ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ CJI Gavai
ಅಮರಾವತಿ: ದೇಶದಲ್ಲಿರುವ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಕೆನೆ ಪದರವನ್ನು ಹೊರಗಿಡುವ ಪರವಾಗಿ ನಾವು ಇದ್ದೇವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ(CJI Gavai) ಭಾನುವಾರ (ನ.16) ದೃಢಪಡಿಸಿದ್ದಾರೆ.
ಭಾರತ ಮತ್ತು 75 ವರ್ಷಗಳಲ್ಲಿ ಜೀವಂತ ಭಾರತೀಯ ಸಂವಿಧಾನ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಗವಾಯಿ, ದೇಶದಲ್ಲಿರುವ ಮೀಸಲಾತಿ ವಿಷಯಕ್ಕೆ ಬಂದಾಗ ಐಎಎಸ್ ಅಧಿಕಾರಿಯ ಮಕ್ಕಳನ್ನು ಬಡ ಕೃಷಿ ಕಾರ್ಮಿಕರ ಮಕ್ಕಳೊಂದಿಗೆ ಸೇರಿಸಲಾಗುವುದಿಲ್ಲ ಎಂದು ಅಭಿಪ್ರಾಯಟ್ಟಿದ್ದಾರೆ.
ಮುಂದುವರೆದು ಮಾತನಾಡಿದ ಸಿಜೆಐ ಗವಾಯಿ,ಇಂದ್ರ ಸಾಹ್ನಿ ತೀರ್ಪಿನಲ್ಲಿ ಕಂಡುಬರುವಂತೆ ಕೆನೆ ಪದರದ ಪರಿಕಲ್ಪನೆಯನ್ನು ನಾನು ಇನ್ನೂ ಮುಂದೆ ಹೋಗಿ ಅಭಿಪ್ರಾಯಪಟ್ಟಿದ್ದೇನೆ. ಅಲ್ಲದೆ, ದೇಶದಲ್ಲಿರುವ ಇತರ ಹಿಂದುಳಿದ ವರ್ಗಗಳಿಗೆ ಅನ್ವಯವಾಗುವದನ್ನು ಪರಿಶಿಷ್ಟ ಜಾತಿಗಳಿಗೂ ಅನ್ವಯಿಸಬೇಕು. ಈ ವಿಷಯವಾಗಿ ನನ್ನ ತೀರ್ಪನ್ನು ವ್ಯಾಪಕವಾಗಿ ಟೀಕಿಸಲಾಗಿದೆ ಎಂದು ಹೇಳಿದ್ದಾರೆ.
ಆದರೆ, ನ್ಯಾಯಾಧೀಶರು ಸಾಮಾನ್ಯವಾಗಿ ತಮ್ಮ ತೀರ್ಪುಗಳನ್ನು ಸಮರ್ಥಿಸಿಕೊಳ್ಳಬಾರದು ಎಂದು ನಾನು ಭಾವಿಸುತ್ತೇನೆ. ನನ್ನ ನಿವೃತ್ತಿ ಇನ್ನೂ ಒಂದು ವಾರವಿದೆ. ಅಲ್ಲದೆ, ದೇಶದಲ್ಲಿ ಹಲವು ವರ್ಷಗಳಲ್ಲಿ ಸಮಾನತೆ ಮತ್ತು ಮಹಿಳಾ ಸಬಲೀಕರಣವು ವೇಗವನ್ನು ಪಡೆಯುತ್ತಿದೆ. ಈ ವಿಷಯಗಳ ಮೇಲಿನ ತಾರತಮ್ಯವನ್ನು ಬಲವಾಗಿ ಟೀಕಿಸಲಾಗಿದೆ ಎಂದು ಸಿಜೆಐ ತಿಳಿಸಿದ್ದಾರೆ.
ಭಾರತೀಯ ಸಂವಿಧಾನವು ಸ್ಥಿರವಲ್ಲ ಎಂದು ಪ್ರತಿಪಾದಿಸಿದ ಸಿಜೆಐ ಗವಾಯಿ, ಡಾ. ಬಿ.ಆರ್. ಅಂಬೇಡ್ಕರ್ ಯಾವಾಗಲೂ ಇದು ವಿಕಸನಗೊಳ್ಳುವ ದಾಖಲೆಯಾಗಿರಬೇಕು ಎಂದು ಪರಿಗಣಿಸಿದ್ದರು. ಏಕೆಂದರೆ 368 ನೇ ವಿಧಿಯು ಸಂವಿಧಾನದ ತಿದ್ದುಪಡಿಗೆ ಅವಕಾಶ ನೀಡುತ್ತದೆ. ಅಲ್ಲದೆ, ಒಂದೆಡೆ, ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರಗಳು ತುಂಬಾ ಉದಾರವಾಗಿವೆ ಎಂದು ಡಾ. ಅಂಬೇಡ್ಕರ್ ಅವರನ್ನು ಟೀಕಿಸಲಾಯಿತು. ಮತ್ತೊಂದೆಡೆ, ಕೆಲವು ತಿದ್ದುಪಡಿಗಳಿಗೆ ಅರ್ಧದಷ್ಟು ರಾಜ್ಯಗಳು ಮತ್ತು ಸಂಸತ್ತಿನ ಮೂರನೇ ಎರಡರಷ್ಟು ಬಹುಮತದ ಅನುಮೋದನೆ ಅಗತ್ಯವಾಗಿದೆ ಮತ್ತು ಈ ರೀತಿಯಲ್ಲಿ ತಿದ್ದುಪಡಿಯನ್ನು ಸಾಧಿಸುವುದು ಕಷ್ಟಕರವಾಗಿದೆ ಎಂದು ಟೀಕಿಸಲಾಯಿತು ಎಂದು ಸಿಜೆಐ ಹೇಳಿದ್ದಾರೆ.
ಈ ಬಗ್ಗೆ 2024ರಲ್ಲಿ ಹೇಳಿದ್ದ ಸಿಜೆಐ ಗವಾಯಿ, ಪರಿಶಿಷ್ಟ ಜಾತಿಗಳು (SC) ಮತ್ತು ಪರಿಶಿಷ್ಟ ಪಂಗಡಗಳು (ST) ಗಳಲ್ಲಿಯೂ ಸಹ ಕೆನೆ ಪದರವನ್ನು ಗುರುತಿಸಲು ರಾಜ್ಯಗಳು ನೀತಿಯನ್ನು ರೂಪಿಸಬೇಕು.ಅಲ್ಲದೆ, ಈ ಮೊದಲು0 ಮೀಸಲಾತಿಯ ಪ್ರಯೋಜನವನ್ನು ಪಡೆದವರನ್ನು ನಿರಾಕರಿಸಬೇಕು ಎಂದಿದ್ದರು,(ಏಜೆನ್ಸೀಸ್).