ದತ್ತಾತ್ರೇಯ ಹೊಸಬಾಳೆ 
ದೇಶ

ಪಾಕ್ ದಾಳಿ ಮಾಡಿದ್ರೆ, ನಾವು ಸೂಕ್ತ ಪ್ರತಿಕ್ರಿಯೆ ನೀಡಬೇಕು; ಆದರೆ ಮಾತುಕತೆಯ ಬಾಗಿಲು ಮುಚ್ಚಬಾರದು: ದತ್ತಾತ್ರೇಯ ಹೊಸಬಾಳೆ | Dattatreya Hosabale

ನವದೆಹಲಿ: ನೆರೆಯ ಶತ್ರು ದೇಶ ಪಾಕಿಸ್ತಾನವನ್ನು ಚಿಟಿಕೆ ಎಂದು ಬಣ್ಣಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ(Dattatreya Hosabale), ಪಾಕ್ ದಾಳಿ ಮಾಡಿದ್ರೆ, ನಾವು ಸೂಕ್ತ ಪ್ರತಿಕ್ರಿಯೆ ನೀಡಬೇಕು. ಆದರೆ ಮಾತುಕತೆಯ ಬಾಗಿಲು ಮುಚ್ಚಬಾರದು ಎಂದು ಹೇಳಿದ್ದಾರೆ.
ಈ ಕುರಿತು ಮಂಗಳವಾರ(ಮೇ 12) ಪಿಟಿಐ ಜೊತೆ ಮಾತನಾಡಿರುವ ಅವರು, ಪಾಕಿಸ್ತಾನವು ಪುಲ್ವಾಮಾದಂತಹ ಘಟನೆಗಳನ್ನು ಸೃಷ್ಟಿಸಿದ್ರೆ, ನಾವು ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಪ್ರತಿಕ್ರಿಯೆ ನೀಡಬೇಕು. ರಾಷ್ಟ್ರದ ಭದ್ರತೆ ಮತ್ತು ಸ್ವಾಭಿಮಾನವನ್ನು ರಕ್ಷಿಸಬೇಕು. ಅದೇ ಸಮಯದಲ್ಲಿ ನಾವು ಮಾತುಕತೆಯ ಬಾಗಿಲುಗಳನ್ನು ಮುಚ್ಚಬಾರದು. ನಾವು ಯಾವಾಗಲೂ ಸಂವಾದದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿರಬೇಕು ಎಂದಿದ್ದಾರೆ.
ರಾಜತಾಂತ್ರಿಕ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕು. ವ್ಯಾಪಾರ ಮತ್ತು ವಾಣಿಜ್ಯ ಹಾಗೂ ವೀಸಾಗಳನ್ನು ನೀಡುವುದನ್ನು ನಿಲ್ಲಿಸಬಾರದು. ಯಾಕಂದರೆ, ಯಾವಾಗಲೂ ಸಂವಾದಕ್ಕೆ ಒಂದು ಕಿಟಕಿ ಇರಬೇಕು. ಜನರಿಂದ ಜನರಿಗೆ ಇರುವ ಸಂಬಂಧಗಳು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವಾದಿಸಿದ್ದಾರೆ.
ನಾಗರಿಕ ಸಮಾಜದ ಸಂಪರ್ಕಗಳು ಪಾಕಿಸ್ತಾನದೊಂದಿಗಿನ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಅದನ್ನು ಈಗ ಹೆಚ್ಚು ಪ್ರಯತ್ನಿಸಬೇಕು. ಇದೇ ವೇಳೆ ಪಾಕಿಸ್ತಾನದ ಕ್ರೀಡಾಪಟುಗಳು, ವಿಜ್ಞಾನಿಗಳು ಮತ್ತು ನಾಗರಿಕ ಸಮಾಜವು ಶಾಂತಿಗಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ. ಆದರೆ ಪಾಕ್ ಸೈನ್ಯ ವಿಶ್ವಾಸಕ್ಕೆ ಅರ್ಹವಲ್ಲದ್ದು ಎಂದಿದ್ದಾರೆ.
ಕಳೆದ ವರ್ಷ ಏ. 22ರಂದು ಜಮ್ಮು-ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಮೂರ್ನಾಲ್ಕು ಪಾಕ್ ಮೂಲದ ಉಗ್ರರು ಅಮಾಯಕರ ಪ್ರವಾಸಿಗರ ಮೇಲೆ ದಾಳಿ ಗುಂಡು ಹಾರಿಸಿ ಒಟ್ಟು 27 ಮಂದಿಯನ್ನು ಹತ್ಯೆಗೈದಿದ್ದರು. ಅದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಪಾಕ್​ನ ಉಗ್ರರ ಮೂಲಗಳನ್ನು ಗುರಿಯಾಗಿಸಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು (ಏಜೆನ್ಸೀಸ್).