ಯಾತ್ರಿಕರಿಗೆ ತೊಂದರೆಯಾದ್ರೆ ಮುಸ್ಲಿಮರ ಮೇಲೆ ಅಪವಾದ ಬರುತ್ತೆ: ಮೆಹಬೂಬಾ ಮುಫ್ತಿ 
ದೇಶ

ಯಾತ್ರಿಕರಿಗೆ ತೊಂದರೆಯಾದ್ರೆ ಮುಸ್ಲಿಮರ ಮೇಲೆ ಅಪವಾದ ಬರುತ್ತೆ: ಅಮರನಾಥ್ ಯಾತ್ರೆ ಬೆನ್ನಲ್ಲೇ ಮೆಹಬೂಬಾ ಮುಫ್ತಿ ಮಹತ್ವದ ಹೇಳಿಕೆ! Mehbooba Mufti on Amarnath Yatra

ಪ್ರಮುಖ ಮುಖ್ಯಾಂಶಗಳು

  • ಜುಲೈ 3 ರಿಂದ ಅಮರನಾಥ್ ಯಾತ್ರೆ ಆರಂಭ
  • ಯಾತ್ರಿಕರಿಗೆ ತೊಂದರೆಯಾದ್ರೆ ಮುಸ್ಲಿಮರ ಮೇಲೆ ಅಪವಾದ ಬರುತ್ತೆ: ಮೆಹಬೂಬಾ ಮುಫ್ತಿ
  • ಅಮರನಾಥ್ ಯಾತ್ರೆಗೆ ಬರುವ ಪ್ರತಿ ಭಕ್ತನ ಸುರಕ್ಷತೆ ನಮ್ಮ ಜವಾಬ್ದಾರಿ
ಜಮ್ಮು-ಕಾಶ್ಮೀರ: ಜುಲೈ 3 ರಿಂದ ಖ್ಯಾತ ಅಮರನಾಥ್​ ಯಾತ್ರೆ ಆರಂಭವಾಗಲಿದ್ದು, ಜಮ್ಮು-ಕಾಶ್ಮೀರಕ್ಕೆ ಬಹಳ ಸಂಖ್ಯೆಯಲ್ಲಿ ಹಿಂದೂಗಳು ಕಾಶ್ಮೀರಕ್ಕೆ ಬರುತ್ತಾರೆ. ಹೀಗಾಗಿ ಅವರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡಬೇಕೆಂದು ಪೀಪಲ್ಸ್ ಡೆಮೊಕ್ರಾಟಿಕ್​ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti on Amarnath Yatra) ಹೇಳಿದ್ದಾರೆ.
ಅಮರನಾಥ್​ ಯಾತ್ರೆಗೆ ದೇಶದ ಮೂಲೆ-ಮೂಲೆಗಳಿಂದ ಭಕ್ತರು ನಮ್ಮೂರಿಗೆ ಬರುತ್ತಾರೆ. ಅವರೊಂದಿಗೆ ನಮ್ಮ ವ್ಯವಹಾರ ಆರೋಗ್ಯಕರವಾಗಿರಬೇಕು, ಇಲ್ಲದಿದ್ದರೆ ಮುಸ್ಲಿಮರಿಂದ ಹಿಂದೂಗಳಿಗೆ ಅಪಾಯವಿದೆ ಎಂಬ ವದಂತಿ ದೇಶದಲ್ಲಿ ಹಬ್ಬುತ್ತದೆ ಎಂದಿದ್ದಾರೆ.

ಯಾತ್ರೆ ಮೂಲಕ ಭ್ರಾತೃತ್ವ ಸಾಧ್ಯ!

ಅಮರನಾಥ್​ ಯಾತ್ರೆಗೆ ಬರುವ ಪ್ರತಿಯೊಬ್ಬ ಭಕ್ತನು ನಮ್ಮ ಕಾಶ್ಮೀರದ ಅತಿಥಿಯಾಗಿರುತ್ತಾನೆ. ಹೀಗಾಗಿ ಪ್ರತಿಯೊಬ್ಬ ಕಾಶ್ಮೀರಿ ಮನೆಗೆ ಬರಲಿರುವ ಅತಿಥಿಯೊಟ್ಟಿಗೆ ಸೌಹಾರ್ದಯುತವಾಗಿ ವರ್ತಿಸಬೇಕೆಂದು ಕೇಳಿಕೊಳ್ಳುತ್ತೆನೆ ಎಂದಿದ್ದಾರೆ.
ಈ ರೀತಿಯ ಧಾರ್ಮಿಕ ಯಾತ್ರೆಗಳ ಮೂಲಕ ಮಾತ್ರ ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಸಾಧಿಸಲು ಸಾಧ್ಯ. ಇದರಿಂದ ಮಾತ್ರ ಹಿಂದೂ-ಮುಸ್ಲಿಮರಲ್ಲಿರುವ ವೈರುಧ್ಯವನ್ನು ಕಡಿಮೆ ಮಾಡಬಹುದೆಂದು ಮುಫ್ತಿ ಹೇಳಿದ್ದಾರೆ.

ಪ್ರತಿ ಯಾತ್ರಿಕನ ಸುರಕ್ಷೆ ನಮ್ಮ ಜವಾಬ್ದಾರಿ

ಕಾಶ್ಮೀರಕ್ಕೆ ಆಗಮಿಸುವ ಪ್ರತಿ ಯಾತ್ರಿಕ ಸಹ ಒಬ್ಬ ರಾಯಭಾರಿ ಇದ್ದಂತೆ. ನಾವು ಅವನನ್ನು ಸರಿಯಾಗಿ ನೋಡಿಕೊಂಡರೆ ನಮ್ಮ ಬಗ್ಗೆ ಅವನ ಊರಿಗೆ ಹೋಗಿ ನಮ್ಮ ಬಗ್ಗೆ ಒಳ್ಳೆಯದನ್ನೇ ಹೇಳುತ್ತಾನೆ. ನಮ್ಮ ವರ್ತನೆ ಕೆಟ್ಟದ್ದಿದ್ದರೆ ಅದು ರಾಜ್ಯಕ್ಕೆ, ಧರ್ಮಕ್ಕೆ ಕೆಟ್ಟ ಹೆಸರನ್ನು ತರುತ್ತದೆ.
ಹೀಗಾಗಿ ಅಮರನಾಥ್ ಯಾತ್ರೆಗೆ ಬರುವ ಪ್ರತಿ ಯಾತ್ರಿಕನ ಸುರಕ್ಷೆ ಕೇವಲ ಭದ್ರತಾ ಸಿಬ್ಬಂದಿಗಳ ಜವಾಬ್ದಾರಿ ಮಾತ್ರವಲ್ಲ, ಪ್ರತಿ ಕಾಶ್ಮೀರಿಯ ಜವಾಬ್ದಾರಿಯಾಗಿದೆ. ಈ ಮೂಲಕ ನಾವು ಕಾಶ್ಮೀರಿ ಮುಸ್ಲಿಮರು ಸ್ನೇಹಮಯಿ ಜೀವಿಗಳೆಂದು ದೇಶಕ್ಕೆ ಮನವರಿಕೆ ಮಾಡಬೇಕೆಂದು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ,(ಏಜನ್ಸೀಸ್​).