ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ  
ದೇಶ

ಉಚಿತ ತೈಲ ಕೊಟ್ಟ ಇರಾನ್ ಮರೆತ ಭಾರತ: ಟ್ರಂಪ್-ನೆತನ್ಯಾಹು ಫೋಟೋ ಸುಟ್ಟು ಮೆಹಬೂಬಾ ಮುಫ್ತಿ ಆಕ್ರೋಶ | Mehbooba Mufti

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ-ಇಸ್ರೇಲ್​, ಇರಾನ್​ ಮೇಲಿನ ದಾಳಿಗೆ ಮೆಹಬೂಬಾ ಮುಫ್ತಿ ಖಂಡನೆ
  • ಕಾಶ್ಮೀರದಲ್ಲಿ ಟ್ರಂಪ್ ಮತ್ತು ನೆತನ್ಯಾಹು ಭಾವಚಿತ್ರ ಸುಟ್ಟು ಆಕ್ರೋಶ
  • ಭಾರತ ಮತ್ತು ಜಮ್ಮ ಸರ್ಕಾರದ ವಿರುದ್ಧ ಮುಫ್ತಿ ವಾಗ್ದಾಳಿ
ಕಾಶ್ಮೀರ: ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿಯ ಬಗ್ಗೆ ಭಾರತ ಸರ್ಕಾರ ಮತ್ತು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಮೌನ ವಹಿಸಿದ್ದಕ್ಕೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ (Mehbooba Mufti) ಬುಧವಾರ (ಮಾ.4) ವಿಷಾದ ವ್ಯಕ್ತ ಪಡಿಸಿದ್ದಾರೆ.
ಈ ಕುರಿತಂತೆ ನೆಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಮೇನಿ ಅವರ ಸಾವನ್ನು ಅಥವಾ ಯುದ್ಧವನ್ನು ಪ್ರತಿಭಟಿಸಲಿಲ್ಲ ಎಂದು ಹೇಳಿದರು. ಅವರು ಅಲ್ಲಿನ ಜನರಿಗೆ ಸಂತಾಪ ಸೂಚಿಸಲಿಲ್ಲ ಮತ್ತು ಕಾಶ್ಮೀರಿ ನಾಯಕತ್ವವು ಯಾವುದೇ ಪ್ರತಿಭಟನೆ ಅಥವಾ ಸಹಾನುಭೂತಿಯನ್ನು ವ್ಯಕ್ತಪಡಿಸಲಿಲ್ಲ ಎಂದು ಅವರು ಹೇಳಿದರು

ಟ್ರಂಪ್ ಮತ್ತು ನೆತನ್ಯಾಹು ಅವರ ಭಾವಚಿತ್ರಕ್ಕೆ ಬೆಂಕಿ

ನಾವು ಇರಾನ್‌ನೊಂದಿಗೆ ಬಹಳ ಬಲವಾದ ಸಂಬಂಧವನ್ನು ಹೊಂದಿದ್ದೇವೆ. ಆದ್ದರಿಂದ, ಹೊರಗೆ ವಿಧಿಸಲಾದ ನಿರ್ಬಂಧಗಳ ಹೊರತಾಗಿಯೂ, ನಾವು ಮನೆಯಲ್ಲಿ ಪ್ರತಿಭಟಿಸಿ ಅವರ ಭಾವಚಿತ್ರಗಳನ್ನು ಸುಟ್ಟುಹಾಕಿದ್ದೇವೆ.
ಜಮ್ಮು ಮತ್ತು ಕಾಶ್ಮೀರದ ಜನರು ಇರಾನ್ ಜನರೊಂದಿಗೆ ನಿಂತಿದ್ದಾರೆ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಕಳುಹಿಸುವುದು ಇದರ ಉದ್ದೇಶವಾಗಿದೆ. ಅವರ ಹುತಾತ್ಮತೆ ಮತ್ತು ಶೌರ್ಯಕ್ಕೆ ನಾವು ನಮಸ್ಕರಿಸುತ್ತೇವೆ ಎಂದು ಮುಫ್ತಿ ಹೇಳಿದರು.

ನಾವು ಇರಾನ್​ ಜೊತೆ ನಿಲ್ಲಬೇಕು

ಭಾರತ ಇರಾನ್‌ಗೆ ಬೆಂಬಲ ನೀಡುತ್ತಿದ್ದ ಕಾಲವಿತ್ತು, ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದಾಗ, ಇರಾನ್ ನಮಗೆ ಉಚಿತ ತೈಲವನ್ನು ನೀಡಿತ್ತು. ಆದರೆ ಈಗ ಜಾಗತಿಕ ರಾಜಕಾರಣ ಸಂಪೂರ್ಣವಾಗಿ ಬದಲಾಗಿದೆ. ಖಮೇನಿಯವರ ಸಾವಿನ ಬಗ್ಗೆ ಭಾರತ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ಮೌನವಾಗಿರುವ ಬಗ್ಗೆ ನನಗೆ ನೋವಿದೆ ಎಂದರು
ಅಮೆರಿಕ ಮತ್ತು ಇಸ್ರೇಲ್, ಇರಾನ್ ವಿರುದ್ಧ ಮಾಡಿರುವ ಆಕ್ರಮಣ ಮತ್ತು ಸರ್ವೋಚ್ಚ ನಾಯಕನ ಹುತಾತ್ಮತೆಯ ಬಗ್ಗೆ ನಮ್ಮ ಸರ್ಕಾರಗಳು ಮೌನವಾಗಿವೆ ಎಂದು ಹೇಳಿದರು. ನಮ್ಮ ನಾಯಕರು ಈ ದಾಳಿಗಳನ್ನು ಖಂಡಿಸಿಲ್ಲ. ಆದರೆ ಈ ಕುರಿತು ನಮ್ಮ ಮಹಿಳೆಯರು ಬೀದಿಗಿಳಿದಾಗ ಅವರ ಮೇಲೆ ಹಲ್ಲೆ ನಡೆಸಿ ಬಂಧಿಸಲಾಯಿತು ಎಂದು ಅವರು ಹೇಳಿದರು.

ಬಿಜೆಪಿ ದೇಶವನ್ನು ಹಾಳುಮಾಡಿದೆ

ಪ್ರತಿಭಟನೆ ಮಾಡಿದ್ದ ಶ್ರೀನಗರದ ಅನೇಕ ಜನರನ್ನು ಬಂಧಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ದೇಶದ ಬಗ್ಗೆ ನಾವು ಏನು ಹೇಳಬಹುದು? ಬಿಜೆಪಿ ಹಿಂದೂ-ಮುಸ್ಲಿಂ ರಾಜಕೀಯ ಮಾಡುವ ಮೂಲಕ ಈಗಾಗಲೇ ದೇಶವನ್ನು ಹಾಳು ಮಾಡಿದ್ದಾರೆ ಎಂದು ಮೆಹಬೂಬಾ ಹೇಳಿದರು.
ಮುಸ್ಲಿಂ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ಎಲ್ಲಾ ಮುಸ್ಲಿಂ ರಾಷ್ಟ್ರಗಳು ಇದಕ್ಕೆಲ್ಲ ಮೂಕ ಪ್ರೇಕ್ಷಕರಾಗಿವೆ ಮತ್ತು ಅಮೆರಿಕಕ್ಕೆ ನೆಲೆಗಳನ್ನು ಒದಗಿಸುವ ಮೂಲಕ ಪರೋಕ್ಷವಾಗಿ ಬೆಂಬಲ ನೀಡುತ್ತಿವೆ. ಸೌದಿ ಅರೇಬಿಯಾ ಜೊತೆಗಿನ ಇತ್ತೀಚಿನ ಅಮೆರಿಕ ಒಪ್ಪಂದವು ಇರಾನ್​ನ ಬಲಿ ಪಡೆಯಿತು ಎಂದು ನಾನು ನಂಬುತ್ತೇನೆ ಎಂದು ಹೇಳಿದರು,(ಏಜನ್ಸೀಸ್​).