Mann Ki Baat (ಸಾಂದರ್ಭಿಕ ಚಿತ್ರ)
ನವದೆಹಲಿ: ಭಾರತದ ಭವಿಷ್ಯದ ಯೋಜನೆಗಳಿಗೆ ಅಡಿಪಾಯವಾಗಲಿರುವ 'ಜನಗಣತಿ 2027' ಅಭಿಯಾನಕ್ಕೆ ದೇಶದ ನಾಗರಿಕರು ಸಕ್ರಿಯವಾಗಿ ಸಹಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Mann Ki Baat) ಭಾನುವಾರ (ಏಪ್ರಿಲ್ 26) ಕರೆ ನೀಡಿದ್ದಾರೆ.
ಈ ಬಾರಿಯ ಜನಗಣತಿಯ ವಿಶೇಷತೆಯೆಂದರೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿದಾಗ ಮೊಬೈಲ್ ಅಪ್ಲಿಕೇಶನ್ನೊಂದಿಗೆ ದತ್ತಾಂಶ ಸಂಗ್ರಹಿಸಲಿದ್ದಾರೆ. ಆದಾಗ್ಯೂ, ಈ ಡಿಜಿಟಲ್ ಪದ್ಧತಿಯಿಂದಾಗಿ ದತ್ತಾಂಶ ಸಂಗ್ರಹಣೆಯಲ್ಲಿ ಪಾರದರ್ಶಕತೆ ಹೆಚ್ಚಲಿದ್ದು, ತಪ್ಪುಗಳ ಸಾಧ್ಯತೆ ಕಡಿಮೆಯಾಗಲಿದೆ. ಅಲ್ಲದೆ, ದತ್ತಾಂಶವನ್ನು ಅತ್ಯಂತ ವೇಗವಾಗಿ ಸಂಸ್ಕರಿಸಲು ಮತ್ತು ವಿಶ್ಲೇಷಿಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನ 133 ನೇ ಸಂಚಿಕೆಯಲ್ಲಿ, ಪ್ರಧಾನಿ ಜನರು ತಮ್ಮ ಮಾಹಿತಿಯನ್ನು ಸ್ವತಃ ಅವರೇ ನಮೂದಿಸಿಕೊಳ್ಳಬಹುದು ಎಂದಿದ್ದಾರೆ.
ಗಣತಿದಾರರು ತಮ್ಮ ಮನೆಗಳಿಗೆ ಭೇಟಿ ನೀಡುವ 15 ದಿನಗಳ ಮೊದಲು ಈ ಸೌಲಭ್ಯ ಲಭ್ಯವಿರುತ್ತದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಸಿದ ನಂತರ ಅವರಿಗೆ ಇಮೇಲ್ ಅಥವಾ ಮೊಬೈಲ್ನಲ್ಲಿ ಐಡಿ ಸಿಗುತ್ತದೆ. ಅದನ್ನು ಜನರು ತಮ್ಮ ವಿವರಗಳನ್ನು ಪರಿಶೀಲಿಸಲು ಸಿಬ್ಬಂದಿಗೆ ತೋರಿಸಬಹುದು ಎಂದು ಹೇಳಿದರು.
ಜನಗಣತಿ ಎಂಬುದು ಕೇವಲ ಸರ್ಕಾರಿ ಕೆಲಸವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿ. ನಿಮ್ಮ ಭಾಗವಹಿಸುವಿಕೆ ನಿರ್ಣಾಯಕವಾಗಿದೆ. ನೀವು ಒದಗಿಸುವ ಮಾಹಿಯಿಯನ್ನು ಗೌಪ್ಯವಾಗಿಡಲಾಗುತ್ತದೆ. 2027 ರ ಜನಗಣತಿಯನ್ನು ಯಶಸ್ವಿಗೊಳಿಸೋಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತದ ಪರಮಾಣು ವಿಜ್ಞಾನಿಗಳಿಗೆ ಪ್ರಧಾನಿ ಶ್ಲಾಘನೆ!
ತಮ್ಮ ಮಾಸಿಕ ರೇಡಿಯೋ ಭಾಷಣದಲ್ಲಿ ಪ್ರಧಾನಿ ಮೋದಿ ಕಲ್ಪಾಕಂನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಕಾರ್ಯಾಚರಣೆಯ ನಿರ್ಣಾಯಕ ಹಂತಕ್ಕೆ ತಲುಪಿರುವುದು ದೇಶದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದ್ದಾರೆ. ಆದಾಗ್ಯೂ, ಭಾರತದ ಪರಮಾಣು ವಿಜ್ಞಾನಿಗಳು ದೇಶಕ್ಕೆ ಕೀರ್ತಿ ತಂದಿದ್ದಾರೆ. ಜೊತೆಗೆ ನಾಗರಿಕ ಪರಮಾಣು ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ಬುದ್ಧನ ಬೋಧನೆ ಸ್ಮರಿಸಿದ ಪ್ರಧಾನಿ
ಜಾಗತಿಕ ಅನಿಶ್ಚಿತತೆಯ ನಡುವೆಯೂ ಅವರು ಮತ್ತೊಮ್ಮೆ ಜಗತ್ತಿಗೆ ಭಗವಾನ್ ಬುದ್ಧನ ಆದರ್ಶವನ್ನು ಅನುಸರಿಸಲು ಮೋದಿ ಕರೆ ನೀಡಿದ್ದಾರೆ. ಆದಾಗ್ಯೂ, ಅವರ ಸಂದೇಶಗಳು ವರ್ತಮಾನ ಮತ್ತು ಭವಿಷ್ಯಕ್ಕೂ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಜಾಗತಿಕ ಅನಿಶ್ಚಿತತೆಗೆ ಕಾರಣವಾದ ಮತ್ತು ವಿಶ್ವದ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿದ ಅಮೆರಿಕ-ಇರಾನ್ ಯುದ್ಧವನ್ನು ಅವರು ಉ್ಲಲೇಖಿಸಿದ್ದಾರೆ (ಏಜೆನ್ಸೀಸ್).