Gautam Gambhir | ಹೆಡ್ಕೋಚ್ ಗೌತಮ್ ಗಂಭೀರ್ ಮತ್ತು ಭಾರತ ತಂಡ
ಬೆಂಗಳೂರು: ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 2-0 ಸರಣಿ ಸೋಲಿನ ನಂತರ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಹೆಡ್ಕೋಚ್ ಗೌತಮ್ ಗಂಭೀರ್(Gautam Gambhir) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಸರಣಿ ಸೋಲಿಗೆ ತಂಡದ ಪರಿವರ್ತನೆಯ ಹಂತ ಮತ್ತು ಬ್ಯಾಟಿಂಗ್ ಅನುಭವದ ಕೊರತೆಯೇ ಮುಖ್ಯ ಕಾರಣ ಎಂದು ಬುಧವಾರ (ನ.26) ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವೆಂಕಟೇಶ್ ಪ್ರಸಾದ್, ಈ ಟೆಸ್ಟ್ ಸೋಲಿಗೆ ಪ್ರಮುಖ ಕಾರಣ ಕಳಪೆ ತಂತ್ರಗಾರಿಕೆ ಎಂದಿದ್ದಾರೆ. ಅಲ್ಲದೆ, ನಾವು ತಂಡದ ಪರಿವರ್ತನೆಯ ನೆಪದಲ್ಲಿ ಈ ಸೋಲುಗಳನ್ನು ಮಾರೆಮಾಚಲು ಸಾಧ್ಯವಿಲ್ಲ. ಭಾರತ ತಂಡದಲ್ಲಿ ಸುದರ್ಶನ್, ಜುರೆಲ್ ಮತ್ತು ರೆಡ್ಡಿಯನ್ನು ಹೊರತುಪಡಿಸಿ, ಹೆಚ್ಚಿನ ಆಟಗಾರರು 7 ರಿಂದ 8 ವರ್ಷಗಳಿಂದ ತಂಡದಲ್ಲಿದ್ದಾರೆ. ಅದರೆ, ತಂಡದಲ್ಲಿ ಆಲ್‌ರೌಂಡರ್‌ಗಳನ್ನು ಆಡಿಸುವ ಗೀಳು ಮತ್ತು ಸಣ್ಣ ಸಣ್ಣ ತಪ್ಪುಗಳಿಂದ ಪಾಠ ಕಲಿತಿಲ್ಲ. ಇದು ಬಹಳ ಮುಜುಗರದ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸೋಲಿನ ಬಗ್ಗೆ ಮಾತ್ತೋಬ್ಬ ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ತಮ್ಮ ಟೀಕಾ ಪ್ರಹಾರ ನಡೆಸಿದ್ದು, ಟೆಸ್ಟ್ ಕ್ರಿಕೆಟ್‌ಗೆ ವಿಭಿನ್ನ ಮನಸ್ಥಿತಿ ಬೇಕು. ನಮ್ಮ ತಂಡದಲ್ಲಿಯೇ ಇಷ್ಟೊಂದು ಆಲ್‌ರೌಂಡರ್‌ಗಳು ಇದ್ದಾರೆ. ಅಲ್ಲದೆ, ತಂಡದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಇಷ್ಟೊಂದು ಬದಲಾವಣೆ ಮಾಡಿದ್ದಾರೆ. ಅದರೆ ಇಷ್ಟೊಂದು ಬದಲಾವಣೆಗಳು ಮಾಡಲು ಸಾಧ್ಯವಿಲ್ಲ. ಟೆಸ್ಟ್ನಲ್ಲಿ ಪ್ರತಿ ಎರಡನೇ ಪಂದ್ಯದಲ್ಲಿ ಹೊಸ ಆಟಗಾರರು ಬಂದಾಗ, ಒಂದೆರಡು ಆಟಗಾರರನ್ನು ಕೈಬಿಡಲಾಗುತ್ತದೆ ಎಂದು ತಂಡದಲ್ಲಿನ ಬದಲಾವಣೆಗಳ ವಿರುದ್ಧ ಕಿಡಿಕಾರಿದ್ದಾರೆ.
ಮುಂದುವರೆದು ಮಾತನಾಡಿದ ಜಂಬೋ, ಕಳೆದ ವರ್ಷ ಟೆಸ್ಟ್ಮಾದರಿಯಿಂದ ವಿರಾಟ್ ಕೊಹ್ಲಿ, ಆರ್. ಅಶ್ವಿನ್, ಚೇತೇಶ್ವರ ಪೂಜಾರ ಮತ್ತು ರೋಹಿತ್ ಶರ್ಮಾ ನಿವೃತ್ತರಾದರು. ಈ ಕ್ಷೀಪ್ರ ಬದಲಾವಣೆಗಳು ಯುವ ತಂಡವೊಂದು ಬೃಹತ್ ಸ್ಥಾನಗಳನ್ನು ತುಂಬಲು ಕಾರಣವಾಯಿತು. ಅಲ್ಲದೆ, ಭಾರತದ ಆಯ್ಕೆ ಸಮಿತಿಯು ಈ ಕುರಿತು ಯೋಚಿಸಬೇಕು ಮತ್ತು ಚಿಂತಿಸಬೇಕು ಎಂದು ನಾನು ಭಾವಿಸುತ್ತೇನೆ. ಈ ಫಲಿತಾಂಶಗಳನ್ನು ನೀವು ಮರೆಯಲು ಸಾಧ್ಯವಿಲ್ಲ, ಭಾರತೀಯ ಟೆಸ್ಟ್ ಕ್ರಿಕೆಟ್ ಹೇಗೆ ಮುಂದುವರಿಯುತ್ತದೆ ಎಂಬುದರ ಕುರಿತು ನೀವು ಚರ್ಚೆ ನಡೆಸಬೇಕು. ಕಳೆದ 6-8 ತಿಂಗಳುಗಳಲ್ಲಿ ದಿಗ್ಗಜರು ನಿವೃತ್ತರಾಗಿದ್ದಾರೆ ಮತ್ತು ಈ ಪ್ರಕ್ರಿಯೆ ಅದಾಗ ನೀವು ಒಂದು ದೃಷ್ಟಿಕೋನವನ್ನು ಹೊಂದಿರಬೇಕು ಮತ್ತು ತಂಡವನ್ನು ಯಾವ ರೀತಿ ತಯಾರು ಮಾಡಬೇಕು ಎಂಬುದರ ಕುರಿತು ಸಂಭಾಷಣೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ತಂಡದಲ್ಲಿ ಆಟಗಾರರನ್ನು ಬಳಸಿಕೊಂಡು ತಂಡವನ್ನು ಅಭಿವೃದ್ಧಿ ಮಾಡಬಹುದು. ಅದರೆ ಆ ಎಲ್ಲ ಪ್ರಯತ್ನಗಳು ಯಶಸ್ವಿಯಾಗುತ್ತದೆ ಎಂದು ಆಶಿಸಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ ಎನ್ನಿಸಿದರೆ, ಅನುಭವ ಹೊಂದಿರುವ 8-9 ಬಲಿಷ್ಠ ಆಟಗಾರರಿದ್ದರೆ ನೀವು 1 ಅಥವಾ 2 ಹೊಸ ಆಟಗಾರರನ್ನು ಬೆಳಸಬಹುದು. ಆದರೆ ನೀವು 1-2 ಅನುಭವಿ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಕುಂಬ್ಳೆ ತಿಳಿಸಿದ್ದಾರೆ.
ಮುಂದಿನ ವರ್ಷ ಆಗಸ್ಟ್‌ನಲ್ಲಿ ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾಗೆ ಪ್ರಯಾಣ ಬೆಳೆಸುವವರೆಗೆ ಯಾವುದೇ ಟೆಸ್ಟ್ ಸರಣಿಯನ್ನು ಆಡುವುದಿಲ್ಲ,(ಏಜೆನ್ಸೀಸ್).