ಪತ್ನಿಯ ಮೂಗು ಮತ್ತು ಗಲ್ಲವನ್ನು ಕಚ್ಚಿ ಪರಾರಿಯಾದ ಪತಿರಾಯ
- ಮನೆಯಲ್ಲಿ ಗಂಡ- ಹೆಂಡತಿ ಜಗಳ
- ಪತ್ನಿಯ ಮೂಗು ಮತ್ತು ಗಲ್ಲವನ್ನು ಕಚ್ಚಿ ಪರಾರಿಯಾದ ಪತಿರಾಯ
- ಪೋಲಿಸರಿಂದ ಮುಂದುವರಿದ ಶೋಧಕಾರ್ಯ
ಉತ್ತರ ಪ್ರದೇಶ: ಗಂಡ- ಹೆಂಡರ ಜಗಳ (Husband Wife Conflict) ಉಂಡು ಮಲಗುವ ತನಕ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಹೆಂಡಿಯೊಂದಿಗೆ ಜಗಳವಾಡುವಾಗ ಆಕೆಯ ಮೂಗು ಮತ್ತು ಗಲ್ಲವನ್ನು ಕಚ್ಚಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಏನಿದು ಘಟನೆ?
ಈ ಘಟನೆಯು ಉತ್ತರ ಪ್ರದೇಶದ ಹರಿಪುರದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಫನಾ ಎಂಬಾಕೆ ಫೂಲ್ ಎಂಬಾತನನ್ನು ಹಲವು ವರ್ಷಗಳ ಹಿಂದೆ ವರಿಸಿದ್ದು, ಫನಾನ ತಮ್ಮನ ಪ್ರಕಾರ ಮದುವೆಯಾದ ದಿನದಿಂದ ಇಬ್ಬರಲ್ಲಿ ಹೊಂದಾಣಿಕೆಯೆ ಇರಲಿಲ್ಲ.
ಪ್ರತಿದಿನ ಭಾವ ನನ್ನ ಅಕ್ಕನನ್ನು ಹೊಡೆಯುತ್ತಿದ್ದ ಗುರುವಾರ (ಏ.2) ದಂದು ಫೂಲ್ ಮತ್ತು ಫನಾ ನಡುವೆ ಮತ್ತೆ ಜಗಳ ಪ್ರಾರಂಭವಾಗಿದ್ದು, ಸಿಟ್ಟಿಗೆದ್ದ ಫೂಲ್ ತನ್ನ ಹೆಂಡತಿಯ ಗಲ್ಲ ಮತ್ತು ಮೂಗನ್ನು ಗಟ್ಟಿಯಾಗಿ ಕಚ್ಚಿದ್ದಾನೆ.
ತೀವ್ರ ರಕ್ತಸ್ರಾವ ಪ್ರಾರಂಭವಾಗಿದ್ದೆ, ಮನೆಯಿಂದ ಓಡಿ ಹೋಗಿದ್ದಾನೆ. ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಫನಾಳನ್ನು ನೆರೆ-ಹೊರೆಯವರು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಫನಾಳಿಗೆ ಚಿಕಿತ್ಸೆ ನೀಡಿದ ವೈದ್ಯರು
ಗಾಯಕ್ಕೆ ಸ್ಟಿಚ್ ಹಾಕಿರುವುದಾಗಿ ತಿಳಿಸಿದ್ದಾರೆ. ಆದರೆ ಫನಾಳ ಮುಖ ಸಂಪೂರ್ಣವಾಗಿ ವಿರೂಪವಾಗಿರುವ ಕಾರಣ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಬಹುದು ಎನ್ನುವುದು ವೈದ್ಯರ ಸಲಹೆಯಾಗಿದೆ.
ಪೊಲೀಸರಿಂದ ಪ್ರಕರಣ ದಾಖಲು
ತನ್ನ ಅಕ್ಕಳ ಮೇಲಾದ ದೌರ್ಜನ್ಯವನ್ನು ಖಂಡಿಸಿ ತಮ್ಮ ಪೊಲೀಸರ ಬಳಿ ದೂರನ್ನು ದಾಖಲಿಸಿದ್ದಾನೆ. ಕೌಟುಂಬಿಕ ಹಿಂಸೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಜಾನ್ಸಿ ಪೊಲೀಸರು, ಪರಾರಿಯಾಗಿರುವ ಫೂಲ್ನ ಪತ್ತೆಗಾಗಿ ವಿಶೇಷ ತಂಡವೊಂದನ್ನು ರಚಿಸಿದ್ದಾರೆ. ಆದಷ್ಟು ಬೇಗ ಫೂಲ್ನನ್ನು ಬಂಧಿಸಿ ತಕ್ಕ ಶಿಕ್ಷೆ ನೀಡುವುದಾಗಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ,(ಏಜನ್ಸೀಸ್).