ಐಬೊಮ್ಮ ವೆಬ್​ಸೈಟ್ 
ದೇಶ

ತೆಲುಗು ಸಿನಿಮಾಗಳ ಪೈರಸಿ, ಹೈದರಾಬಾದ್ ಪೊಲೀಸರಿಗೆ ಸವಾಲ್ ಹಾಕಿದ್ದ ಐಬೊಮ್ಮ ವೆಬ್​ಸೈಟ್ ನಿರ್ವಾಹಕ ಅರೆಸ್ಟ್| Ibomma website

ಪ್ರಮುಖ ಮುಖ್ಯಾಂಶಗಳು

  • ತೆಲುಗು ಸಿನಿಮಾ ಸೇರಿ ಹೊಸ ಸಿನಿಮಾಗಳನ್ನು ಪೈರಸಿ ಮಾಡ್ತಿದ್ದ ಆರೋಪ
  • ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ಸವಾಲು ಹಾಕಿದ್ದ ಐಬೊಮ್ಮ ನಿರ್ವಾಹಕ
  • ಸಿಸಿಬಿ ಪೊಲೀಸರಿಂದ ಐಬೊಮ್ಮ ವೆಬ್​ಸೈಟ್ ನಿರ್ವಾಹಕ ಇಮ್ಮಡಿ ರವಿ ಬಂಧನ
ಹೈದರಾಬಾದ್: ವಿಶೇಷವಾಗಿ ತೆಲುಗು ಸಿನಿಮಾ ಸೇರಿ ಹೊಸ ಸಿನಿಮಾಗಳನ್ನು ಪೈರಸಿ ಮಾಡಿ ತೆಲುಗು ಸಿನಿಮಾ ನಿರ್ಮಾಪಕರ ಕಣ್ಣಿಗೆ ಗುರಿಯಾಗಿದ್ದ ಮತ್ತು ಸೈಬರ್ ಕ್ರೈಂ ಪೊಲೀಸರಿಗೆ ಸವಾಲು ಹಾಕಿದ್ದ ಐಬೊಮ್ಮ ವೆಬ್​ಸೈಟ್(Ibomma website) ನಿರ್ವಾಹಕನನ್ನು ಕೊನೆಗೂ ಹೈದರಾಬಾದ್​ನ ಕುಕಟ್​ಪಲ್ಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇಮ್ಮಡಿ ರವಿ, ಐಬೊಮ್ಮ ವೈಬ್​ಸೈಟ್ ನಿರ್ವಹಣೆ ಮಾಡ್ತಿದ್ದ ಆರೋಪಿ. ಆರೋಪಿ ಕೆರೆಬಿಯನ್ ದ್ವೀಪದಲ್ಲಿ ವಾಸ ಮಾಡ್ತಿದ್ದು, ಅಲ್ಲಿಂದ ವೆಬ್​ಸೈಟ್ ನಡೆಸುತ್ತಿದ್ದ ಎನ್ನಲಾಗಿದೆ. ನಿನ್ನೆ(ನ. 14) ಫ್ರಾನ್ಸ್​ನಿಂದ ಹೈದರಾಬಾದ್​ಗೆ ಆಗಮಿಸಿದ ಖಚಿತ ಮಾಹಿತಿ ಮೇರೆಗೆ ರವಿಯನ್ನ ಸಿಸಿಬಿ ಪೊಲೀಸರು ಕುಕಟ್​ಪಲ್ಲಿಯಲ್ಲಿ ಪತ್ತೆ ಹಚ್ಚಿದ್ದಾರೆ.
ಐಬೊಮ್ಮ ವೆಬ್​ಸೈಟ್ ತೆಲುಗು ಚಲನಚಿತ್ರ ಪೈರಸಿ ಮತ್ತು ಒಟಿಟಿ ವಿಷಯಗಳಿಂದ ಕೂಡಿದೆ. ಈ ಬಗ್ಗೆ ತೆಲುಗು ಚಲನಚಿತ್ರ ನಿರ್ಮಾಪಕರು ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ನಿರ್ಮಾಪಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು ಆದರೂ ಈವರೆಗೂ ಸಿಕ್ಕಿರಲಿಲ್ಲ.
ತನಿಖೆ ನಡೆಸುವ ವೇಳೆ ಐಬೊಮ್ಮ ನಿವಾರ್ಹಕ ಹೇಳಿಕೆ ಬಿಡುಗಡೆ ಮಾಡಿ, ಧೈರ್ಯವಿದ್ದರೆ ನನ್ನನ್ನು ಹಿಡಿಯುವಂತೆ ಪೊಲೀಸರಿಗೆ ಸವಾಲು ಹಾಕಿದ್ದನು. ಇದು ತೆಲುಗು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನವನ್ನು ಸೃಷ್ಟಿ ಮಾಡಿತ್ತು.
ಈ ಸವಾಲನ್ನು ಸ್ವೀಕರಿದ್ದ ಪೊಲೀಸರು ವಿಶೇಷ ಗಮನ ಹರಿಸಿ ಆರೋಪಿ ರವಿಯನ್ನು ಬಂಧಿಸಿದ್ದಾರೆ. ಆರೋಪಿ ರವಿ ಪತ್ನಿಯಿಂದ ವಿಚ್ಛೇದನ ಪಡೆದು ಒಂಟಿಯಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಬಂಧನದ ಬಳಿಕ ಪೊಲೀಸರು ಅವರ ಖಾತೆಯಲ್ಲಿದ್ದ 3 ಕೋಟಿ ರೂ.ಗಳನ್ನು ಸೀಜ್ ಮಾಡಿದ್ದಾರೆ. ತನಿಖೆ ಮುಂದುವರೆಸಿದ್ದು, ಇದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ (ಏಜೆನ್ಸೀಸ್).