Husband shaves head for him wife
- ಕ್ಯಾನ್ಸರ್ ಚಿಕಿತ್ಸೆಯಿಂದ ಕೂದಲು ಕಳೆದುಕೊಂಡು ನೋವನುಭವಿಸಿದ ಪತ್ನಿ
- ಪತ್ನಿಗೆ ಸಾಥ್ ನೀಡಲು ತಾನು ತಲೆ ಬೋಳಿಸಿಕೊಂಡು ಸರ್ಪ್ರೈಸ್ ಕೊಟ್ಟ ಪತಿ
- ಇಬ್ಬರ ಬಾಂಡಿಂಗ್ ಕಂಡು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿದ ಮೆಚ್ಚುಗೆ
Husband Shaves Head For Him Wife: ಅಕ್ರಮ ಸಂಬಂಧಕ್ಕಾಗಿ ಪತಿ ಪತ್ನಿಯನ್ನೋ ಅಥವಾ ಪತ್ನಿ ತನ್ನ ಸಂಗಾತಿಯನ್ನೋ ಕೊಲೆ ಮಾಡುವ ಪ್ರಸಂಗಗಳು ಈಗ ಹೆಚ್ಚಾಗಿದೆ. ನಿತ್ಯವೂ ದೇಶದ ಒಂದಲ್ಲ ಒಂದು ರಾಜ್ಯದಿಂದ ಇಂತಹ ಸುದ್ದಿಗಳು ಕೇಳಿ ಬರುತ್ತದೆ. ಒಂದಷ್ಟು ಸಮಯವಾದ ಮೇಲೆ ಜೀವನ ಸಂಗಾತಿಗಳು ಬೇಸರವಾಗಿ ಬಿಡುತ್ತಾರೆ ಎನ್ನುವ ಮಾತಿದೆ. ಆದರೆ, ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರುವ ಈ ವಿಡಿಯೋ ಸಾಕಷ್ಟು ಜನರ ಮನಗೆದ್ದಿದೆ. ಗಂಡ-ಹೆಂಡತಿ ಎಂದರೆ ಹೀಗಿರ್ಬೇಕಪ್ಪ ಎನ್ನುವ ಮಾತು ಕೇಳಿಬರುತ್ತಿದೆ. ವಿಡಿಯೋದಲ್ಲಿರುವ ಅಂತಹ ವಿಚಾರ ಏನೂ ನೋಡೋಣ ಬನ್ನಿ.
ನಮರ್ತಾ ನಿತಿನ್ ಗೋಯೆಲ್ ಎನ್ನುವ ಮಹಿಳೆ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಕೀಮೋಥೆರಪಿ ಪಡೆದುಕೊಳ್ಳುತ್ತಿದ್ದಾರೆ. ಆ ಹಿನ್ನೆಲೆ ಆಕೆಯ ಕೂದಲು ಉದುರುತ್ತಿತ್ತು. ಭಾಗಶಃ ಆಕೆ ತಲೆ ಬೋಳಾಗಿತ್ತು. ಇದನ್ನು ಕಂಡ ಆಕೆಯ ಪತಿ ಪತ್ನಿಗೆ ಈ ಬಗ್ಗೆ ಬೇಸರವೇ ಮೂಡಬಾರದು ಎಂದು ಅವರೂ ತಲೆ ಬೋಳಿಸಿಕೊಂಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಆಕೆ ಹೇಳಿದ್ದೇನು?
ನೀವು ನಿಮ್ಮ ತಲೆ ಬೋಳಿಸಿಕೊಂಡಿಲ್ಲ. ನನ್ನ ನೋವನ್ನೇ ನಿಮ್ಮ ಮೇಲೆ ಹೊರೆಸಿಕೊಂಡಿದ್ದೀರಿ. ಎಂದು ವಿಡಿಯೋ ಶೀರ್ಷಿಕೆ ಕೊಟ್ಟಿದ್ದಾರೆ. ನೆಟ್ಟಿಗರು ಇದಕ್ಕೆ ನಿಜವಾಗಿಯೂ ನಿಮ್ಮಿಬ್ಬರದ್ದು ಎಂತಹ ಉತ್ತಮ ಸಂಬಂಧ ಎಂದಿದ್ದಾರೆ. ಮಗೆ ಮತ್ತು ಅವರಿಗೆ ಹೆಚ್ಚಿನ ಶಕ್ತಿ ಸಿಗಲಿ, ಬೇಗ ಗುಣಮುಖರಾಗಿ ಎಂದಿದ್ದಾರೆ.
ನಮ್ರತಾ ಅವರೇ ನಾವೆಲ್ಲ ನಿಮ್ಮ ಜೊತೆಗಿದ್ದೇವೆ. ನೀವು ಖಂಡಿತಾ ಗುಣಮುಖರಾಗುತ್ತೀರಿ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ, ನೀವು ನಿಜಕ್ಕೂ ತುಂಬಾ ಧೈರ್ಯಶಾಲಿ. ಆದರೆ, ನಿಮ್ಮ ಪತಿ ನಡೆ ಮಾತ್ರ ಶ್ಲಾಘನೀಯ. ನೀವು ಬೇಗನೆ ಗುಣಮುಖರಾಗಲಿ ಎಂದು ಹಾರೈಸುತ್ತೇನೆಎಂದು ಮತ್ತೊಬ್ಬರು ಹೇಳಿದ್ದಾರೆ.
ಕ್ಯಾನ್ಸರ್ನಿಂದಾಗುತ್ತಿರುವ ಸಮಸ್ಯೆ ಹಂಚಿಕೊಂಡನಮತ್ರಾ
ನಮತ್ರಾ ಅವರು ತಮ್ಮ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಲೇ ಇದ್ದರು. ಅವರೇ ಕೊಟ್ಟಿರುವ ಮಾಹಿತಿ ಪ್ರಕಾರ ಅವರು ಎರಡನೇ ಬಾರಿಗೆ ಕೀಮೋಥೆರಪಿಗೊಳಗಾದಾಗ ದೈಹಿಕ ಬದಲಾವಣೆಗಳು ಭಾವನಾತ್ಮಕವಾಗಿ ಎಷ್ಟು ಕಷ್ಟಕರವಾಗಿದ್ದವು ಎನ್ನುವುದನ್ನು ವಿವರಿಸಿದ್ದಾರೆ. ಕೂದಲು ಉದುರುವುದು ತೀವ್ರಗೊಂಡಿತು ಮತ್ತು ಅವರ ನೆತ್ತಿಯನ್ನು ಮುಟ್ಟುವುದು ಸಹ ನೋವಿನಿಂದ ಕೂಡಿತು. ಕೂದಲು ಉದುರುವುದು ಚಿಕಿತ್ಸೆಯ ಭಾಗವಾಗಿದೆ ಎಂದು ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).