IND vs ENG: ಇಂಗ್ಲೆಂಡ್ನ ಸೌತಾಂಪ್ಟನ್‌ನ ದಿ ರೋಸ್ ಬೌಲ್‌ನಲ್ಲಿ ಇಂದು(ಜು. 11) ನಡೆದ ಭಾರತ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ಸರಣಿಯನ್ನು ವಾಷ್ಔಟ್ ಮಾಡಿ, ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 20 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿ ಭಾರತಕ್ಕೆ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು. ಇಂಗ್ಲೆಂಡ್ ಪರ ಜೋಸ್ ಬಟ್ಲರ್ 64 ಎಸೆತಗಳಲ್ಲಿ 12 ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳನ್ನು ಹೊಡೆದು 131 ರನ್ ಗಳಿಸಿದ್ರೆ, ಹ್ಯಾರಿ ಬ್ರೂಕ್ 45 ಎಸೆತಗಳಲ್ಲಿ 4 ಬೌಂಡರಿ 8 ಸಿಕ್ಸರ್‌ಗಳನ್ನು ಹೊಡೆದು 95 ರನ್‌ಗಳಿಗೆ ತಂಡ ಬೃಹತ್ ಮೊತ್ತ ಕಲೆಹಾಕಲು ಸಹಾಯ ಮಾಡಿದರು.
ಸೆಕೆಂಡ್ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ನೀಡಿದ 258 ಬೃಹತ್ ರನ್ಗಳ ಗುರಿ ಬೆನ್ನತ್ತಿದ ಭಾರತ, ಆರಂಭಿಕವಾಗಿ ಉತ್ತಮ ಬ್ಯಾಟಿಂಗ್ ಮಾಡಿತು. ಭಾರತದ ಪರ ಇಶಾನ್ ಕಿಶನ್ (56) ಮತ್ತು ತಿಲಕ್ ವರ್ಮಾ (53) ಅವರ ಅರ್ಧಶತಕಗಳ ಹೊರತಾಗಿಯೂ ಭಾರತ 8 ವಿಕೆಟ್‌ಗೆ 201 ರನ್‌ಗಳಿಗೆ ಸೀಮಿತವಾಯಿತು.