ಅಲಹಾಬಾದ್ ಹೈಕೋರ್ಟ್ 
ದೇಶ

ಪತ್ನಿಯಿಂದಾಗಿ ಕೆಲಸ ಕಳೆದುಕೊಂಡೆರೆ ವಿಚ್ಚೇದನ ಬಳಿಕ ಪತಿ ಜೀವನಾಂಶ ನೀಡುವ ಅಗತ್ಯವಿಲ್ಲ: ಅಲಹಾಬಾದ್ ಹೈಕೋರ್ಟ್​ | High Court

ಲಖನೌ: ಪತ್ನಿಯಿಂದಾಗಿ ಪತಿ ಕೆಲಸ ಕಳೆದುಕೊಂಡರೆ, ವಿಚ್ಚೇದನದ ಬಳಿಕ ಆಕೆಗೆ ಯಾವುದೇ ರೀತಿಯ ಜೀವನಾಂಶ ನೀಡುವ ಅಗತ್ಯವಿಲ್ಲ, ಪತ್ನಿಗೂ ಕೇಳುವ ಹಕ್ಕಿಲ್ಲ ಎಂದು ಶನಿವಾರ(ಜ. 24) ಅಲಹಬಾದ್ ಹೈಕೋರ್ಟ್ ಮಹತ್ವ ತೀರ್ಪು ನೀಡಿದೆ. 
ಹೋಮಿಯೋಪತಿ ವೈದ್ಯ ವೇದ್ ಪ್ರಕಾಶ್ ಸಿಂಗ್​ ಎಂಬುವರನ್ನು ಕೌಟುಂಬಿಕ ಕಲಹದಿಂದಾಗಿ ಅವರ ಕ್ಲಿನಿಕ್​ನಲ್ಲಿಯಢ ಪತ್ನಿಯ ಚಿಕ್ಕಪ್ಪ ಮತ್ತು ಸೋದರ ಮಾವ ಗುಂಡು ಹಾರಿಸಿ ಗಂಭೀರವಾಗಿ ಗಾಯಗೊಳಿಸಿದ್ದರು. ಬೆನ್ನುಮೂಳೆಗೆ ಗುಂಡು ತಗುಲಿದ್ದರಿಂದ ಸ್ಟ್ರೋಕ್​ ಹೊಡೆಯವ ಅಪಾಯದಿಂದ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಬಳಿಕ ಕುಳಿತುಕೊಳ್ಳಲು ಸಾಧ್ಯವಾಗದೇ ತಮ್ಮ ಉದ್ಯೋಗವನ್ನು ಬಿಟ್ಟು ಗಳಿಕೆಯ ಶಕ್ತಿಯನ್ನು ಕಳೆದುಕೊಂಡರು. ಬಳಿಕ ಪತ್ನಿ ಅವರಿಗೆ ವಿಚ್ಚೇದನ ನೀಡಿದರು. ಬಳಿಕ ಜೀವನಾಂಶ ಪಾವತಿಗೆ ಸೂಚಿಸುವಂತೆ ಕುಶಿನಗರ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿತು. ಇದನ್ನು ಪ್ರಶ್ನಿಸಿ ಅಲಹಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದ ಪತ್ನಿ ಜೀವನಾಂಶ ಕೊಡಿಸುಂತೆ ಅರ್ಜಿ ಸಲ್ಲಿಸಿದ್ದರು. ಸುದೀರ್ಘವಾಗಿ ವಿಚಾರಣೆ ನಡೆಸಿದ ಬಳಿಕ ಪತ್ನಿಯಿಂದಾಗಿ ಕೆಲಸ, ದುಡಿಯುವ ಶಕ್ತಿ ಕಳೆದುಕೊಂಡಿದ್ದರೆ ಜೀವನಾಂಶ ಪಾವತಿಸುವ ಅಗತ್ಯವಿಲ್ಲ ಎಂದು ಕುಟುಂಬ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ (ಏಜೆನ್ಸೀಸ್).