ಹೈದರಾಬಾದ್: ತನ್ನ ಸಾಕು ಬೆಕ್ಕು ಸಾವನಪ್ಪಿದ್ದ (Cat death) ಕೆಲವೇ ನಿಮಿಷಗಳಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ಬುಧವಾರ (ಮಾ.18) ಸಂಭವಿಸಿದೆ.
ಘಟನೆ ಏನು?
20 ವರ್ಷದ ವಿಜ್ಞಾನ ಪದವಿ (ಬಿಎಸ್ಸಿ) ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಾಣಪ್ರಿಯ ಬೆಕ್ಕಿನ ಸಾವಿನಿಂದ ತೀವ್ರವಾಗಿ ನೊಂದಿದ್ದಳು. ಬೆಕ್ಕು ಸಾವನ್ನಪ್ಪಿದ್ದ 30 ನಿಮಿಷಗಳಲ್ಲಿ ಮನೆಯಲ್ಲಿದ್ದ ವಿಷಕಾರಿ ವಸ್ತುವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮಗಳು ವಿಷವನ್ನು ಸೇವಿಸುತ್ತಿದ್ದಂತೆಯೇ ಪೋಷಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ವರದಿ ಮಾಡಿವೆ.
ಸಾಕುಪ್ರಾಣಿಗಳು ಕುಟುಂಬದ ಸದಸ್ಯರಂತೆ ಇರುತ್ತವೆ. ಅವುಗಳ ಅಗಲಿಕೆಯು ಮನುಷ್ಯನನ್ನೇ ಕಳೆದುಕೊಂಡಂತೆಯೇ ಅನುಭವಿಸಬಹುದು ಎಂದು ಹಲವಾರು ಸಂಶೋಧನೆಗಳು ತಿಳಿಸುತ್ತವೆ. ಅಂತಹ ಮಾನವೇತರ ಸಂಬಂಧಗಳು ವ್ಯಕ್ತಿಯನ್ನು ಆಳವಾದ ದುಃಖ ಮತ್ತು ಭಾವನಾತ್ಮಕ ಶೂನ್ಯತೆಯೆಡೆಗೆ ತಳ್ಳುತ್ತವೆ. ಆದರಿಂದ ಸಾಕು ಪ್ರಾಣಿಯ ನಷ್ಟಕ್ಕೆ ಸಂಬಂಧಿಸಿದ ದುಃಖವನ್ನು ಒಪ್ಪಿಕೊಳ್ಳುವುದು ಮತ್ತು ಪರಿಹರಿಸುವುದು ಮುಖ್ಯವಾಗುತ್ತದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ, ಸಾಕುಪ್ರಾಣಿ ಮತ್ತು ಅದರ ಮಾಲೀಕರ ನಡುವಿನ ಬಾಂಧವ್ಯವು ದೈಹಿಕ ಮತ್ತು ಭಾವನಾತ್ಮಕ ಆಯಾಮಗಳನ್ನು ಹೊಂದಿರುತ್ತದೆ. ಆದಾಗ್ಯೂ, ಸಾಕುಪ್ರಾಣಿಗಳು ಸಾವನ್ನಪ್ಪಿದಾಗ ಮಾಲೀಕರು ಅನುಭವಿಸುವ ನೋವು, ಆತ್ಮೀಯ ವ್ಯಕ್ತಿಯನ್ನು ಕಳೆದುಕೊಂಡಷ್ಟೇ ತೀವ್ರವಾಗಿರುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ 'Disenfranchised Grief' ಎಂದು ಕರೆಯಲಾಗುತ್ತದೆ ಎಂದು ತಿಳಿಸಿದೆ (ಏಜೆನ್ಸೀಸ್).