T-shirt slogan Job Rejection 
ದೇಶ

'Im too hot for a job' ಎಂಬ ಟೀ ಶರ್ಟ್​ ಧರಿಸಿ ಇಂಟರ್ವ್ಯೂಗೆ ಬಂದ ಯುವತಿ ರಿಜೆಕ್ಟ್; ​Amazon Prime ಸಂದರ್ಶಕಿ ಹೇಳಿದ್ದಿಷ್ಟು

T-shirt slogan Job Rejection: ಉದ್ಯೋಗವನ್ನು ಆಧರಿಸಿ ಸಂದರ್ಶನಕ್ಕೆಂದು ತೆರಳಿದಾಗ ಅಲ್ಲಿ ನಮ್ಮ ವೃತ್ತಿಪರ ಅನುಭವ, ಕೌಶಲ್ಯ, ಮಾಹಿತಿ, ನಮ್ಮ ಶಿಕ್ಷಣ ಎಷ್ಟು ಮುಖ್ಯವೋ. ನಮ್ಮ ನಡೆ-ನುಡಿ, ಹಾವಾ-ಭಾವ, ಉಡುಪು ಕೂಡ ಅಷ್ಟೇ ಮುಖ್ಯವಾದದ್ದು ಎನ್ನುವುದನ್ನು ಅಮೆಜಾನ್ ಪ್ರೈಮ್ ವಿಡಿಯೋ ಕಾರ್ಯನಿರ್ವಾಹಕರೊಬ್ಬರು ಲಿಂಕ್​ಡಿನ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಅವರ ಮಹತ್ವದ ಪೋಸ್ಟ್ ವೈರಲ್ ಆಗಿದೆ.
ಭವಿಷಾ ಜೈನ್ ಅವರು ತಮ್ಮ ಲಿಂಕ್ಡ್‌ಇನ್​ನಲ್ಲಿ ಹಂಚಿಕೊಂಡ ಪೋಸ್ಟ್​ನಲ್ಲಿ ಯುವತಿಯೊಬ್ಬಳು ಟೀ-ಶರ್ಟ್ ಮೇಲಿದ್ದ ಒಂದು ಸ್ಲೋಗನ್‌ನಿಂದಾಗಿ ಕೆಲಸದ ಅವಕಾಶವನ್ನು ಹೇಗೆ ಕಳೆದುಕೊಂಡಳು ಎಂಬುದನ್ನು ವಿವರಿಸಿದ್ದಾರೆ.
ಭವಿಷಾ ಜೈನ್​ ಅವರು ಮೂರು ತಿಂಗಳ ಹಿಂದೆ ತಮ್ಮ ಕ್ರಿಯೇಟಿವ್​ ತಂಡಕ್ಕೆ ಅಭ್ಯರ್ಥಿಗಳ ಸಂದರ್ಶನ ನಡೆಸುತ್ತಿದ್ದರು. ಈ ವೇಳೆ ಯುವತಿಯೊಬ್ಬಳು ಸಂದರ್ಶನಕ್ಕೆ ಬಂದಿದ್ದಳು ನೋಡಲು ಸ್ಮಾರ್ಟ್​ ಆಗಿದ್ದಳು. ಕೆಲಸದ ಅನುಭವವಿತ್ತು. ಸೋಶಿಯಲ್​ ಮೀಡಿಯಾದಲ್ಲಿ 50 ಸಾವಿರಕ್ಕೂ ಹೆಚ್ಚು ಫೋಲೋವರ್ಸ್​ ಹೊಂದಿದ್ದ ಆಕೆಯ ಪ್ರೊಫೈಲ್​ ಭವಿಷ್ಯಾರಿಗೆ ತುಂಬಾನೆ ಇಷ್ಟವಾಗಿತ್ತಂತೆ. ಹೀಗಾಗಿ ಆಕೆಯನ್ನು ಕೆಲಸಕ್ಕೆಂದು ನೇರವಾಗಿ ಇಂಟರ್ವ್ಯೂ ಎದುರಿಸಲು ಆಹ್ವಾನಿಸಿದ್ದರಂತೆ.

ಸಂದರ್ಶನ ಆರಂಭಕ್ಕೂ ಮುನ್ನ ರಿಜೆಕ್ಟ್ ಮಾಡಿದೆ

ಮುಂದುವರೆದು, ಆಕೆ ಸಂದರ್ಶನಕ್ಕೆ ಬಂದಳು. ನಾನು ಅವಳೊಂದಿಗೆ ಸಂದರ್ಶನ ಆರಂಭಿಸಿ, ಮಾತನಾಡುವ ಮುನ್ನವೇ ತಿರಸ್ಕರಿಸಿದೆ. ನಾನು ಆಕೆಯನ್ನು ತಿರಸ್ಕರಿಸಿದ್ದು ಆಕೆ ಮಾಡರ್ನ್ ಬಟ್ಟೆ ಹಾಕಿದ್ದಾಳೆಂದೋ ಅಥವಾ ಫಾರ್ಮಲ್ಸ್ ಧರಿಸಿಲ್ಲ ಎಂದಂತೂ ಅಲ್ಲ. ಆಕೆ ಧರಿಸಿದ್ದ ಟಿ-ಶರ್ಟ್ ಮೇಲೆ ಒಂದು ಸ್ಲೋಗನ್ ಇತ್ತು. ಅದರಲ್ಲಿ 'I’m too hot for a job ಎಂದು ಇತ್ತು. ಈ ಕೆಲಸ ಮಾಡಲು ನಾನು ತುಂಬಾ ಹಾಟ್​ ಎಂದು ಬರೆಯಲಾಗಿತ್ತು. ಇದು ನನಗೆ ಸರಿ ಕಾಣಲಿಲ್ಲ.
ಇದು ಡ್ರೆಸ್​ ಕೋಡ್​​ಗೆ ಸಂಬಂಧಿಸಿದ್ದಲ್ಲ. ನಾವು ಇರುವ ಸಂದರ್ಭ ಮತ್ತು ಜಾಗವನ್ನು ಅರ್ಥಮಾಡಿಕೊಳ್ಳುವ ಜವಾಬ್ದಾರಿ ನಮಗಿರಬೇಕು. ಮದುವೆಗೆ ಹೋಗುವಾಗ ಯಾರೂ ಸ್ವಿಮ್‌ಸೂಟ್ ಧರಿಸುವುದಿಲ್ಲ. ಜಿಮ್‌ಗೆ ಹೋಗುವಾಗ ಯಾರೂ ಸೂಟ್​ ಹಾಕೋಲ್ಲ. ಆ ಕೆಲಸಕ್ಕಿಂತ ನಾನೇ ಶ್ರೇಷ್ಠ ಅಥವಾ ದೊಡ್ಡವಳು ಎಂದು ಅರ್ಥ ಕೊಡುವ ಬಟ್ಟೆಯನ್ನು ಸಂದರ್ಶನದ ದಿನವೇ ಧರಿಸಿ ಬರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಡ್ರೆಸ್ ಕೋಡ್ ಮುಖ್ಯ

"ಸಂದರ್ಶನದಲ್ಲಿ ನಿಮ್ಮ ಪ್ರಭಾವ ಬೀರಲು ನಿಮಗೆ ಕೇವಲ 30 ನಿಮಿಷಗಳು ಸಿಗುತ್ತವೆ. ಆ ಸಮಯದಲ್ಲಿ ನಿಮ್ಮ ಮಾತು, ನಿಮ್ಮ ಜ್ಞಾನ ಎಲ್ಲವೂ ಮುಖ್ಯವಾಗುತ್ತದೆ. ನಿಮ್ಮ ಎದೆಯ ಮೇಲಿರುವ ಬರೆಯಲಾಗಿರುವ ಆ ಸಾಲು ಕೂಡ ನಿಮ್ಮ ವ್ಯಕ್ತಿತ್ವವನ್ನು ಕಮ್ಯುನಿಕೇಟ್ ಮಾಡುತ್ತದೆ. ನೀವು ಬಾಯಿ ಬಿಡುವ ಮೊದಲೇ ನಿಮ್ಮ ಬಟ್ಟೆ ನಿಮ್ಮ ಬಗ್ಗೆ ಮಾತನಾಡುತ್ತದೆ. ಈ ಪ್ರಕರಣದಲ್ಲಿ, ಆಕೆ ತಾನು ಕೆಲಸಕ್ಕಿಂತಲೂ ಮಿಗಿಲಾದವಳು ಎಂದು ಬಟ್ಟೆಯ ಮೂಲಕ ಹೇಳಿದ್ದಳು, ನಾನು ಅದನ್ನೇ ನಂಬಿ ಆಕೆಯನ್ನು ಕೈಬಿಟ್ಟೆ" ಎಂದರು, (ಏಜೆನ್ಸೀಸ್).