NEET paper leak Nirmala Sitharaman controversy speak 
ದೇಶ

ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮಕ್ಕಳಿಗೆ ಹೆಚ್ಚು ಸಮಯ ಸಿಕ್ತು ಎಂದ ನಿರ್ಮಲಾ ಸೀತರಾಮನ್​​; ಸಿಜೆಪಿ, ವಿರೋಧ ಪಕ್ಷಗಳ ಕಿಡಿ

ಪ್ರಮುಖ ಮುಖ್ಯಾಂಶಗಳು

  • ನೀಟ್ ಪತ್ರಿಕೆ ಸೋರಿಕೆ ವಿದ್ಯಾರ್ಥಿಗಳಿಗೆ ಅನುಕೂಲವಾಯ್ತು ಎಂದ ನಿರ್ಮಲಾ ಸೀತಾರಾಮನ್​ ವಿರುದ್ಧ ಕಿಡಿ.
  • ಅನುಕೂಲ ಹಾಗೋ ಆಗಿದ್ದರೆ ಆತ್ಮಹತ್ಯೆ ಕೇಸ್​ಗಳು ದಾಖಲಾಗಿದ್ದು ಯಾಕೆ ಎಂದು ನೆಟ್ಟಿಗರು.
  • ಇಡೀ ಸಂಪುಟ ರಾಜೀನಾಮೆ ನೀಡಬೇಕು ಎಂದ ಟಿಎಂಸಿ ನಾಯಕಿ ಮಹುವಾ.
ನವದೆಹಲಿ: ನೀಟ್ ಪತ್ರಿಕೆ ಸೋರಿಕೆಯು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಸಿದ್ಧತೆ ನಡೆಸಿ ಹೆಚ್ಚು ಅಂಕ ಗಳಿಸಲು ಅನುಕೂಲ ಮಾಡಿಕೊಟ್ಟಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆಯು ಹಲವರನ್ನು ಕೆರಳಿಸಿದೆ. ಪತ್ರಿಕೆ ಸೋರಿಕೆಯನ್ನು ಖಂಡಿಸುವ ಬದಲಿಗೆ ಅದನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಸಚಿವರು ಮಾತನಾಡಿದ್ದಾರೆ ಎಂದು ವಿರೋಧ ಪಕ್ಷಗಳು ಮತ್ತು ಕಾಕ್ರೋಚ್ ಜನತಾ ಪಕ್ಷ, ನೆಟ್ಟಿಗರು ತೀವ್ರವಾಗಿ ಕಿಡಿಕಾರಿದೆ.
ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸಮರ್ಥಿಸಿಕೊಂಡ ವಿರುದ್ಧ ರಾಜಕೀಯ ನಾಯಕರು ಹಾಗೂ ಕಾಕ್ರೋಚ್​ ಜನತಾ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರ್ಮಲಾ ಸೀತಾರಾಮನ್​ ಹೇಳಿದ್ದೇನು?

ಮೊದಲು ಪತ್ರಿಕೆ ಸೋರಿಕೆಯಾದಾಗ ನೋವಾಯಿತು, ಆದರೆ ನಂತರ ನಾನು ಆ ಸವಾಲನ್ನು ಸ್ವೀಕರಿಸಿ ಇನ್ನಷ್ಟು ಚೆನ್ನಾಗಿ ತಯಾರಿ ನಡೆಸಿ ನನ್ನ ಪ್ರದರ್ಶನವನ್ನು ಸುಧಾರಿಸಿಕೊಂಡೆ ಎಂದು ಕೆಲ ಯುವಕರು ಮುಂದೆ ಬಂದು ಹೇಳುತ್ತಿದ್ದಾರೆ. ಈ ರೀತಿಯಾಗಿ ಸವಾಲನ್ನು ಎದುರಿಸಿ ಉಜ್ವಲ ಯಶಸ್ಸು ಸಾಧಿಸಿದ ಯುವಕರೂ ಇದ್ದಾರೆ. ಇವೆಲ್ಲದರೊಂದಿಗೆ ಸರ್ಕಾರ ಮತ್ತು ಪ್ರಧಾನಿಯವರು ಸ್ಪಂದಿಸುತ್ತಿದ್ದಾರೆ" ಎಂದು ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದು ಹಲವರಿಗೆ ಕೆಂಡಕಾರಲು ಕಾರಣವಾಗಿದೆ.

ಇಡೀ ಸಂಪುಟ ರಾಜೀನಾಮೆ ಕೊಡ್ಬೇಕು

ನಿರ್ಮಲಾ ಸೀತಾರಾಮನ್​ ಅವರು ನಿಜವಾಗಿಯೂ 'ಪತ್ರಿಕೆ ಸೋರಿಕೆಯಿಂದಾಗಿ ಮಕ್ಕಳಿಗೆ ಅಧ್ಯಯನ ಮಾಡಲು ಇನ್ನಷ್ಟು ಹೆಚ್ಚು ಸಮಯ ಸಿಕ್ಕಿತು, ಇದರಿಂದ ಅವರು ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರು' ಎಂದು ಹೇಳಿದರೇ? ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಇಡೀ ಸಂಪುಟವೇ ರಾಜೀನಾಮೆ ನೀಡಬೇಕು.

ಪ್ರಿಯಾಂಕಾ ಚತುರ್ವೇದಿ ಹೇಳಿದ್ದೇನು?

ಸೋರಿಕೆಯಾದ ಪತ್ರಿಕೆಯ ಕಾರಣದಿಂದ ಮರುಪರೀಕ್ಷೆಯ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳುವುದು. ಬಹಳ ಸಂಕ್ಷಿಪ್ತವಾಗಿದೆ. ವಿದ್ಯಾರ್ಥಿಗಳೇ ದಯವಿಟ್ಟು ಆಲಿಸಿ ಮತ್ತು ಪ್ರತಿಭಟನೆಯನ್ನು ನಿಲ್ಲಿಸಿ.

ಸಿಜೆಪಿ ಟೀಕೆ

ಸಿಜೆಪಿ ವಕ್ತಾರ ಅಶೋತ್ ರಂಕ, "ಈ ತರ್ಕದ ಪ್ರಕಾರ ದೇಶದಲ್ಲಿರುವ ಪ್ರತಿಯೊಂದು ಪತ್ರಿಕೆಯೂ ಸೋರಿಕೆಯಾಗಬೇಕು" ಎಂದು ವ್ಯಂಗ್ಯವಾಡಿದ್ದಾರೆ.

ಜನರು ಕೊಂಡಾಡಿದ ಬಿಜೆಪಿ ಸರ್ಕಾರ ಇದೆನಾ?

ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆಯ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದರೆ, ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ. ಜನರು ಕೊಂಡಾಡಿದ ಬಿಜೆಪಿ ಸರ್ಕಾರ ಇದುವೇ? ನಿರ್ಮಲಾ ಸೀತಾರಾಮನ್ ಜಿ ಅವರು ವಿದ್ಯಾರ್ಥಿಗಳಿಗೆ ಅನುಕೂಲವಾಯಿತು ಎಂದು ಹೇಳುತ್ತಿದ್ದಾರೆ. ಹಾಗಾದರೆ ವಿದ್ಯಾರ್ಥಿಗಳು ಏಕೆ ಜೀವ ಕಳೆದುಕೊಳ್ಳಬೇಕಾಯಿತು?. ಪ್ರಯೋಜನವಾಯಿತು ಎಂದು ಹೇಳುವ ಮೂಲಕ ವಿದ್ಯಾರ್ಥಿ ಪ್ರತಿಭಟನೆ ಅನ್ನು ಪ್ರಶ್ನಿಸುತ್ತಿದ್ದಾರೆಯೇ?. ಹಾಗಾದರೆ ಯಾವುದೇ ರಾಜೀನಾಮೆ ಬೇಕಿಲ್ಲವೇ? ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.

ನೆಟ್ಟಿಗರಿಂದ ಟೀಕೆ

ಹಾಗಾದರೆ ಮೇಡಂ, ಒಂದೇ ಸೋರಿಕೆಗೆ ಯಾಕೆ ನಿಲ್ಲಿಸಬೇಕು?ಇದನ್ನು 2-3 ಬಾರಿ ಸೋರಿಕೆ ಮಾಡಿ... ಪ್ರದರ್ಶನವು ಇನ್ನಷ್ಟು ಸುಧಾರಿಸುತ್ತದೆ!ಬಹು ಅವಕಾಶಗಳು. ಗರಿಷ್ಠ ಸಾಧನೆ ಸಿಗುತ್ತದೆ ಎಂದು ನೆಟ್ಟಿಗರೊಬ್ಬರು ಟೀಕೆ ಮಾಡಿದ್ದಾರೆ
ಸರ್ಕಾರ ಮತ್ತು ಸಿಜೆಪಿ ಮಾತುಕತೆ
ಕೇಂದ್ರ ಸರ್ಕಾರದ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಹಾಗೂ ಸಿಜೆಪಿ ಪ್ರತಿನಿಧಿಗಳಾದ ಸೌರವ್ ದಾಸ್ ಮತ್ತು ಅಶೋತ್ ರಂಕ ನಡುವೆ ನಡೆದ ಎರಡನೇ ಸುತ್ತಿನ ಮಾತುಕತೆ ಅಪೂರ್ಣಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಗೆ ಶನಿವಾರ ಮಧ್ಯಾಹ್ನದವರೆಗೆ ಕಾಲಾವಕಾಶ ಕೋರಲಾಗಿದ್ದು, ಶನಿವಾರ ದೆಹಲಿಯಲ್ಲಿ ಮುಂದಿನ ಹಂತದ ಮಾತುಕತೆ ನಡೆಯಲಿದೆ, (ಏಜೆನ್ಸೀಸ್).