ಸಾಂದರ್ಭಿಕ ಚಿತ್ರ 
ದೇಶ

ಸುಡು ಬೇಸಿಗೆಯಲ್ಲಿ ಸಿಗಲ್ವಾ 'ಚಿಲ್' ಬಿಯರ್..? ಗಾಜಿನ ಬಾಟಲಿ ಮತ್ತು ಕ್ಯಾನ್‌ಗಳ ಕೊರತೆಯಿಂದ ಮಾರುಕಟ್ಟೆಯಲ್ಲಿ ಆತಂಕ! Beer Shortage

ಪ್ರಮುಖ ಮುಖ್ಯಾಂಶಗಳು

  • ಇರಾನ್ ಯುದ್ಧದಿಂದಾಗಿ ಅನಿಲದ ಕೊರತೆಯು ಗಾಜಿನ ಬಾಟಲಿಗಳ ಬೆಲೆಯನ್ನು ಹೆಚ್ಚಿಸುತ್ತಿದೆ
  • ಹಡಗು ಸಾಗಣೆಯಲ್ಲಿನ ವಿಳಂಬವು ಕ್ಯಾನ್​ ತಯಾರಿಕೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ
  • ಬಿಯರ್​ ತಯಾರಿಕಾ ಕಂಪನಿಗಳು ಮುಂಬರುವ ದಿನಗಳಲ್ಲಿ ಪಾನೀಯಗಳ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿವೆ
  • ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ನೈಸರ್ಗಿಕ ಅನಿಲ ಆಮದುದಾರ ರಾಷ್ಟ್ರವಾಗಿದೆ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ಉಂಟಾಗಿರುವ ಅನಿಲದ ಕೊರತೆಯು ಗಾಜಿನ ಬಾಟಲಿಗಳ ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತಿದೆ. ಆದಾಗ್ಯೂ, ಹಡಗು ಸಾಗಣೆಯಲ್ಲಿನ ವಿಳಂಬವು ಕ್ಯಾನ್​ ತಯಾರಿಕೆ ಮೇಲೆ ತೀವ್ರ ಪರಿಣಾಮ ಬೀರುತ್ತಿರುವುದರಿಂದ ಭಾರತದ (Beer Shortage) ಬಿಯರ್​ ತಯಾರಿಕಾ ಕಂಪನಿಗಳು ಮುಂಬರುವ ದಿನಗಳಲ್ಲಿ ಪಾನೀಯಗಳ ಬೆಲೆ ಏರಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಎಚ್ಚರಿಸಿವೆ.
ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ನೈಸರ್ಗಿಕ ಅನಿಲ ಆಮದುದಾರ ರಾಷ್ಟ್ರವಾಗಿದ್ದು, ತನ್ನ ಇಂಧನ ಅಗತ್ಯಗಳಿಗಾಗಿ ಮಧ್ಯಪ್ರಾಚ್ಯವನ್ನು ಅತಿಯಾಗಿ ಅವಲಂಬಿಸಿದೆ. ಆದಾಗ್ಯೂ, ಭಾರತವು ತನ್ನ ಒಟ್ಟು ನೈಸರ್ಗಿಕ ಅನಿಲ ಪೂರೈಕೆಯ ಸುಮಾರು ಶೇ.40 ರಷ್ಟನ್ನು ಕೇವಲ ಕತಾರ್‌ನಿಂದಲೇ ಪಡೆಯುತ್ತದೆ.
ಅನಿಲದ ಕೊರತೆಯಿಂದಾಗಿ ಗಾಜಿನ ಬೆಲೆ ಕುಂಠಿತಗೊಂಡಿದ್ದು, ಹೈನೆಕೆನ್ , ಅನ್ಹ್ಯೂಸರ್-ಬುಶ್ ಇನ್‌ಬೆವ್ ಮತ್ತು ಕಾರ್ಲ್ಸ್‌ಬರ್ಗ್ ನಂತಹ ಜಾಗತಿಕ ದಿಗ್ಗಜ ಕಂಪನಿಗಳನ್ನು ಪ್ರತಿನಿಧಿಸುವ ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಉತ್ಪಾದನಾ ವೆಚ್ಚವನ್ನು ಅನಿರೀಕ್ಷಿತವಾಗಿ ಹೆಚ್ಚಿಸುವುದಾಗಿ ರಾಯಿಟರ್ಸ್​ಗೆ ತಿಳಿಸಿದೆ.
ಕುಲುಮೆಗಳು ಮತ್ತು ಉತ್ಪಾದನಾ ಮಾರ್ಗಗಳನ್ನು ಚಾಲನೆಯಲ್ಲಿಡಲು ಅನಿಲ ಅತ್ಯಗತ್ಯ. ಹಾಗಾಗಿ ಇವುಗಳ ಕೊರತೆ ಉಂಟಾಗಿರುವುದರಿಂದ ಗಾಜಿನ ಬಾಟಲ್ ತಯಾರಕರು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಭಾರತವು ಬೇಸಿಗೆ ಕಡೆಗೆ ಹೆಜ್ಜೆ ಹಾಕುತ್ತಿದ್ದಂತೆಯೇ ಅಲ್ಯೂಮಿನಿಂ ಕ್ಯಾನ್​ ಪೂರೈಕೆದಾರರು ಮುಂಬರುವ ದಿನಗಳಲ್ಲಿ ಪೂರೈಕೆಯನ್ನು ನಿಲ್ಲಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ನಿರ್ದೇಶಕ ವಿನೋದ್ ಗಿರಿ, ಭಾರತದಲ್ಲಿ ಬಿಯರ್ ಬೆಲೆಯನ್ನು ಶೇ.12-15 ರಷ್ಟು ಹೆಚ್ಚಿಸಲು ಅನುಮತಿ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ಕಂಪನಿಗಳು ಅನುಭವಿಸುತ್ತಿರುವ ನಷ್ಟವನ್ನು ಸರಿದೂಗಿಸಲು ಈ ಬೆಲೆ ಏರಿಕೆ ಅನಿವಾರ್ಯ ಎಂದರು.
2024 ರಲ್ಲಿ ಮಾರುಕಟ್ಟೆಯ ಮೌಲ್ಯ 7.8 ಬಿಲಿಯನ್ ಆಗಿತ್ತು ಮತ್ತು 2030 ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಗ್ರಾಂಡ್​ ವ್ಯೂ ರಿಸರ್ಚ್​ ವರದಿ ಮಾಡಿದೆ. ಆದಾಗ್ಯೂ, ಹೈನೆಕೆನ್ ಮಾರುಕಟ್ಟೆಯ ಸರಿ ಸುಮಾರು ಅರ್ಧದಷ್ಟು ಪಾಲನ್ನು ಹೊಂದಿದ್ದರೆ, ಎಬಿ ಇನ್‌ಬೆವ್ ಮತ್ತು ಕಾರ್ಲ್ಸ್‌ಬರ್ಗ್ ತಲಾ ಶೇ.19 ರಷ್ಟು ಪಾಲನ್ನು ಹೊಂದಿದೆ ಎಂದು ತಿಳಿದು ಬಂದಿದೆ. 

ಗಾಜು, ಪ್ಲಾಸ್ಟಿಕ್ ಕೈಗಾರಿಕಾ ಬಿಕ್ಕಟ್ಟು

ಹೆಚ್ಚುತ್ತಿರುವ ನಗರೀಕರಣ ಮತ್ತು ಜನಸಂಖ್ಯೆಯಿಂದಾಗಿ ಭಾರತದಲ್ಲಿ ಬಿಯರ್ ಮತ್ತು ಮದ್ಯ ಮಾರಾಟವು ಸ್ಥಿರವಾಗಿ ಹೆಚ್ಚುತ್ತಿದೆ. ಅನೇಕ ದೇಶೀಯ ಕಂಪನಿಗಳನ್ನು ಪ್ರತಿನಿಧಿಸುವ ಭಾರತೀಯ ಮದ್ಯ ಪಾನೀಯ ಕಂಪನಿಗಳ ಒಕ್ಕೂಟವು, ಹೆಚ್ಚುತ್ತಿರುವ ಸರಕು ಸಾಗಣೆ, ಲಾಜಿಸ್ಟಿಕ್ಸ್ ಮತ್ತು ಇನ್ಪುಟ್ ವೆಚ್ಚಗಳನ್ನು ಸರಿದೂಗಿಸಲು ಬೆಲೆ ಹೊಂದಾಣಿಕೆಗಳನ್ನು ಕೋರಿ ಹಲವಾರು ರಾಜ್ಯಗಳಿಗೆ ಪತ್ರ ಬರೆದಿದೆ ಎಂದು ಹೇಳಿದೆ.
ಬೆಲೆ ಏರಿಕೆಗೆ ಅವಕಾಶ ನೀಡದ ರಾಜ್ಯಗಳಲ್ಲಿ ಪೂರೈಕೆದಾರರಿಗೆ ಸರಬರಾಜು ನೀಡುವುದು ಕಷ್ಟವಾಗಬಹುದು ಎಂದು ಸಂಘ ಹೇಳಿದೆ (ಏಜೆನ್ಸೀಸ್​).