ಸುಮಾರು 180 ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯವೆಸಗಿರುವ ಮೊಹಮ್ಮದ್ ಅಯಾಜ್
- ಅಮರಾವತಿ ಲೈಂಗಿಕ ದೌರ್ಜನ್ಯ ಪ್ರಕರಣ
- ಸುಮಾರು 180 ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯವೆಸಗಿರುವ ಮೊಹಮ್ಮದ್ ಅಯಾಜ್
- ಬ್ರೇಕ್ಅಫ್ ಆದ ನಂತರ ಪ್ಲೇ ಬಾಯ್ ಎಂದು ಪೊಲೀಸ್ ಸ್ಟೇಟ್ಮೆಂಟ್
ಅಮರಾವತಿ: ಸುಮಾರು 180 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸೆಗಿದ ಮೊಹಮ್ಮದ್ ಅಯಾಜ್ (Mohammad Ayaz) ಅಲಿಯಾಸ್ ತನ್ವೀರ್, ನಾನು ಮೊದಲು ಪ್ರೀತಿಸಿದ್ದ ಹುಡುಗಿ ನನ್ನ ಜೊತೆ ಬ್ರೇಕ್ಅಫ್ ಮಾಡಿಕೊಂಡಳು, ನಂತರ ನಾನು ಸ್ರ್ತೀ ಪೀಡಕ (Play boy) ನಾಗಿ ಬದಲಾದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆಂದು ವರದಿಯಾಗಿದೆ.
ನಕಲಿ ಲೈಫ್ಸ್ಟೈಲ್!
ಪೊಲೀಸರ ಪ್ರಾಥಮಿಕ ವರದಿಯಲ್ಲಿ, ಮೊಹಮ್ಮದ್ ಅಯಾಜ್ ಮೊಬೈಲ್ ಫೋನ್ ಅಂಗಡಿಯೊಂದನ್ನು ನಡೆಸುತ್ತಿದ್ದು, ಇನ್ಸ್ಟಾಗ್ರಾಮ್ನಲ್ಲಿ ಇವನಿಗೆ ಸುಮಾರು 18,000 ಹಿಂಬಾಲಕರಿದ್ದಾರೆ. ಇವನು ಮನೆಯವರಿಂದ ಅಥವಾ ತನ್ನ ಗೆಳೆಯರಿಂದ ಹಣವನ್ನು ಪಡೆದುಕೊಂಡು ಸೋಶಿಯಲ್ ಮೀಡಿಯಾನಲ್ಲಿ ವಿಲಾಸಿ, ಐಶಾರಾಮಿ ಜೀವನ ಶೈಲಿ ಹೊಂದಿರುವುದಾಗಿ ಬಿಂಬಿಸುತ್ತಿದ್ದ. ಇವನ ಈ ಜೀವನ ಶೈಲಿಗೆ ಮರಳಾಗುವ ಹುಡುಗಿಯರು ಅಯಾಜ್ನ ಪ್ರೇಮ ಪಾಶಕ್ಕೆ ಬೀಳುತ್ತಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಗೆಳೆಯನೇ ಇವನ ಬಿಸನೆಸ್ ಪಾರ್ಟ್ನರ್!
ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡುತ್ತಿರುವ ಮಹಾರಾಷ್ಟ್ರ ಪೊಲೀಸರಿಗೆ ಈ ಕೃತ್ಯದಲ್ಲಿ ಕೇವಲ ಮೊಹಮ್ಮದ್ ಅಯಾಜ್ ಒಬ್ಬನೇ ಇಲ್ಲ, ಇವನ ಜೊತೆ ಉಜೈರ್ ಖಾನ್ ಎಂಬ ಇನ್ನೊಬ್ಬ 19 ವರ್ಷದ ಹುಡುಗನಿರುವುದು ತಿಳಿದು ಬಂದಿದೆ. ಇವರಿಬ್ಬರು ಅಪ್ರಾಪ್ತ ಬಾಲಕಿಯರನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು, ನಂತರ ಕೆಲ ತಿಂಗಳು ಮಾತಿನಲ್ಲಿ ಮೋಡಿ ಮಾಡಿ, ಆಮೇಲೆ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾಗಿ ತಿಳಿದು ಬಂದಿದೆ.
ಮನೆ ಮೇಲೆ ಬುಲ್ಡೋಜರ್ ಆ್ಯಕ್ಷನ್!
ಲೈಂಗಿಕ ಆರೋಪಿ ಮೊಹಮ್ಮದ್ ಅಯಾಜ್ ವಾಸಿಸುತ್ತಿದ್ದ ಏಕ ಮಹಡಿ ಮನೆ ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ತಿಳಿದು ಬಂದ ಹಿನ್ನಲೆ ಬುಲ್ಡೋಜ್ರ್ ಮೂಲಕ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ಅಧಿಕಾರಿಗಳು ಈ ನೆಲಸಮ ಕಾರ್ಯಾಚರಣೆ ನಡೆಯುತ್ತಿದ್ದ ಸಮಯದಲ್ಲಿ ಬಿಜೆಪಿ ಶಾಸಕ ಪ್ರವೀಣ್ ತಾಯಡೆ ಸ್ಥಳದಲ್ಲಿ ಹಾಜರಿದ್ದು, ಕಾರ್ಯಾಚರಣೆ ಸುಗಮವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ.
180 ಬಾಲಕಿಯನ್ನು ಬಳಸಿಕೊಂಡಿದ್ದ ಪಾಪಿ!
ಸುಮಾರು 180 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಿಗಿ, ಆ ಹುಡುಗಿಯರ ಹಸಿ-ಬಿಸಿ ವಿಡಿಯೋಗಳನ್ನು ಸೆರೆ ಹಿಡಿದುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಪದಲ್ಲಿ ಶನಿವಾರ (ಏ.11) ಅಮರಾವತಿ ಪೊಲೀಸರು ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ (19) ನನ್ನು ಬಂಧಿಸಿದ್ದಾರೆ. ಇವನ ಮೊಬೈಲ್ನಲ್ಲಿ ಸುಮಾರು 350 ಕ್ಕೂ ಅಧಿಕ ಲೈಂಗಿಕ ಕೃತ್ಯಗಳಿಗೆ ಸಂಬಂಧಿಸಿದ ವಿಡಿಯೋಗಳಿದ್ದು, ಕೆಲ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾದ ನಂತರ ಪೊಲೀಸರು ಇತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ,(ಏಜನ್ಸೀಸ್).