಿಣಿ ಅವರು ಮತ್ತೆ ಅದೇ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಕೇವಲ 5 ತಿಂಗಳಲ್ಲಿ ಕಿಣಿ ಹೇಳಿದ ಭವಿಷ್ಯವಾಣಿ ನಿಜವಾಗಿದ್ದು, ಕಿಣಿ ಅವರ ಟ್ವೀಟ್ ಇದೀಗ ಚರ್ಚೆಯ ವಿಷಯವಾಗಿದೆ. ಈ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ಅನೇಕರು ಜ್ಯೋತಿಷಿಯನ್ನು ಕೇಳುತ್ತಿದ್ದಾರೆ.
ಈ ಹಿಂದೆಯೂ ಸದ್ದು ಮಾಡಿತ್ತು ಕಿಣಿ ಭವಿಷ್ಯ
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್ ಸಾವಿನ ವಿಚಾರದಲ್ಲಿ ಈ ಹಿಂದೆ ಕಿಣಿ ಭವಿಷ್ಯ ಸಾಕಷ್ಟು ಸದ್ದು ಮಾಡಿತ್ತು. 2025, ನವೆಂಬರ್ 8ರಂದು ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಒಂದು ಪೋಸ್ಟ್​ ಮಾಡಿದ್ದರು. ಆ ಪೋಸ್ಟ್​ನಲ್ಲಿ ಏನಿತ್ತು ಅಂದರೆ, ಒಮ್ಮೆ ಮುಖ್ಯಮಂತ್ರಿ ಅಥವಾ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಕೆಲವು ಭಾರತೀಯ ಅನುಭವಿ ರಾಜಕಾರಣಿಗಳು ಡಿಸೆಂಬರ್ 2025 ರಿಂದ ಫೆಬ್ರವರಿ 2026 ರ ನಡುವೆ ನಿಧನರಾಗಬಹುದು ಎಂದು ಬರೆಯಲಾಗಿತ್ತು. ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನ ಬೆನ್ನಲ್ಲೇ ತಮ್ಮ ಭವಿಷ್ಯ ನಿಜವಾಯಿತು ಎಂದು ಪ್ರಶಾಂತ್​ ಕಿಣಿ ಅವರು ಹೇಳಿಕೊಂಡಿದ್ದಾರೆ. 2025ರ ಡಿಸೆಂಬರ್​ನಿಂದ 2026ರ ಫೆಬ್ರವರಿ ನಡುವೆ ಓರ್ವ ಹಿರಿಯ ರಾಜಕಾರಣಿ ಸಾಯುತ್ತಾರೆ ಎಂದು ನಾನು ಭವಿಷ್ಯ ನುಡಿದಿದ್ದೆ. ಇದೀಗ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ಇತ್ತೀಚಿನ ಪೋಸ್ಟ್​ನಲ್ಲಿ ಪ್ರಶಾಂತ್​ ಕಿಣಿ ಬರೆದುಕೊಂಡಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಯಿತು. ಅಂದಹಾಗೆ, ಜನವರಿ 28ರ ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ನಿಧನರಾದರು, (ಏಜೆನ್ಸೀಸ್​).