Hardeep Singh Puri (ಚಿತ್ರ X)
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆ ದೆಶದಲ್ಲಿ ಯಾವುದೇ ಇಂಧನ ಪೂರೈಕೆ ಸಮಸ್ಯೆ ಇಲ್ಲ. ಭಾರತವು ಪ್ರಸ್ತುತ 69 ದಿನಗಳ ಕಚ್ಚಾ ತೈಲ ಮತ್ತು ಎಲ್‌ಎನ್‌ಜಿ ಹಾಗೂ 45 ದಿನಗಳ ಎಲ್‌ಪಿಜಿ ದಾಸ್ತಾನು ಹೊಂದಿರುವುದರಿಂದ ತೈಲ ಸರಬರಾಜು ಸುಗಮವಾಗಲಿದೆ ಎಂದು ತೈಲ ಸಚಿವ ಹರ್ದಿಪ್ ಸಿಂಗ್ ಪುರಿ (Hardeep Singh Puri) ಮಂಗಳವಾರ ಭರವಸೆ ನೀಡಿದ್ದಾರೆ.
45 ದಿನಗಳ ಎಲ್‌ಪಿಜಿ ಸ್ಟಾಕ್
ಸಿಐಐ ವಾರ್ಷಿಕ ವ್ಯವಹಾರ ಶೃಂಗಸಭೆಯಲ್ಲಿ ಮಾತನಾಡಿದ ಪುರಿ, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ದಿನಕ್ಕೆ 35-36 ಸಾವಿರದಿಂದ 54 ಸಾವಿರದವರೆಗೆ ಹೆಚ್ಚಿಸಲಾಗಿದೆ. ಆದರಿಂದ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆ ಇಲ್ಲ. ಆದಾಗ್ಯೂ, ನಾವು ಬಿಕ್ಕಟ್ಟನ್ನು ಜವಬ್ದಾರಿಯಿಂದ ನಿರ್ವಹಿಸಿದ್ದೇವೆ ಎಲ್ಲಿಯೂ ಕೊರತೆ ಉಂಟಾಗಿಲ್ಲ ಎಂದರು.
ಪಶ್ಚಿಮ ಏಷ್ಯಾದ ಯುದ್ಧದಂತಹ ಪರಿಸ್ಥಿತಿಯಿಂದ ಜಾಗತಿಕ ಇಂಧನ ಮಾರುಕಟ್ಟೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಕಠಿಣ ಕ್ರಮಗಳನ್ನು ಕೈಗೊಳ್ಳಲು ನೀಡಿರುವ ಸೂಚನೆಯು ನಮಗೆ ಒಂದು "ಎಚ್ಚರಿಕೆಯ ಕರೆಯಾಗಿದೆ ಎಂದು ಪುರಿ ತಿಳಿಸಿದರು.
ಪ್ರಧಾನಿ ಮೋದಿ ಹೇಳಿದ್ದೇನು?
ಹೈದರಾಬಾದ್‌ನಲ್ಲಿ ತೆಲಂಗಾಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ನಡುವೆ ವಿದೇಶಿ ವಿನಿಮಯವನ್ನು ಉಳಿಸಲು ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದು, ನಗರಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಬಳಸುವುದು, ಕಾರ್ಪೋಲಿಂಗ್, ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವುದು, ಪಾರ್ಸೆಲ್ ಸಾಗಣೆಗೆ ರೈಲ್ವೆ ಸೇವೆಗಳನ್ನು ಬಳಸುವುದು ಮತ್ತು ಮನೆಯಿಂದಲೇ ಕಚೇರಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ಆದಾಗ್ಯೂ, ಬಿಕ್ಕಟ್ಟಿನ ನಡುವೆ ವಿದೇಶಿ ವಿನಿಮಯವನ್ನು ಸಂರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದ ಮೋದಿ ಚಿನ್ನದ ಖರೀದಿ ಮತ್ತು ವಿದೇಶ ಪ್ರಯಾಣವನ್ನು ಒಂದು ವರ್ಷದವರೆಗೆ ಮುಂದೂಡುವಂತೆ ಕರೆ ನೀಡಿದರು (ಏಜೆನ್ಸೀಸ್).