ಎಲಾನ್ ಮಸ್ಕ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ 
ದೇಶ

ಮೋದಿ ಆಡಳಿತ ಸಹಿಸಬಲ್ಲೆ, ವಿದೇಶಿಗನ ಸರ್ವಾಧಿಕಾರವಲ್ಲ! ಪ್ರಧಾನಿ ಬೆಂಬಲಕ್ಕೆ ನಿಂತ ಅಸಾದುದ್ದೀನ್​ ಓವೈಸಿ! Asaduddin Owaisi

ಎಲಾನ್ ಮಸ್ಕ್ ಟ್ವೀಟ್‌ಗೆ ಅಸಾದುದ್ದೀನ್ ಓವೈಸಿ ಖಡಕ್ ತಿರುಗೇಟು: ಮೋದಿ ಆಡಳಿತ ಸಹಿಸಬಲ್ಲೆ, ಆದರೆ ವಿದೇಶಿಗನ ಸರ್ವಾಧಿಕಾರವಲ್ಲ ಎಂದ ಎಐಎಂಐಎಂ ಮುಖ್ಯಸ್ಥ. ಅಂಬಾನಿ-ಮಸ್ಕ್ ನಡುವಿನ ಜಟಾಪಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ನವದೆಹಲಿ: ವಿಶ್ವದ ನಂ.1 ಶ್ರೀಮಂತ, ಟೆಸ್ಲಾ, ಸ್ಪೆಸ್​​ ಎಕ್ಸ್​​ ಹಾಗೂ ಸ್ಟಾರ್​ಲಿಂಕ್​ ಕಂಪನಿ ಮಾಲೀಕ ಎಲಾನ್​ ಮಸ್ಕ್​​ ಹಾಗೂ ಭಾರತದ ಉದ್ಯಮಿ ಮುಖೇಷ್​ ಅಂಬಾನಿ ನಡುವಿನ ಜಟಾಪಟಿ ಜೋರಾಗಿ ನಡೆಯುತ್ತಿದೆ.

ಭಾರತದ ಮಾರುಕಟ್ಟೆಯಲ್ಲಿ ತನ್ನ ಸ್ಟಾರ್​ಲಿಂಕ್​ ಪ್ರವೇಶಕ್ಕೆ ಮುಖೇಷ್​ ಅಂಬಾನಿ ಅವಕಾಶ ನೀಡುತ್ತಿಲ್ಲ. ಭಾರತದ ಬಾಸ್​​ ನರೇಂದ್ರ ಮೋದಿಯೋ? ಅಥವಾ ಮುಖೇಷ್​ ಅಂಬಾನಿಯೋ? ಎಂದು ಎಲಾನ್​ ಮಸ್ಕ್​ ಮಾಡಿದ್ದ ಟ್ವೀಟ್​ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಈಗ, ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಹೈದರಾಬಾದ್​ ಸಂಸದ ಅಸಾದುದ್ದೀನ್ ಓವೈಸಿ, ನಾನು ಮೋದಿ ಆಡಳಿತನ್ನು ಬೇಕಾದರೂ ಸಹಿಸಿಕೊಳ್ಳುತ್ತೇನೆ. ಆದರೆ ವಿದೇಶಿಗನ ಸರ್ವಾಧಿಕಾರವನ್ನು ಒಪ್ಪಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ.

ನಮ್ಮ ಪ್ರಧಾನಿ ಬಗ್ಗೆ ಮಾತನಾಡಲು ಅವನ್ಯಾರು?

ಈ ಘಟನೆ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ, ನಮಗೆ ಪ್ರಧಾನಿ ಮೋದಿ ಆಡಳಿತದಿಂದ ಸಾವಿರ ಸಮಸ್ಯೆ ಇರಬಹುದು, ಇದೆ ಕೂಡ. ಹೀಗಾಗಿ ನಾವು ಮೋದಿ ಅವರನ್ನು ವಿರೋಧಿಸುತ್ತಲೇ ಇರುತ್ತೇವೆ. ಆದರೆ, ಯಾರೋ ವಿದೇಶಿಗ ನಮ್ಮ ದೇಶದ ಪ್ರಧಾನಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ. ನಮ್ಮ ಪ್ರಧಾನಿ ಬಗ್ಗೆ ಮಾತನಾಡಲು ಅವನ್ಯಾರು? ಅವನಿಗೇನು ಅಧಿಕಾರವಿದೆ? ಎಂದು ಓವೈಸಿ, ಎಲಾನ್​ ಮೇಲೆ ಹರಿಹಾಯ್ದಿದ್ದಾರೆ.

ನಮ್ಮ ದೇಶದ ಪ್ರಧಾನಿ ಬಗ್ಗೆ ಅದರಲ್ಲೂ, ಬಿಜೆಪಿಯ ಅಧಿನಾಯಕನ ಬಗ್ಗೆ ವಿದೇಶಿ ಬಿಳಿಯಚರ್ಮದೊಬ್ಬ ಮನಸೋ ಇಚ್ಛೆ ಮಾತನಾಡಿರೂ ಈ ಬಿಜೆಪಿಗರೇಕೆ ಸುಮ್ಮನಿದ್ದಾರೆ. ನಿಮಗೆ ಆ ಬಿಳಿ ಚರ್ಮದ ಮಸ್ಕ್​ನಿಂದ ಭಯವಿದೆಯೇ ಎಂದು ಕಿಡಿಕಾರಿದ್ದಾರೆ.

ದೇಶದ ಕಾನೂನು ಪಾಲಿಸಿ: ಅಂಬಾನಿ

ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸಂಪರ್ಕ ಒದಗಿಸುವ ಸ್ಟಾರ್‌ಲಿಂಕ್​ಗೆ ಅನುಮತಿ ನೀಡುವುದನ್ನು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತಡೆದಿದ್ದಾರೆ ಎಂಬ ವಿಶ್ವದ ನಂ.01 ಶ್ರೀಮಂತ ಎಲಾನ್ ಮಸ್ಕ್ ಆರೋಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಕಂಪನಿ, ಸ್ಟಾರ್‌ಲಿಂಕ್‌ಗೆ ಸ್ವಾಗತ, ಆದರೆ ಕಾನೂನನ್ನು ಪಾಲಿಸಲೇಬೇಕು ಎಂದು ತಿರುಗೇಟು ನೀಡಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ರಿಲಯನ್ಸ್​, ಸ್ಟಾರ್‌ಲಿಂಕ್ ಸೇರಿದಂತೆ ಉಪಗ್ರಹ ಸಂವಹನ ಕ್ಷೇತ್ರದಲ್ಲಿನ ಪೈಪೋಟಿಯನ್ನು ಕಂಪನಿ ಸ್ವಾಗತಿಸುತ್ತದೆ. ಜಿಯೋ ಸೇರಿದಂತೆ ಪ್ರತಿಯೊಂದು ಸಂಸ್ಥೆಯೂ ಭಾರತದ ಜನರಿಗೆ ಸೇವೆ ಸಲ್ಲಿಸಬೇಕು ಹಾಗೂ ದೇಶದ ಕಾನೂನುಗಳು ಮತ್ತು ನೀತಿಗಳಿಗೆ ಬದ್ಧವಾಗಿರಬೇಕು ಎಂದು ಹೇಳಿದೆ.

ನೇರವಾರಿ ಎಲಾನ್ ಮಸ್ಕ್​ ಹೇಳಿಕೆ ಉಲ್ಲೇಖಿಸದಿದ್ದರೂ, ರಿಲಯನ್ಸ್ ಮತ್ತು ಭಾರತೀಯ ಮಾರುಕಟ್ಟೆಯ ಬಗ್ಗೆ ಇತ್ತೀಚಿನ ಹೇಳಿಕೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಸತ್ಯಗಳನ್ನು ಹೇಳಲು ಬಯಸುತ್ತೇವೆ. ಸ್ಟಾರ್‌ಲಿಂಕ್‌ನಂತೆಯೇ ಜಿಯೋ ಸಹ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಾಗಿನ ಯೋಜನೆಯೂ ಅಗತ್ಯ ಅನುಮತಿಗಳಿಗಾಗಿ ಕಾಯುತ್ತಿದೆ ಎಂದು ತಿಳಿಸಿದೆ, (ಏಜೆನ್ಸೀಸ್​).