Vijay vs Udhayanidhi Stalin
- ಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಉದಯನಿಧಿ ಸ್ಟಾಲಿನ್ ಆಯ್ಕೆ.
- ಹಿರಿಯ ನಾಯಕ ಕೆ.ಎನ್. ನೆಹರೂ ಅವರಿಗೆ ಉಪನಾಯಕನ ಜವಾಬ್ದಾರಿ.
- 59 ಶಾಸಕರೊಂದಿಗೆ ಪ್ರಬಲ ವಿರೋಧ ಪಕ್ಷವಾಗಿ ಡಿಎಂಕೆ ಕಾರ್ಯನಿರ್ವಹಣೆ.
ಚೆನ್ನೈ: ಟಿವಿಕೆ ಸಂಸ್ಥಾಪಕ ವಿಜಯ್ ಮೇ.10ರಂದು ತಮಿಳುನಾಡಿನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಲೇ ಡಿಎಂಕೆ ತಮ್ಮ ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಘೋಷಿಸಿದೆ. ಹೌದು ಮಾಜಿ ಡಿಸಿಎಂ ಉದಯನಿಧಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಮೇ.7ರಂದು ಪಕ್ಷದ ಪ್ರಧಾನ ಕಚೇರಿಯಾದ ಅಣ್ಣಾ ಅರಿವಲಯಂನಲ್ಲಿ ನಡೆದ ಡಿಎಂಕೆ ಪ್ರಮುಖರ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಿಎಂಕೆ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ಪಡೆಯನ್ನು ಉದಯನಿಧಿ ಮುನ್ನಡೆಸಲಿದ್ದಾರೆ.
ಉಪನಾಯಕ ಯಾರು?
ಉದಯನಿಧಿ ಸ್ಟಾಲಿನ್ ಅವರ ಜೊತೆಗೆ ಅನುಭವಿ ನಾಯಕರಾದ ಕೆಎನ್ ನೆಹರು ಅವರನ್ನು ಶಾಸಕಾಂಗ ಪಕ್ಷದ ಉಪನಾಯಕನನ್ನಾಗಿ ಮತ್ತು ಮಾಜಿ ಸಚಿವ ಇ.ವಿ ವಲು ಅವರನ್ನು ಪಕ್ಷದ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಚೆಪಾಕ್-ತಿರುವಲ್ಲಿಕೆಣಿ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಹೀಗಾಗಿ ವಿಧಾನಸಭೆಯಲ್ಲಿ ಡಿಎಂಕೆ ಪರವಾಗಿ ಹೋರಾಟ ನಡೆಸಬೇಕಿದೆ. ಜೊತೆಗೆ ಟಿವಿಕೆ ಸರ್ಕಾರವು, ಡಿಎಂಕೆ ಮಾಡಿಕೊಂಡಿದ್ದ ಲೋಪ, ಭ್ರಷ್ಟಾಚಾರವನ್ನು ಎತ್ತಿ ತೋರಿಸುವಾಗಲೂ ಅವರು ತಮ್ಮ ಹೇಳಿಕೆಗಳಿಂದ ಅವನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯವು ಉಂಟಾಗುತ್ತದೆ.
ಏಪ್ರಿಲ್ 23 ಮತ್ತು 29ರಂದು ನಡೆದ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ಪ್ರಸ್ತುತ 59 ಶಾಸಕರನ್ನು ಹೊಂದಿದೆ. ಈ ಹಿನ್ನೆಲೆ ವಿಧಾನಸಭೆಯಲ್ಲಿ ಪ್ರಧಾನ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಇತ್ತೀಚಿನ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಮೈತ್ರಿ ಕೂಟವು ಸರ್ಕಾರ ರಚಿಸಲು ಮುಂದಾಗಿದ್ದು, ಸರ್ಕಾರದ ಲೋಪಗಳನ್ನು ಎತ್ತಿ ಹಿಡಿದು ಹೋರಾಡಲು ಡಿಎಂಕೆ ಎಲ್ಲ ರೀತಿಯಲ್ಲೂ ಸಜ್ಜಾಗುತ್ತಿದೆ.
ಸ್ಟಾಲಿನ್ ಹೀಗೆ ಹೇಳಿದ್ದರು
ಇತ್ತೀಚೆಗೆ ಸ್ಟಾಲಿನ್ ಅವರು ಹೇಳಿದ್ದರು. ವಿಜಯ್ ಅವರ ಹೊಸ ಸರ್ಕಾರವನ್ನು ರಚನೆ ಮಾಡಲಿ. ಅದಾಗಿ ಆರು ತಿಂಗಳವರೆಗೆ ಎಲ್ಲವನ್ನು ನೋಡಿ ನಂತರ ನಾವು ಹೋರಾಟ ಮಾಡ್ತೇವೆ ಎಂದಿದ್ದರು. ಆರು ತಿಂಗಳ ನಂತರ ಯಾವ ರೀತಿ ಕಾರ್ಯಾಚರಣೆ ನಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ,(ಏಜೆನ್ಸೀಸ್).