IND vs END: ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಲಾರ್ಡ್ಸ್‌ನಲ್ಲಿ ಇಂದು(ಜು. 19) ನಡೆಯುತ್ತಿದ್ದು ನಿವೃತ್ತಿ ವದಂತಿ ನಡುವೆಯೂ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದು, ಎರಡೂ ತಂಡಗಳು ವಿಶಿಷ್ಟ ದಾಖಲೆಯನ್ನು ಸೃಷ್ಟಿಸಿವೆ.
ಲಾರ್ಡ್ಸ್‌ನಲ್ಲಿ ಎರಡೂ ತಂಡಗಳು ಒಂದೇ ಪಂದ್ಯದಲ್ಲಿ ಆರಂಭಿಕ ಆಟಗಾರರು ಶತಕ ಸಿಡಿಸಿ ದಾಖಲೆ ಸೃಷ್ಟಿಸಿವೆ. ಇಂಗ್ಲೆಂಡ್ ನೀಡಿದ 388 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಪರ ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಮೊದಲ ವಿಕೆಟ್‌ಗೆ 147 ರನ್‌ಗಳ ಪಾಟ್ನಾರ್ಶಿಪ್ ಮೂಲಕ ಈ ದಾಖಲೆ ಸೃಷ್ಟಿಯಾಗಿದೆ.
ಇಂಗ್ಲೆಂಡ್‌ನ ಆರಂಭಿಕ ಆಟಗಾರರಾದ ಬೆನ್ ಡಕೆಟ್ ಮತ್ತು ಜಾಕೋಬ್ ಬೆಥೆಲ್ 192 ರನ್‌ಗಳ ಅದ್ಭುತ ಪಾಟ್ನಾರ್ಶಿಪ್ ಹೊಂದಿದ್ದರು. ಮತ್ತು ಭಾರತಕ್ಕೆ ಮೂರು ವಿಕೆಟ್ ನಷ್ಟಕ್ಕೆ 388 ರನ್‌ಗಳ ಟಾರ್ಗೆಟ್ ನೀಡಿದ್ದರು. ಮಾಹಿತಿ ಪ್ರಕಾರ, ಲಾರ್ಡ್ಸ್‌ನಲ್ಲಿ ಒಂದೇ ಏಕದಿನ ಪಂದ್ಯದಲ್ಲಿ ಎರಡೂ ತಂಡಗಳು ಶತಕದ ಆರಂಭಿಕ ಜೊತೆಯಾಟವಾಡಿದ್ದು ಇದೇ ಮೊದಲು ಎನ್ನಲಾಗಗಿದೆ.
ಡಕೆಟ್ ಅವರ 135 ಎಸೆತಗಳಲ್ಲಿ 141 ರನ್ ಮತ್ತು ಬೆಥೆಲ್ ಅವರ 93 ಎಸೆತಗಳಲ್ಲಿ 91 ರನ್‌ಗಳ ಅದ್ಭುತ ಬ್ಯಾಟಿಂಗ್ ಮೂಲಕ ಈ ಜೋಡಿ 30 ಓವರ್‌ಗಳಿಗೂ ಹೆಚ್ಚು ಕಾಲ ಭಾರತದ ಬೌಲರ್‌ಗಳನ್ನು ಚಚ್ಚಿ ಬಿಸಾಡಿತು. ಮೊದಲ ವಿಕೆಟ್ ಬೀಳುವ ಮುನ್ನ ಸ್ಕೋರ್ ಅನ್ನು 192 ಕ್ಕೆ ತಲುಪಿಸಿತು. ಬಳಿಕ ಜೋ ರೂಟ್ ಕೇವಲ 48 ಎಸೆತಗಳಲ್ಲಿ ಅಜೇಯ 74 ರನ್ ಗಳಿಸುವ ಮೂಲಕ ಪರಿಪೂರ್ಣ ಪಂದ್ಯಕ್ಕೆ ಅಂತಿಮ ಸ್ಪರ್ಷ ನೀಡಿದರು. ಮತ್ತು ಜೋಸ್ ಬಟ್ಲರ್ 13 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿ ಇಂಗ್ಲೆಂಡ್ ಅತ್ಯಧಿಕ ಮೊತ್ತ ದಾಖಲಿಸಲು ಸಹಾಯ ಮಾಡಿದರು.
ಬಳಿಕ ಎರಡನೇಯದಾಗಿ ಇಂಗ್ಲೆಂಡ್ ನೀಡಿದ 388 ರನ್‌ಗಳ ಗುರಿ ಬೆನ್ನತ್ತಿದ ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಜೊತೆಯಾಟವಾಡಿದರು. ಈ ಜೊಡಿ 147 ರನ್‌ಗಳ ಜೊತೆಯಾಟವಾಡಿತು. ಭಾರತದ ಭರವಸೆಯನ್ನು ಜೀವಂತವಾಗಿರಿಸಿತು. ಬಳಿಕ ವಿರಾಟ್ ಕೊಹ್ಲಿ ರೋಹಿತ್ ಅವರೊಂದಿಗೆ ಕ್ರೀಸ್‌ಗೆ ಸೇರಿದರು, ಭಾರತಕ್ಕೆ ಉಳಿದ ಓವರ್‌ಗಳಲ್ಲಿ ಇನ್ನೂ 224 ರನ್‌ಗಳ ಅಗತ್ಯವಿದೆ. ಪಂದ್ಯವು ಉತ್ತಮ ಸ್ಥಿತಿಯಲ್ಲಿದೆ (ಏಜೆನ್ಸೀಸ್).