ಸಾಂದರ್ಭಿಕ ಚಿತ್ರ  
ದೇಶ

ಬ್ರಿಟನ್-ಭಾರತ ಮುಕ್ತ ವ್ಯಾಪಾರ ಒಪ್ಪಂದ: ಜು.15ರಿಂದ ಲಕ್ಸುರಿ ಕಾರುಗಳ ಬೆಲೆ ಅಗ್ಗ, ಆಫ್​ ರೇಟ್​ಗೆ ವಿಸ್ಕಿ!

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ
  • ಈ ಒಪ್ಪಂದವು ಇದೇ ಇದೇ ಜು.15ರಿಂದ ಜಾರಿಗೆ
  • ಶೇ.80 ರಷ್ಟು ಲಕ್ಸುರಿ ಕಾರುಗಳು, ವಿಸ್ಕಿಗಳ ಬೆಲೆ ಅಗ್ಗ
ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ (UK) ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದವು (FTA) ಇದೇ ಜು.15ರಿಂದ ಜಾರಿಗೆ ಬರಲಿದೆ.
ಬ್ರಿಟನ್‌ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಬೆಲೆಯನ್ನು ಕ್ರಮೇಣವಾಗಿ ಕಡಿತಗೊಳಿಸುವ ಕುರಿತು ಕೇಂದ್ರ ಸರ್ಕಾರವು ಈಗಾಗಲೇ ಮಾಹಿತಿ ಹಂಚಿಕೊಂಡಿದೆ. ಈ ಒಪ್ಪಂದದ ಬೆನ್ನಲ್ಲೇ, ಬ್ರಿಟನ್‌ನಿಂದ ಆಮದಾಗುವ ಐಷಾರಾಮಿ ಡಿಫೆಂಡರ್​ ಕಾರುಗಳು, ಸ್ಕಾಚ್, ವಿಸ್ಕಿ ಸೇರಿದಂತೆ ಹಲವು ಉತ್ಪನ್ನಗಳ ಬೆಲೆಗಳು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿವೆ ಎಂದು ವರದಿಯಾಗಿದೆ.

ಶೇ.80 ರಷ್ಟು ಲಕ್ಸುರಿ ಕಾರುಗಳು ಅಗ್ಗ

ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಕಾರುಗಳ ಬೆಲೆಯಲ್ಲಿ ಶೇ.80ರಷ್ಟು ಕಡಿತಗೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ಲ್ಯಾಂಡ್ ರೋವರ್, ರೇಂಜ್ ರೋವರ್, ಜಾಗ್ವಾರ್, ರೋಲ್ಸ್ ರಾಯ್ಸ್, ಆಸ್ಟನ್ ಮಾರ್ಟಿನ್ ಮತ್ತು ಬೆಂಟ್ಲಿಯಂತಹ ಲಕ್ಸುರಿ ಕಾರುಗಳು ಭಾರತೀಯ ಗ್ರಾಹಕರಿಗೆ ಅಗ್ಗದ ಬೆಲೆಗೆ ಸಿಗಲಿದೆ.

ಭಾರತದಲ್ಲಿ ಯಾವ ವಸ್ತುಗಳು ಅಗ್ಗ?

ಯುಕೆಯಿಂದ ಆಮದು ಮಾಡಿಕೊಳ್ಳುವ ಸರಕುಗಳ ಸರಾಸರಿ ಸುಂಕವು ಶೆ15ರಿಂದ ಶೇ.3ಕ್ಕೆ ಇಳಿಕೆಯಾಗಲಿದೆ. ಶೇ.85ರಷ್ಟು ಸರಕುಗಳು 10 ವರ್ಷಗಳಲ್ಲಿ ಸಂಪೂರ್ಣವಾಗಿ ಸುಂಕ ಮುಕ್ತವಾಗಲಿವೆ. ಇದು ಹಲವಾರು ವಸ್ತುಗಳ ಬೆಲೆಯನ್ನು ಇಳಿಸಲಿದ್ದು, ಭಾರತೀಯರು ಫುಲ್​ ಜೋಶ್​ನಿಂದ ತಾವು ಇಷ್ಟಪಟ್ಟ ಕೆಲವೊಂದನ್ನು ಈಗ ಸುಲಭವಾಗಿ ಖರೀದಿಸಲು ಅವಕಾಶ ಸಿಗಲಿದೆ.
ವಿಸ್ಕಿ-ಜಿನ್: ಯುಕೆಯಿಂದ ಆಮದು ಮಾಡಿಕೊಳ್ಳುವ ಸ್ಕಾಚ್, ವಿಸ್ಕಿ ಮತ್ತು ಜಿನ್ ಮೇಲಿನ ಭಾರತದ ಸುಂಕವನ್ನು ಶೇ.150ರಿಂದ 75ಕ್ಕೆ ಇಳಿಸಲಾಗುವುದು. ಬಳಿಕ ಒಪ್ಪಂದದ 10ನೇ ವರ್ಷದ ವೇಳೆಗೆ, ಅದನ್ನು ಶೇ.40ಕ್ಕೆ ಇಳಿಕೆ ಮಾಡಲಾಗುವುದು. ಉದಾ: 5000 ರೂ. ಮೌಲ್ಯದ ಸ್ಕಾಚ್ ಬಾಟಲ್ 3,500 ರೂ.ಗೆ ಲಭಿಸಲಿದೆ.
ಲಕ್ಸುರಿ ಕಾರುಗಳು: ಯುಕೆ ಕಾರುಗಳ ಮೇಲಿನ ಸುಂಕ (ಉದಾ: ಜಾಗ್ವಾರ್ ಲ್ಯಾಂಡ್ ರೋವರ್, ರೋಲ್ಸ್ ರಾಯ್ಸ್) ಕೋಟಾ ವ್ಯವಸ್ಥೆಯಡಿಯಲ್ಲಿ ಶೇ.100ರಿಂದ ಶೇ.10ಕ್ಕೆ ಇಳಿಯಲಿದೆ. ಇದು ಈ ಕಾರುಗಳನ್ನು ಶೇ.20ರಿಂದ 30ರಷ್ಟು ಅಗ್ಗವಾಗಿಸಬಹುದು.
ಆಹಾರ ಮತ್ತು ಸಾಫ್ಟ್​ ಡ್ರಿಂಕ್ಸ್​: ಯುಕೆಯಿಂದ ಆಮದು ಮಾಡಿಕೊಳ್ಳುವ ಸಾಲ್ಮನ್, ಚಾಕೊಲೇಟ್, ಬಿಸ್ಕತ್ತು ಮತ್ತು ತಂಪು ಪಾನೀಯಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಿದೆ. ಇದು ಈ ಉತ್ಪನ್ನಗಳನ್ನು ಇನ್ನಷ್ಟು ಕಡಿಮೆ ಮಾಡಲಿದೆ.
ಬ್ಯೂಟಿ ಪ್ರಾಡೆಕ್ಟ್ಸ್​, ವೈದ್ಯಕೀಯ ವಸ್ತುಗಳು: ಬ್ರಿಟನ್​ನ ಬ್ಯೂಟಿ ಪ್ರಾಡೆಕ್ಟ್​ಗಳು, ವೈದ್ಯಕೀಯ ಉಪಕರಣಗಳು ಮತ್ತು ಏರೋಸ್ಪೇಸ್ ಭಾಗಗಳ ಮೇಲಿನ ಕಡಿಮೆ ಸುಂಕಗಳು ಈ ಸರಕುಗಳನ್ನು ಅಗ್ಗವಾಗಿಸುತ್ತದೆ. ಸುಂಕವು ಶೆ.15ರಿಂದ ಶೇ.3ಕ್ಕೆ ಇಳಿಯಲಿದೆ.
ಉಡುಪುಗಳು: ಯುಕೆಯಿಂದ ಬರುವ ಬ್ರ್ಯಾಂಡೆಡ್ ಬಟ್ಟೆಗಳು, ಫ್ಯಾಷನ್ ಉತ್ಪನ್ನಗಳು ಮತ್ತು ಗೃಹ ವಸ್ತುಗಳು ಸಹ ಅಗ್ಗವಾಗಲಿವೆ. ಅದೇ ರೀತಿ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್ ಕೂಡ ಕಡಿಮೆ ಬೆಲೆಯಲ್ಲಿ ಜನರ ಕೈಗೆಟುಕಲಿವೆ.

ಭಾರತದ ಯಾವ ವಲಯಗಳಿಗೆ ಪ್ರಯೋಜನ?

ಜವಳಿ ವಲಯ: ಭಾರತದಲ್ಲಿ ತಯಾರಾಗುವ ಉಡುಪುಗಳು, ಬೆಡ್‌ಶೀಟ್‌ಗಳು ಮತ್ತು ಪರದೆಗಳಂತಹ ಗೃಹ ಜವಳಿಗಳು ಯುಕೆಯಲ್ಲಿ ಶೇ.8ರಿಂದ12 ರಷ್ಟು ತೆರಿಗೆಯನ್ನು ಹೊಂದಿತ್ತು. ಆದರೀಗ, ಎರಡೂದ ದೇಶಗಳ ನಡುವೆ ಮುಕ್ತ ಒಪ್ಪಂದ ಹಿನ್ನೆಲೆ ಟ್ಯಾಕ್ಸ್​ ಅನ್ನು ಶೂನ್ಯಗೊಳಿಸಲಾಗುವುದು. ಇದು ಬಾಂಗ್ಲಾದೇಶ ಮತ್ತು ವಿಯೆಟ್ನಾಂನಂತಹ ದೇಶಗಳಿಗೆ ಹೋಲಿಸಿದರೆ ನಮ್ಮ ಜವಳಿಗಳು ಯುಕೆ ಮಂದಿಗೆ ಅಗ್ಗದ ಬೆಲೆಗೆ ಸಿಗಲಿದೆ.

ಆಭರಣ, ಲೆದರ್​ ವಸ್ತುಗಳು

ಭಾರತದಿಂದ ಯುಕೆಗೆ ಹೋಗುವ ಚೀಲ, ಆಭರಣಗಳು ಮತ್ತು ಚರ್ಮದ ವಸ್ತುಗಳ ಮೇಲೆ ಈಗ ಯಾವುದೇ ತೆರಿಗೆ ಇರುವುದಿಲ್ಲ. ಇದು ಸಣ್ಣ ಉದ್ಯಮಗಳು (MSME) ಮತ್ತು ಐಷಾರಾಮಿ ಬ್ರ್ಯಾಂಡ್​ ಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಯುಕೆ ಮಾರ್ಗದ ಮೂಲಕ ಯುರೋಪ್‌ನಲ್ಲಿ ಭಾರತದ ಪ್ರಾಬಲ್ಯವು ಮತ್ತಷ್ಟು ಹೆಚ್ಚಾಗಲಿದೆ.

ಇಂಜಿನಿಯರಿಂಗ್ ಸರಕು, ಕಾರಿನ ಬಿಡಿಭಾಗ

ಯುಕೆ ಭಾರತೀಯ ಯಂತ್ರೋಪಕರಣಗಳು, ಇಂಜಿನಿಯರಿಂಗ್ ಉಪಕರಣಗಳು ಮತ್ತು ಕಾರಿನ ಬಿಡಿಭಾಗಗಳಂತಹ ಆಟೋ ಪಾರ್ಟ್ಸ್​ ಮೇಲಿನ ಆಮದು ತೆರಿಗೆಯನ್ನು ತೆಗೆದುಹಾಕಿದೆ. ಇದು ಯುಕೆ ಮತ್ತು ಯುರೋಪಿಯನ್ ಕೈಗಾರಿಕಾ ಪೂರೈಕೆ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಬಲಪಡಿಸಿದೆ. ಪುಣೆ, ಚೆನ್ನೈ ಮತ್ತು ಗುರುಗ್ರಾಮ್‌ನಂತಹ ಉತ್ಪಾದನಾ ಕೇಂದ್ರಗಳಿಗೆ ಇದರಿಂದ ಹೆಚ್ಚಿನ ಉತ್ತೇಜನ ಸಿಗಲಿದೆ.

ಔಷಧ, ವೈದ್ಯಕೀಯ ಸಾಧನಗಳು

ಭಾರತೀಯ ಫಾರ್ಮಾ ಕಂಪನಿಗಳು ಯುಕೆಯಲ್ಲಿ ಜೆನೆರಿಕ್ ಔಷಧಿಗಳಿಗೆ ಸುಲಭವಾದ ನೋಂದಣಿ ಪ್ರಕ್ರಿಯೆಯನ್ನು ಪಡೆಯುತ್ತವೆ. ಇದು ಭಾರತೀಯ ಔಷಧಗಳು ಯುಕೆ ಆರೋಗ್ಯ ಸೇವೆಯನ್ನು (ಎನ್‌ಎಚ್‌ಎಸ್) ಹೆಚ್ಚು ಸುಲಭವಾಗಿ ತಲುಪಲು ಸಹಕಾರಿ ಮತ್ತು ಔಷಧದ ಅನುಮೋದನೆಗಳು ಕೂಡ ವೇಗ ಪಡೆಯಲಿವೆ.

ಆಹಾರ, ಪಾನೀಯ, ಚಹಾ, ಮಸಾಲೆಗಳು

ಬಾಸ್ಮತಿ ಅಕ್ಕಿ, ಸಮುದ್ರ ಉತ್ಪನ್ನಗಳಾದ ಸಿಗಡಿ, ಪ್ರೀಮಿಯಂ ಚಹಾ ಮತ್ತು ಮಸಾಲೆಗಳ ಮೇಲೆ ಯುಕೆ ಆಮದು ತೆರಿಗೆಯನ್ನು ತೆಗೆದುಹಾಕಲಿದೆ. ಇದು ಅಸ್ಸಾಂ, ಗುಜರಾತ್, ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ಪ್ರದೇಶಗಳ ರಫ್ತು ಉದ್ಯಮಕ್ಕೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ.

ಕೆಮಿಕಲ್​ ಮತ್ತು ವಿಶೇಷ ವಸ್ತುಗಳು

ಕೃಷಿ ರಾಸಾಯನಿಕ, ಪ್ಲಾಸ್ಟಿಕ್‌ಗಳು ಮತ್ತು ವಿಶೇಷ ಕೆಮಿಕಲ್​ ಮೇಲಿನ ತೆರಿಗೆ ಕಡಿತವು ಗುಜರಾತ್ ಮತ್ತು ಮಹಾರಾಷ್ಟ್ರದಂತಹ ಪ್ರಮುಖ ಕೇಂದ್ರಗಳಿಂದ ರಫ್ತುಗಳನ್ನು ಹೆಚ್ಚಿಸುತ್ತದೆ. ಈ ಒಪ್ಪಂದದ ಅಡಿಯಲ್ಲಿ, 2030ರ ವೇಳೆಗೆ ಯುಕೆಗೆ ರಾಸಾಯನಿಕ ರಫ್ತುಗಳನ್ನು ದ್ವಿಗುಣಗೊಳಿಸುವುದು ಭಾರತದ ಮಹತ್ವದ ಗುರಿಯಾಗಿದೆ.

ಗ್ರೀನ್​ ಎನರ್ಜಿ ಮತ್ತು ಕ್ಲೀನ್ಟೆಕ್

ಈ ಒಪ್ಪಂದವು ಸೌರ, ಹಸಿರು ಜಲಜನಕ ಮತ್ತು ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮೂಲಸೌಕರ್ಯ ಸೇರಿ ನವೀಕರಿಸಬಹುದಾದ ಇಂಧನದಲ್ಲಿ ಜಂಟಿ ಉದ್ಯಮಗಳಿಗೆ ಆದ್ಯತೆ ನೀಡಲಿದೆ. ಯುನೈಟೆಡ್​ ಕಿಂಗ್​ಡಮ್​ ಭಾರತದ ಶುದ್ಧ ಇಂಧನ ಕ್ಷೇತ್ರದಲ್ಲಿ ಮತ್ತಷ್ಟು ಹೂಡಿಕೆಗೆ ಮುಂದಾಗಲಿದೆ,(ಏಜೆನ್ಸೀಸ್).